ಅಂಬಾನಿ ಮದುವೆ ಸಂಭ್ರಮ ಹೆಚ್ಚಿಸಿದ ಸಾರಾ ಸೌಂದರ್ಯ..! ಸಚಿನ್‌ ಪುತ್ರಿಯ ಫೋಟೋಸ್‌ ಇಲ್ಲಿವೆ

Sun, 14 Jul 2024-6:10 pm,

ಕಳೆದ ವರ್ಷ ಡಿಸೆಂಬರ್‌ನಲ್ಲಿ ಅನಂತ್‌ ಅಂಬಾನಿ ನಿಶ್ಚಿತಾರ್ಥ ನಡೆದಿತ್ತು, ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ವಿವಾಹ ಪೂರ್ವ ಕಾರ್ಯಕ್ರಮ ನಡೆದಿದ್ದವು.   

ಜುಲೈ 12 ರಂದು, ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ, ಅವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಅವರ ಮುದ್ದು ಮಗಳು ಸಾರಾ ತೆಂಡೂಲ್ಕರ್ ವಿಶೇಷ ಆಕರ್ಷಣೆಯಾದರು.  

ಸಾರಾ ತೆಂಡೂಲ್ಕರ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ರಾಯಲ್ ಲುಕ್‌ನಲ್ಲಿ ಮಿಂಚಿದ್ದರು. ಇತ್ತೀಚೆಗೆ ತಮ್ಮ ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.   

ಅನಂತ್ ಮತ್ತು ರಾಧಿಕಾ ಮದುವೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರಾ ಭಾಗವಹಿಸಿದ್ದರು.  

ಸಾರಾ ತೆಂಡೂಲ್ಕರ್ ತಿಳಿ ಗುಲಾಬಿ ಬಣ್ಣದ ಲೆಹೆಂಗಾದಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು. ಅವರು ಧರಿಸಿದ್ದ ಆಭರಣಗಳು ಮತ್ತು ಬಳೆಗಳು ಸಾರಾ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವಂತಿದ್ದವು. ಸದ್ಯ, ಈ ಸುಂದರಿಯ ಸೌಂದರ್ಯ ನೋಡಿ ಅಭಿಮಾನಿಗಳು ಹೊಗಳುತ್ತಿದ್ದಾರೆ..  

ಸಾರಾ ತೆಂಡೂಲ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. Instagram ನಲ್ಲಿ ಸುಮಾರು 7 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.   

ನಿಯಮಿತವಾಗಿ ತಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಖುಷಿ ವಿಚಾರಗಳು, ಉದ್ಯಮಕ್ಕೆ ಸಂಬಂಧಿಸಿ ಫೋಟೋಸ್‌ ಹಂಚಿಕೊಳ್ಳುತ್ತಾರೆ.. ಸಾರಾ ತೆಂಡೂಲ್ಕರ್ ವೈದ್ಯಕೀಯ ಶಿಕ್ಷಣವನ್ನು ಓದುತ್ತಿದ್ದಾರೆ.  

ಸಾರಾ ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಸಹ ಹೆಸರುವಾಸಿ. ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಾರೆ. ಸಚಿನ್‌, ಪತ್ನಿ ಅಂಜಲಿ ಮತ್ತು ಸಾರಾ ತೆಂಡೂಲ್ಕರ್ ಅವರೊಂದಿಗೆ ಅಂಬಾನಿ ವಿವಾಹದಲ್ಲಿ ಭಾಗವಹಿಸಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link