ಅಂದು ಕ್ರೀಡಾ ನಿರೂಪಕಿಯಾಗಿದ್ದ ಈ ಬಾಲಕಿ ಇಂದು ಟೀಂ ಇಂಡಿಯಾದ ಸ್ಟಾರ್ ವೇಗಿಯ ಪತ್ನಿ-5 ಕೋಟಿ ಆಸ್ತಿಯ ಮಾಲಕಿ! ಯಾರೆಂದು ತಿಳಿಯಿತೇ ಈ ಸುಂದರಿ?
ಈ ಫೋಟೋದಲ್ಲಿ ಬಾಲಕಿ ಯಾರೆಂದು ತಿಳಿದಿದೆಯೇ? ಇಲ್ಲವಾದಲ್ಲಿ ಈ ವರದಿಯಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಇವರು ಬೇರಾರು ಅಲ್ಲ, ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಗಣೇಶನ್.
ಬುಮ್ರಾ ಮತ್ತು ಸಂಜನಾ 2021 ರಲ್ಲಿ ವಿವಾಹವಾದರು. ಇವರಿಬ್ಬರಿಗೆ ಮುದ್ದಾದ ಗಂಡು ಮಗುವಿದೆ. ಅಂದಹಾಗೆ ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ ಮೊದಲ ಬಾರಿಗೆ 2017ರಲ್ಲಿ ಐಪಿಎಲ್ ಸಮಯದಲ್ಲಿ ಭೇಟಿಯಾದರು. ಸಂಜನಾ ಅವರು ಸ್ಟಾರ್ ಸ್ಪೋರ್ಟ್ಸ್’ನ ಪ್ರಸಿದ್ಧ ಆಂಕರ್.
ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್’ಗಳನ್ನು ಯಾರ್ಕರ್ ಮೂಲಕ ಬೌಲ್ಡ್ ಮಾಡಿದ ಬುಮ್ರಾ, ಸಂಜನಾ ಮೇಲಿನ ಪ್ರೀತಿಗೆ ಸ್ವತಃ ಕ್ಲೀನ್ ಬೌಲ್ಡ್ ಆಗಿದ್ದು ಸುಳ್ಳಲ್ಲ.
2019ರಲ್ಲಿ ಪ್ರೀತಿಯ ಬಗ್ಗೆ ಒಪ್ಪಿಕೊಂಡ ಈ ಜೋಡಿ ಆ ಬಳಿಕ ಎರಡು ವರ್ಷಗಳ ಕಾಲ ರಹಸ್ಯವಾಗಿ ಡೇಟಿಂಗ್ ಮಾಡಿದ್ದರು. ಆ ಬಳಿಕ 2021 ರಲ್ಲಿ ಇಬ್ಬರೂ ಮದುವೆಯಾಗಲು ನಿರ್ಧರಿಸಿ, ಮಾರ್ಚ್ 15ರಂದು ದಾಂಪತ್ಯಕ್ಕೆ ಕಾಲಿಟ್ಟರು.
ಇನ್ನು ಸಂಜನಾ ಗಣೇಶನ್ ಸ್ಪೋರ್ಟ್ಸ್ ಆಂಕರ್ ಆಗುವ ಮೊದಲು ಮಾಡೆಲಿಂಗ್ ಲೋಕದಲ್ಲೂ ಸಾಕಷ್ಟು ಹೆಸರು ಗಳಿಸಿದ್ದರು. ಪ್ರಸಿದ್ಧ ಶೋ ಮಿಸ್ ಇಂಡಿಯಾದಲ್ಲಿ ಸಂಜನಾ ಫೈನಲ್ ತಲುಪಿದ್ದಾರೆ.