ಸಂಕ್ರಾಂತಿ ದಿನದಿಂದ ಸೂರ್ಯನಂತೆ ಪ್ರಕಾಶಿಸುವುದು ನಾಲ್ಕು ರಾಶಿಯವರ ಅದೃಷ್ಟ
ವೃಷಭ ರಾಶಿ : ಸೂರ್ಯನ ಸಂಚಾರವು ವೃಷಭ ರಾಶಿಯವರ ಮಲಗಿರುವ ಅದೃಷ್ಟವನ್ನು ಬಡಿದೆಬ್ಬಿಸುತ್ತದೆ. ಈ ರಾಶಿಯವರು ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.
ಮಿಥುನ ರಾಶಿ : ಸೂರ್ಯನ ರಾಶಿ ಬದಲಾವಣೆಯಿಂದ ಮಿಥುನ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಎದುರಿಸುತ್ತಿದ್ದ ಹಣದ ಸಮಸ್ಯೆ ದೂರವಾಗಲಿದೆ. ವೃತ್ತಿ ಜೀವನದಲ್ಲಿ ಎದುರಿಸುತ್ತಿದ್ದ ಒತ್ತಡ ದೂರವಾಗುತ್ತದೆ.
ಕರ್ಕಾಟಕ ರಾಶಿ : ಸೂರ್ಯ ಸಂಚಾರವು ಕರ್ಕಾಟಕ ರಾಶಿಯವರ ವೃತ್ತಿಜೀವನದಲ್ಲಿ ಉತ್ತಮ ಸಮಯವನ್ನುತಂದೊಡ್ಡುತ್ತದೆ. ಗೌರವ ಹೆಚ್ಚಾಗಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರಿಗೆ ಲಾಭವಾಗುವುದು. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ.
ಮಕರ ರಾಶಿ : ಸೂರ್ಯ ರಾಶಿ ಬದಲಾಯಿಸಿ ಮಕರ ರಾಶಿ ಪ್ರವೇಶಿಸುವುದರೊಂದಿಗೆ ಮಕರ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ. ಮಕರ ರಾಶಿಯವರ ಆರ್ಥಿಕ ಶ್ತಿತಿ ಸುಧಾರಿಸಲಿದೆ. ಇಲ್ಲಿಯವರೆಗೆ ಅನುಭವಿಸುತ್ತಿದ್ದ ದೈಹಿಕ ಮತ್ತು ಮಾನಸಿಕ ನೋವಿನಿಂದ ಮುಕ್ತಿ ಸಿಗಲಿದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)