ಬಿಗ್‌ ಬಾಸ್‌ ನಲ್ಲಿ ಮೊದಲ ದಿನವೇ ಕಣ್ಣೀರಿಟ್ಟ ಗೌತಮಿ ಜಾಧವ್.. ಅಸಲಿ ʻಸತ್ಯʼ ತಿಳಿದು ಫ್ಯಾನ್ಸ್‌ ಬೇಸರ !

Mon, 30 Sep 2024-10:58 am,

ʻಸತ್ಯʼ ಸೀರಿಯಲ್‌ ನಟಿ ಗೌತಮಿ ಜಾಧವ್‌ ಮೊದಲ ದಿನವೇ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. 

ನಟಿ ಗೌತಮಿ ಜಾಧವ್‌ ತಮ್ಮ ಕುರಿತ ಆ ನಿಜವನ್ನು ಜನರ ಮುಂದೆ ಬಹಿರಂಗ ಪಡಿಸಲು ಇಷ್ಟವಿರದೇ ಕಣ್ಣೀರು ಹಾಕಿದ್ದಾರೆ. 

ಗೌತಮಿ ಜಾಧವ್‌ ವೀಕ್ಷಕರು ಅಂದುಕೊಂಡಂತಲ್ಲ. ಅವರು ಬೇರೆ ರೀತಿಯೇ ಇದ್ದಾರೆ. ಇದನ್ನು ತಿಳಿದ ಜನರು ಸಹ ಬೇಸರ ಹೊರ ಹಾಕುತ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ರ ಮನೆಯಲ್ಲಿ ಮೊದಲ ದಿನ ರಾತ್ರಿ ಗೌತಮಿ ತಮ್ಮ ವಿಗ್‌ ತೆಗೆದಿದ್ದಾರೆ. ಈ ವೇಳೆ ನಾನು ಜನರಿಗೆ ಈ ರೀತಿ ಕಾಣಲು ಇಷ್ಟ ಪಡುವುದಿಲ್ಲ ಎಂದು ಅಳುತ್ತಿದ್ದಾರೆ.

ಅನೇಕರು ಅಂದುಕೊಂಡಂತೆ ಗೌತಮಿ ಬಾಯ್‌ಕಟ್‌ ಹೊಂದಿಲ್ಲ. ಇದು ಸತ್ಯ ಸೀರಿಯಲ್‌ಗಾಗಿ ಧರಿಸುತ್ತಿದ್ದ ವಿಗ್‌ ಆಗಿದೆ.  

ಬಿಗ್‌ ಬಾಸ್‌ ಮನೆಗೆ ವಿಗ್ ಧರಿಸಿ ಸತ್ಯ ಲುಕ್‌ನಲ್ಲೇ ಎಂಟ್ರಿ ಕೊಟ್ಟಿದ್ದರು. ಆದರೆ ನಟಿ ಗೌತಮಿ ಜಾಧವ್‌ ಸುಂದರವಾದ ಉದ್ದ ದಪ್ಪ ಕೂದಲನ್ನು ಹೊಂದಿದ್ದಾರೆ.

ಗೌತಮಿ ಈಗ ಮೊದಲ ದಿನದ ರಾತ್ರಿ ಮೇಕಪ್‌ ರಿಮೂವ್‌ ಮಾಡುವ ವೇಳೆ ವಿಗ್‌ ತೆಗೆದಿದ್ದಾರೆ. ಗೌತಮಿಯನ್ನು ಡೇರ್‌ ಡೆವಿಲ್ ಲುಕ್‌ನಲ್ಲೇ ಇಷ್ಟಪಟ್ಟಿದ್ದ ಫ್ಯಾನ್ಸ್‌ ಇದನ್ನು ಕಂಡು ಕೊಂಚ ಬೇಸರಗೊಂಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link