Sarfaraz Khan: ಆಯ್ಕೆಗಾರರನ್ನು ತರಾಟೆಗೆ ತೆಗೆದುಕೊಂಡ ಸರ್ಫರಾಜ್ ಖಾನ್; ವಿಡಿಯೋ ಹಂಚಿಕೊಂಡು ಆಕ್ರೋಶ!

Sun, 25 Jun 2023-4:25 pm,

ದೇಶೀಯ ಕ್ರಿಕೆಟ್‍ನಲ್ಲಿ ಸಾಕಷ್ಟು ರನ್ ಮಳೆ ಸುರಿಸಿರುವ ಸರ್ಫರಾಜ್ ಖಾನ್ ಮೊದಲ ಅವಕಾಶಕ್ಕಾಗಿ ಇನ್ನೂ ಕಾಯಬೇಕಾಗಿದೆ. ವೆಸ್ಟ್ ಇಂಡೀಸ್  ಸರಣಿಗೆ ಭಾರತ ತಂಡ ಆಯ್ಕೆಯಾದ 1 ದಿನದ ನಂತರ ಸರ್ಫರಾಜ್ Instagramನಲ್ಲಿ ಸ್ಟೋರಿ ಹಂಚಿಕೊಂಡಿದ್ದಾರೆ.

ಸರ್ಫರಾಜ್ ಖಾನ್ ಇನ್ಸ್ಟಾಗ್ರಾಮ್‍ನಲ್ಲಿ ವಿಡಿಯೋ ಸ್ಟೋರಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸರ್ಫರಾಜ್ ಕಳೆದ ರಣಜಿ ಟ್ರೋಫಿ ಋತುವಿನ ತಮ್ಮ ಬ್ಯಾಟಿಂಗ್ ಹೈಲೈಟ್ಸ್ ಹಾಕಿದ್ದಾರೆ. ಈ ಪೋಸ್ಟ್ ಗೆ ಅವರು ‘One love’ ಎಂದು ಕ್ಯಾಪ್ಶನ್ ಬರೆದಿದ್ದಾರೆ.

Sarfaraz Khan's latest Instagram Story!#SarfarazKhan #indvwi #TeamIndia pic.twitter.com/dzLTfifqZC

— Mohid Khan (@mohidkhan1619) June 25, 2023

ಸರ್ಫರಾಜ್ ಖಾನ್ ಕಳೆದ ರಣಜಿ ಟ್ರೋಫಿ ಋತುವಿನ 9 ಇನ್ನಿಂಗ್ಸ್‌ಗಳಲ್ಲಿ 92.66 ಸರಾಸರಿಯಲ್ಲಿ 556 ರನ್ ಗಳಿಸಿದ್ದರು. ಈ ವೇಳೆ ಸರ್ಫರಾಜ್ 3 ಶತಕ ಹಾಗೂ 1 ಅರ್ಧ ಶತಕ ಸಿಡಿಸಿದ್ದರು.

ಸರ್ಫರಾಜ್ ಖಾನ್ ಇಲ್ಲಿಯವರೆಗೆ 37 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 79.65 ಸರಾಸರಿಯಲ್ಲಿ 3,505 ರನ್ ಗಳಿಸಿದ್ದಾರೆ. 26 ಲಿಸ್ಟ್ A ಪಂದ್ಯಗಳಲ್ಲಿ ಅವರು 39.08 ಸರಾಸರಿಯಲ್ಲಿ 469 ರನ್ ಗಳಿಸಿದ್ದಾರೆ.

ಸರ್ಫರಾಜ್ ಖಾನ್ 88 ಟಿ-20 ಪಂದ್ಯಗಳನ್ನಾಡಿದ್ದು, 1,124 ರನ್ ಗಳಿಸಿದ್ದಾರೆ. ಸರ್ಫರಾಜ್ ಖಾನ್ ಐಪಿಎಲ್ 2023ರಲ್ಲಿ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದರು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link