Sarfaraz Khan Love Story: ಸರ್ಫರಾಜ್ ಖಾನ್ ಪತ್ನಿ ಯಾರು? ಈತ ಆ `ಕಾಶ್ಮೀರಿ ಬ್ಯೂಟಿ`ಗೆ ಮನಸೋತಿದ್ದು ಹೇಗೆ?!
ರಾಜ್‌ಕೋಟ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ರಾಜ್‌ಕೋಟ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಸರ್ಫರಾಜ್ ಖಾನ್ ಜೊತೆಗೆ ಅವರ ಪತ್ನಿ ಕೂಡ ಸುದ್ದಿಯಲ್ಲಿದ್ದರು. ಅವರು ತಮ್ಮ ಪತಿಗೆ ಫ್ಲೈಯಿಂಗ್ ಕಿಸ್ ನೀಡುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ..
ರೊಮಾನಾ ಜಹೂರ್ ಕಾಶ್ಮೀರದ ಶೋಪಿಯಾ ಜಿಲ್ಲೆಯ ನಿವಾಸಿ. ವರದಿಗಳ ಪ್ರಕಾರ, ರೋಮಾ ಬಿಎಸ್ಸಿ ವಿದ್ಯಾರ್ಥಿನಿ.. ರೊಮಾನಾ ದೆಹಲಿಯಲ್ಲಿ ಓದುತ್ತಿರುವ ಕಾಲೇಜಿನಲ್ಲಿಯೇ ಸರ್ಫರಾಜ್ ಅವರ ಸಹೋದರಿ ಕೂಡ ಓದುತ್ತಿದ್ದಾರೆ ಮತ್ತು ಇಬ್ಬರೂ ಉತ್ತಮ ಸ್ನೇಹವನ್ನು ಹೊಂದಿದ್ದಾರೆ.
ಸರ್ಫರಾಜ್ ಸಹೋದರಿಯಿಂದ ಬೆಳೆದ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿತ್ತು.. ಮೊದಲ ನೋಟದಲ್ಲೇ ಕಾಶ್ಮೀರಿ ಸುಂದರಿಗೆ ತಮ್ಮ ಹೃದಯವನ್ನು ನೀಡಿದ್ದರಂತೆ ಸರ್ಫರಾಜ್..
ಇದಾದ ನಂತರ ಸರ್ಫರಾಜ್ ಕುಟುಂಬವು ರೊಮಾನಾ ಅವರ ಮನೆಗೆ ಮದುವೆ ಪ್ರಸ್ತಾವನೆಗೆ ಹೋಗಿ.. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಡೆಯಿತು.
ಸರ್ಫರಾಜ್ ಖಾನ್ ಮತ್ತು ರೊಮಾನಾ ಜಹೂರ್ 6 ಆಗಸ್ಟ್ 2023 ರಂದು ಕಾಶ್ಮೀರದಲ್ಲಿ ವಿವಾಹವಾಗಿದ್ದಾರೆ.