ಶನಿ ಮತ್ತು ಚಂದ್ರನ ಸಂಯೋಗ: ಈ ರಾಶಿಯ ಜನರಿಗೆ ಹಣದ ಕೊರತೆಯಿಂದ ಎದುರಾಗಲಿದೆ ಬಹುದೊಡ್ಡ ಸಂಕಷ್ಟ!!
![ಚಂದ್ರ-ಶನಿ ಸಂಯೋಗ Moon Saturn Conjunction 2025](https://kannada.cdn.zeenews.com/kannada/sites/default/files/2025/01/27/489160-moon-saturn-1.png?im=FitAndFill=(500,286))
ಜಾತಕದಲ್ಲಿ ಶನಿಯ ಸ್ಥಾನವು ಉತ್ತಮವಾಗಿದ್ದರೆ ಆ ರಾಶಿಯ ಜನರು ಸಂತೋಷದ ಜೀವನ ನಡೆಯುತ್ತಾರೆ. ಮಾರ್ಚ್ ತಿಂಗಳಲ್ಲಿ ಶನಿಯು ತನ್ನ ರಾಶಿಯನ್ನು ಬದಲಾಯಿಸುತ್ತದೆ. ಮೀನ ರಾಶಿಯಲ್ಲಿ ಸಾಗುವ ಶನಿ ಚಂದ್ರನನ್ನು ಭೇಟಿ ಮಾಡಲಿದೆ. ಈ ಸಂಯೋಗವು ಎಲ್ಲಾ 12 ರಾಶಿಗಳ ಮೇಲೂ ಆಳ ಪರಿಣಾಮ ಬೀರುತ್ತದೆ. ಹಾಗಾದ್ರೆ ಶನಿ-ಚಂದ್ರ ಸಂಯೋಗವು ಯಾವ ದಿನ ಸಂಭವಿಸುತ್ತದೆ? ಈ ಸಂಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
![ಯಾವ ರಾಶಿಯವರು ಜಾಗರೂಕರಾಗಿರಬೇಕು? Moon Saturn Conjunction 2025](https://kannada.cdn.zeenews.com/kannada/sites/default/files/2025/01/27/489161-moon-saturn-2.png?im=FitAndFill=(500,286))
ಚಂದ್ರ-ಶನಿ ಸಂಯೋಗವು ಮಾರ್ಚ್ 28ರಂದು ಸಂಜೆ 4.47ಕ್ಕೆ ನಡೆಯಲಿದೆ. ಅಂದು ಚಂದ್ರನು ಮೀನ ರಾಶಿಯನ್ನು ಪ್ರವೇಶಿಸುತ್ತಾನೆ. ಚಂದ್ರನು ತನ್ನ ರಾಶಿಯನ್ನು ಬದಲಾಯಿಸಿದ ಒಂದು ದಿನದ ನಂತರ ಮಾರ್ಚ್ 29ರ ರಾತ್ರಿ 11.01ಕ್ಕೆ ಶನಿಯು ಸಹ ಮೀನ ರಾಶಿಗೆ ಸಾಗುತ್ತಾನೆ. ಚಂದ್ರ-ಶನಿಯ ಸಂಯೋಗವು ಮಾರ್ಚ್ 29ರಂದು ಸಂಜೆ 04.47ಕ್ಕೆ ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಈ ಒಂದು ಸಂಯೋಗದಿಂದ ಯಾವ ರಾಶಿಯವರು ಜಾಗರೂಕರಾಗಿರಬೇಕು ಅನ್ನೋದರ ಬಗ್ಗೆ ತಿಳಿಯಿರಿ.
