ರಣಬೀರ್‌ನನ್ನು ಮದುವೆ, ಕಾರ್ತಿಕ್ ಆರ್ಯನ್ ಜೊತೆ ಅದನ್ನ ಮಾಡ್ತಾಳಂತೆ.. ಈ ಸ್ಟಾರ್ ನಟಿ..!
ರಣಬೀರ್ ಕಪೂರ್ ಅವರನ್ನು ಬಾಲಿವುಡ್ ಬ್ರೇಕಪ್ ಬಾಯ್ ಅಂತ ಕರೆಯಲಾಗುತ್ತದೆ. ಆದರೆ, ಈ ನಟನನ್ನು ಮದುವೆಯಾಗಲು ಸಾಕಷ್ಟು ಜನ ನಟಿಯರು ರೆಡಿಯಾಗಿದ್ದರು.
ಮಹಿಳಾ ಅಭಿಮಾನಿಗಳಿಗೂ ಸಹ ರಣಬೀರ್ ಅಂದ್ರೆ ತುಂಬಾ ಇಷ್ಟ. ಅಷ್ಟೆ ಅಲ್ಲ, ಬಿಟೌನ್ ನಟ ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಬೇಕು ಅಂತ ಆಸೆ ನಟಿಯೊಬ್ಬರು ಹೇಳಿಕೊಂಡಿದ್ದರು..
ಬಾಲಿವುಡ್ ಸ್ಟಾರ್ ನಟಿ ಸಾರಾ ಅಲಿ ಖಾನ್ ತಮ್ಮ ತಂದೆ ಸೂಪರ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಜೊತೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.
ಈ ವೇಳೆ ನಟಿ, ರಣಬೀರ್ ಕಪೂರ್ ಅವರನ್ನು ಮದುವೆಯಾಗಬೇಕು, ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡಬೇಕು ಅಂತ ಹೇಳಿಕೊಂಡಿದ್ದರು.
ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಏಕೈಕ ಪುತ್ರಿ ಸಾರಾಗೆ ಕಾರ್ತಿಕ್ ಆರ್ಯನ್ ಅವರ ಉದ್ದದ ಸ್ಪೈಕ್ ಕೂದಲು ಅಂದ್ರೆ ಇಷ್ಟವಂತೆ.
ಈ ಸಂದರ್ಶನ ಬಳಿಕ ಸಾರಾ ಅಲಿ ಖಾನ್ ಕಾರ್ತಿಕ್ ಜೊತೆ ತುಂಬಾ ಕ್ಲೋಸ್ ಆಗಿದ್ದರು. ಅವರಿಬ್ಬರೂ ಮದುವೆಯಾಗ್ಬೇಕು ಅಂತ ಅಂದುಕೊಂಡಿದ್ದರು. ಆದ್ರೆ ಕಾರಣಾಂತರದಿಂದ ಜೋಡಿ ದೂರವಾಗಿದೆ.