ಬಾಲಿವುಡ್‌ನಲ್ಲಿ ʼಸಪ್ತ ಸಾಗರದಾಚೆ ಎಲ್ಲೋʼ: ಕರಣ್ ಜೋಹರ್ ಪಾಲಾಯ್ತು ರಿಮೇಕ್ ರೈಟ್ಸ್!
ನಟ ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಸೈಡ್-ಎನಲ್ಲಿ ರಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದರೇ, ಸೈಡ್ ಬಿನಲ್ಲಿ ಇವರಿಬ್ಬರ ಜೊತೆಗೆ ನಟಿ ಚೈತ್ರಾ ಜೆ ಆರ್ಚಾರ್ ಸಹ ಜೊತೆಯಾಗಿದ್ದಾರೆ.
ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಖರೀದಿಸಲು ಮುಂದಾಗಿದ್ದು, ಇದೇ ವಿಚಾರಕ್ಕೆ ನಿರ್ಮಾಪಕ ರಕ್ಷಿತ್ ಶೆಟ್ಟಿಯನ್ನು ಸಂಪರ್ಕಿಸಿದ್ದಾರೆ ಎಂಬ ವಿಷಯ ಹರಿದಾಡುತ್ತಿತು.
ಧರ್ಮ ಪ್ರೊಡೆಕ್ಷನ್‌ನ ಕರಣ್ ಜೋಹರ್ ಇದೀಗ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ರಿಮೇಕ್ ಮಾಡುವ ಆಸಕ್ತಿ ಹೊಂದಿದೆ ಎನ್ನಲಾಗ್ತಿದ್ದು, ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಈಗಾಗಲೇ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಸ್ಟ್ರೀಮ್ ಆಗುತ್ತಿದ್ದು, ಸೈಡ್ ಬಿ ಪ್ರಸ್ತುತ ಎಲ್ಲಾ 4 ದಕ್ಷಿಣ ಭಾಷೆಗಳಲ್ಲಿ ರಿಲೀಸ್ ಆಗಿದೆ.
ಸೈಡ್-ಎ ಈಗಾಗಲೇ ಓಟಿಟಿಯಲ್ಲಿ ಹಿಂದಿ ಡಬ್ ಇರುವ ಕಾರಣ, ಇದೀಗ ಕರಣ್ ಜೋಹರ್ ಹಿಂದಿಯಲ್ಲಿ ಈ ಸಿನಿಮಾ ರಿಮೇಕ್ ಮಾಡುವ ಯೋಜನೆಯಿಂದ ಯಾವುದೇ ಪ್ರಯೋಜನವಾಗೋದಿಲ್ಲ ಎಂಬ ಮಾತುಗಳು ಕೇಳಿ ಬರ್ತಿದೆ.
ಈ ನಿರ್ಧಾರದ ಬಗ್ಗೆ ನೆಟ್ಟಿಗರೊಬ್ಬರು ಒಳ್ಳೆಯ ಚಿತ್ರವನ್ನು ಹಾಳು ಮಾಡೋದು ಬೇಡ ಎಂದು ಕಮೆಂಟ್ ಮಾಡಿದ್ದು, ಇದಲ್ಲದೆ, ಸೈಡ್ ಎ ಹಿಂದಿ ಆಡಿಯೊದೊಂದಿಗೆ ಈಗಾಗಲೇ ಒಟಿಟಿಯಲ್ಲಿ ಲಭ್ಯವಿರುವ ಹಾಗೆ ಸೈಡ್ ಬಿ ಸಹ ಥಿಯೇಟರ್‌ಗಳಿಗೆ ಅಥವಾ ಒಟಿಟಿಗೆ ಡಬ್ ಮಾಡುವ ಯೋಜನೆ ಇರುತ್ತೆ ಎಂದಿದ್ದಾರೆ.
ಸದ್ಯ ಈ ಸಿನಿಮಾವನ್ನು ಕರಣ್ ರಿಮೇಕ್ ಮಾಡುವುದರಲ್ಲಿ ಯಾವ ಅರ್ಥವೂವಿರದೇ, ಈ ಸಿನಿಮಾ ಮೂಲಕ ನಾಯಕ ನಟ ರಕ್ಷಿತ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್‌ಗೆ ಸಿಕ್ಕಿರುವ ಪ್ರೀತಿಯನ್ನು ಗಮನಿಸಿದರೆ, ಪಾತ್ರಗಳನ್ನು ಮರುಸೃಷ್ಟಿ ಮಾಡೋದು ಅವಿವೇಕದ ಕೆಲಸ ಎಂದು ಅನೇಕರು ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಡೈರೆಕ್ಟರ್ ಹೇಮಂತ್ ರಾವ್ ಸೈಡ್ ಬಿಯಲ್ಲಿ ಮತ್ತೊಂದು ಭಾವತೀವ್ರತೆಯ ವಿಷಯ ಹೇಳುತ್ತಿದ್ದು, ಸೈಡ್ ಎ ಚಿತ್ರದ ಮುಂದುವರೆದ ಭಾಗ ಇದಾಗಿದ್ದರೂ ಸಹ ಇಲ್ಲಿ ಇನ್ನೊಂದು ಟ್ರ್ಯಾಕ್ ಓಪನ್ ಆಗುತ್ತಿದೆ. ಸೈಡ್ ಎ ಕೊನೆಯಲ್ಲಿ ಇದರ ಝಲಕ್ ಕೊಟ್ಟು ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.