`ನಟ ಸಲ್ಮಾನ್‌ ಖಾನ್‌ʼನನ್ನು ಪ್ರೀತಿಸುತ್ತಿದ್ದೇನೆ`- 2ನೇ ಮದುವೆ ವದಂತಿ ಮಧ್ಯೆ ಶಾಕಿಂಗ್‌ ಸಂಗತಿ ಬಹಿರಂಗಪಡಿಸಿದ ಸಾನಿಯಾ ಮಿರ್ಜಾ

Thu, 12 Sep 2024-3:54 pm,

ಸದ್ಯ ಸಾನಿಯಾ ಮಿರ್ಜಾ ತನ್ನ ಮಗನೊಂದಿಗೆ ಜೀವನ ನಡೆಸುತ್ತಿದ್ದಾರೆ. ಶೋಯೆಬ್ ಮಲಿಕ್‌ʼನಿಂದ ವಿಚ್ಛೇದನ ಪಡೆದ ನಂತರ ಆಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದರಲ್ಲಿ ಒಂದು ಕ್ರಿಕೆಟಿಗ ಮೊಹಮ್ಮದ್ ಶಮಿ ಜೊತೆ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ಹೇಳಿಕೆ.

 

ಆದರೆ ಇದೀಗ ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಬಗ್ಗೆ ಚರ್ಚೆ ನಡೆಯುತ್ತಿದೆ. ಸಲ್ಮಾನ್ ಖಾನ್ ಮತ್ತು ಸಾನಿಯಾ ಮಿರ್ಜಾ ಅದೆಷ್ಟೋ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ವಿಚಾರವನ್ನಿಟ್ಟುಕೊಂಡೇ, ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆಯೇ? ಎಂಬ ಪ್ರಶ್ನೆ ಎತ್ತಲಾಗಿದೆ.

 

ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ನಡುವಿನ ಸಂಬಂಧ ತುಂಬಾ ನಿಕಟವಾದ್ದು. ಇದೇ ಕಾರಣದಿಂದ ಇದು ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.  

 

ಇವೆಲ್ಲದ ಜೊತೆಗೆ ಸಾನಿಯಾ ಮಿರ್ಜಾ ಮತ್ತು ಸಲ್ಮಾನ್ ಖಾನ್ ಮದುವೆಯಾಗುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು ಆದರೆ ಅದು ವದಂತಿಯಲ್ಲದೆ ಬೇರೇನೂ ಅಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ.

 

ಸಾನಿಯಾ ಮಿರ್ಜಾ ಅವರ ಪುಸ್ತಕ ಬಿಡುಗಡೆಗೆ ಸಲ್ಮಾನ್ ಖಾನ್ ಸಾಕಷ್ಟು ಬೆಂಬಲ ನೀಡಿದ್ದರು. ಇದಲ್ಲದೇ ಲಾಂಚ್ ಆದ ದಿನ ಸಲ್ಮಾನ್ ಖಾನ್ ಕೂಡ ಆಗಮಿಸಿದ್ದರು. ಆ ಸಂದರ್ಭದ ಫೋಟೋಗಳು ಭಾರೀ ವೈರಲ್‌ ಆಗಿತ್ತು.

 

ಇವೆಲ್ಲದರ ಹೊರತಾಗಿ ಭಾರೀ ಸುದ್ದಿಯಾಗಿದ್ದು ಸಾನಿಯಾ ನೀಡಿದ್ದ ಹೇಳಿಕೆ. ಅದೇನೆಂದರೆ,  ಕಾಫಿ ವಿತ್ ಕರಣ್ ಶೋನಲ್ಲಿ ತಾನು ಸಲ್ಮಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿರುವುದು.

 

 ಇದು ಹಳೆಯ ವಿಡಿಯೋ ಆಗಿದ್ದರೂ, ನೆಟಿಜನ್ಸ್ ಈ ವಿಡಿಯೋವನ್ನು ಮುನ್ನೆಲೆಗೆ ತಂದಿದ್ದು, ಸಲ್ಮಾನ್ ಖಾನ್ ಒಂಟಿಯಾಗಿದ್ದು, ಸಾನಿಯಾ ವಿಚ್ಛೇದನ ಪಡೆದಿದ್ದಾರೆ, ಹೀಗಾಗಿ ಇವರಿಬ್ಬರು ಮದುವೆಯಾಗಬೇಕು ಎಂದು ಕಮೆಂಟ್ ಮಾಡಿದ್ದಾರೆ.  

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link