ಕಷ್ಟಗಳಿಂದ ಬೆಂದು ಹೋಗಿರುವ ಈ ರಾಶಿಯವರ ಜೀವನದಲ್ಲಿ ಸಂಪತ್ತಿನ ಸುಧೆ ಹರಿಸಲಿದ್ದಾನೆ ಶನಿ ಮಹಾತ್ಮ !ಹೆಜ್ಜೆ ಹೆಜ್ಜೆಯಲ್ಲಿಯೂ ಜೊತೆ ನಿಂತು ಕಾಯುವನು ಛಾಯಾಪುತ್ರ
ಶನಿದೇವ ಈಗ ತನ್ನ ಮೂಲತ್ರಿಕೋನ ರಾಶಿ,ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ.ಬರೋಬ್ಬರಿ 30 ವರ್ಷಗಳ ನಂತರ ಶನಿಗ್ರಹ ಈ ರಾಶಿಯನ್ನು ಪ್ರವೇಶಿಸಿರುವುದು.
ವಕ್ರ ನಡೆಯಲ್ಲಿರುವ ಶನಿದೇವ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ನೇರ ನಡೆ ಆರಂಭಿಸುತ್ತಾನೆ.ಇದು ಕೆಲವು ರಾಶಿಯವರ ಜೀವನದ ಮೇಲೆ ಭಾರೀ ಶುಭ ಫಲ ಬೀರಲಿದೆ. ಹೆಜ್ಜೆ ಹೆಜ್ಜೆಯಲ್ಲಿಯೂ ಇವರಿಗೆ ಪ್ರಗತಿ ಕಂಡು ಬರುವುದು.
ವೃಷಭ ರಾಶಿ : ವೃತ್ತಿ ಮತ್ತು ವ್ಯವಹಾರದಲ್ಲಿ ಧನಾತ್ಮಕ ಪ್ರಭಾವವನ್ನು ಪಡೆಯಬಹುದು.ಇಲ್ಲಿಯವರೆಗೆ ಸೋತು ಕಂಗಾಲಾಗಿದ್ದ ನೀವು ಇನ್ನು ಗೆಲುವಿನ ಹಾದಿಯಲ್ಲಿಯೇ ನಡೆಯುವಿರಿ. ನಷ್ಟಗಳೆಲ್ಲಾ ಲಾಭದ ರೂಪ ಪಡೆಯುವುದು. ಹಣದ ಕೊರತೆ ಶಾಶ್ವತವಾಗಿ ನೀಗುವುದು.
ಮಿಥುನ ರಾಶಿ :ಕಷ್ಟಗಳು ಕಳೆದು ಇನ್ನು ಅದೃಷ ನಿಮ್ಮ ಬೆನ್ನು ಹತ್ತುವುದು.ಜೀವನದಲ್ಲಿ ಹಣದ ಹೊಳೆ ಹರಿಯುವುದು.ಮಾಡುವ ಕೆಲಸದಲ್ಲಿ ಪ್ರಗತಿಯಾಗುವುದು.ಆರ್ಥಿಕ ಲಾಭ ಹೆಚ್ಚಾಗಲಿದೆ.ಗೌರವ ಹೆಚ್ಚಾಗುವುದು.
ಕುಂಭ ರಾಶಿ :ಕುಂಭ ರಾಶಿಯವರ ಪ್ರತಿ ಹೆಜ್ಜೆಯಲ್ಲಿಯೂ ಶನಿಎವ ಜಿತೆಗಿದ್ದು ಕಾಯುತ್ತಾನೆ.ಶನಿ ಸಾಡೇಸಾತಿ ನಡೆಯುತ್ತಿದ್ದರೂ ಭಯ ಪಡಬೇಕಿಲ್ಲ. ನಿಮ್ಮ ಅಧಿಪತಿಯೇ ಆಗಿರುವುದರಿಂದ ಶನಿ ಮಹಾತ್ಮ ನಿಮ್ಮನ್ನು ಅತಿಯಾಗಿ ಕಾಡುವುದಿಲ್ಲ.
ಸೂಚನೆ : ಈ ಲೇಖನದಲ್ಲಿರುವ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಿ ನಿಮಗೆ ಒದಗಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ZEE NEWS ಇದಕ್ಕೆ ಹೊಣೆಯಲ್ಲ.