![ಮೇಷ ರಾಶಿ Moon Saturn Conjunction 2025](https://kannada.cdn.zeenews.com/kannada/sites/default/files/2025/01/27/489162-moon-saturn-3.png?im=FitAndFill=(500,286))
ಚಂದ್ರ ಮತ್ತು ಶನಿಯ ಸಂಯೋಗವು ಮೇಷ ರಾಶಿಯ ಜನರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಕೆಲಸದ ಸ್ಥಳದಲ್ಲಿ ವಿವಾದ ಉಂಟಾಗಬಹುದು. ಇದರಿಂದ ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ತಪ್ಪು ತಿಳುವಳಿಕೆಯಿಂದ ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದೆ. ಯಾವುದೇ ತಪ್ಪು ನಿರ್ಧಾರದಿಂದ ಉದ್ಯಮಿಗಳು ಆರ್ಥಿಕ ನಷ್ಟ ಅನುಭವಿಸಬಹುದು. ವಿವಾಹಿತರ ಸಂಬಂಧ ನಿಮ್ಮ ತಪ್ಪುಗಳಿಂದ ಮುರಿದು ಬೀಳಲಿದೆ. ಮುಂಬರುವ ದಿನಗಳಲ್ಲಿ ಕುಟುಂಬಸ್ಥರ ಆರೋಗ್ಯ ಉತ್ತಮವಾಗಿರುವುದಿಲ್ಲ. ಹೀಗಾಗಿ ನೀವು ಈ ಎಲ್ಲಾ ವಿಷಯಗಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು.
ಮೀನ ರಾಶಿಯಲ್ಲಿ ಚಂದ್ರ ಮತ್ತು ಶನಿಯ ಸಂಯೋಗವು ಮಿಥುನ ರಾಶಿಯವರ ಮೇಲೆ ಅಶುಭ ಪರಿಣಾಮ ಬೀರುತ್ತದೆ. ನಿಮ್ಮ ವೈಯಕ್ತಿಕ ಜೀವನದಲ್ಲಿ ಒತ್ತಡದ ವಾತಾವರಣವಿರುತ್ತದೆ. ಅನಗತ್ಯ ವೆಚ್ಚಗಳು ಹೆಚ್ಚಾಗಲಿವೆ. ಹಳೆಯ ಹೂಡಿಕೆಗಳಿಂದ ಉದ್ಯಮಿಗಳು ಭಾರೀ ನಷ್ಟ ಅನುಭವಿಸುತ್ತಾರೆ. ಉದ್ಯಮಿಗಳು ಭವಿಷ್ಯದಲ್ಲಿ ಸಾಲ ಮರುಪಾವತಿಸುವ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಸಾಲ ತೆಗೆದುಕೊಳ್ಳುವುದನ್ನು ಆದಷ್ಟು ತಪ್ಪಿಸಬೇಕು. ಕೆಲವು ಆರೋಗ್ಯ ಸಮಸ್ಯೆಗಳು ವಯಸ್ಸಾದವರನ್ನು ಕಾಡಬಹುದು. ಕೆಲವು ಕಾರಣಗಳಿಗೆ ನೀವು ಕೂಡಿಟ್ಟ ಹಣ ಖರ್ಚಾಗಬಹುದು.
ಚಂದ್ರ ಮತ್ತು ಶನಿಯ ಸಂಯೋಗದ ಅಶುಭ ಪರಿಣಾಮ ಸಿಂಹ ರಾಶಿಯ ಜನರ ಮೇಲೂ ಬೀಳಲಿದೆ. ಹತ್ತಿರದ ಸಂಬಂಧಿಗಳ ಕಾರಣದಿಂದ ನಿಮ್ಮ ಮನೆಯ ವಾತಾವರಣ ಹದಗೆಡಬಹುದು. ನಿಮ್ಮ ವೃತ್ತಿ ಜೀವನದಲ್ಲಿ ಹಠಾತ್ ಅಡೆತಡೆಗಳು ಎದುರಾಗುತ್ತವೆ. ಬಡ್ತಿ ಅಥವಾ ಹೊಸ ಉದ್ಯೋಗ ಸಿಗುವಲ್ಲಿ ವಿಳಂಬವಾಗಬಹುದು. ಈ ಅವಧಿಯಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಹೆಚ್ಚಿರುವುದರಿಂದ ವ್ಯವಹಾರದಲ್ಲಿ ನೀವು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)