Shani Ast: 9 ದಿನಗಳ ಬಳಿಕ ಅಸ್ತಮಿಸಲಿದ್ದಾನೆ ಶನಿ, 33 ದಿನಗಳವರೆಗೆ 5 ರಾಶಿಗಳ ಜನರಿಗೆ ಭಾರಿ ಸಂಕಷ್ಟ

Sun, 22 Jan 2023-1:31 pm,

1. ಮೇಷ ರಾಶಿ: ಮೇಷ ಜಾತಕದವರ ದಶಮ ಭಾವದಲ್ಲಿ ಈ ಶನಿಯ ಅಸ್ತ ಸಂಭವಿಸಲಿದೆ. ಇದು ಕರ್ಮ, ಸಾಮಾಜಿಕ ಜೀವನ ಹಾಗೂ ವೃತ್ತಿಪರ ಜೀವನದ ಭಾವ ಎಂದು ಹೇಳಲಾಗುತ್ತದೆ. ಶನಿಯ ಈ ಅಸ್ತದಿಂದ ನಿಮ್ಮ ಜೀವನದಲ್ಲಿ ಸಂಕಷ್ಟಗಳು ಎದುರಾಗಲಿವೆ. ವೃತ್ತಿಪರ ಜೀವನದಲ್ಲಿಯೂ ಕೂಡ ಸಾಕಷ್ಟು ಹಲ್ಚಲ್ ಇರಲಿದೆ. ಆರ್ಥಿಕವಾಗಿ ದೊಡ್ಡ ಹಾನಿ ಎದುರಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಹಣ ಹೂಡಿಕೆ ಮಾಡದೆ ಇರುವುದು ಉತ್ತಮ. ವೈವಾಹಿಕ ಜೀವನದಲ್ಲಿಯೂ ಕೂಡ ಸಂಕಷ್ಟಗಳು ತಲೆದೂರಲಿವೆ. ಶನಿವಾರ ಹಣ್ಣುಗಳನ್ನು ದಾನ ಮಾಡಿ.  

ಕರ್ಕ ರಾಶಿ: ಕರ್ಕ ರಾಶಿಯವರಿಗೆ 33 ದಿನಗಳು ನೋವಿನಿಂದ ಕೂಡಿರುತ್ತವೆ. ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಿ. ಬಾಳಸಂಗಾತಿಯೊಂದಿಗೆ ಜಗಳ ಹೆಚ್ಚಾಗಬಹುದು. ಈ ಸಮಯದಲ್ಲಿ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ಯಾವುದೇ ಹೊಸ ಕೆಲಸ ಪ್ರಾರಂಭಿಸದಿರುವುದು ಉತ್ತಮ. ಶನಿವಾರದಂದು ಸುಂದರಕಾಂಡವನ್ನು ಪಠಿಸಿ ಮತ್ತು ಹನುಮನನ್ನು ಪೂಜಿಸಿ.  

ಸಿಂಹ ರಾಶಿ: ಶನಿಯು ನಿಮ್ಮ ಜಾತಕದ ಆರನೇ ಭಾವದಲ್ಲಿ ಅಸ್ತಮಿಸಲಿದ್ದಾನೆ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯವು ಹದಗೆಡಬಹುದು. ಈಗಾಗಲೇ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ರೋಗಗಳ ಮೇಲಿನ ಖರ್ಚು ಅಧಿಕವಾಗಿರುತ್ತದೆ. ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ಮಹಿಳೆಯರು ತಮ್ಮ ತಾಯಿಯ ಕಡೆಯಿಂದ ಕೆಲ ಕೆಟ್ಟ ಸುದ್ದಿಗಳನ್ನು ಪಡೆಯಬಹುದು. ಶನಿವಾರದಂದು ಉಪವಾಸ ಮಾಡಿ ಮತ್ತು ಶನಿ ದೇವರನ್ನು ಆರಾಧಿಸಿ.  

ವೃಶ್ಚಿಕ ರಾಶಿ: ಈ 33 ದಿನಗಳಲ್ಲಿ ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ವ್ಯಾಪಾರದಲ್ಲಿ ಯಾವುದೇ ಹೊಸ ಪ್ರಯೋಗವನ್ನು ತಪ್ಪಿಸಿ. ಹಣವನ್ನು ಬುದ್ಧಿವಂತಿಕೆಯಿಂದ ಬಳಸಿ. ವ್ಯಾಪಾರದ ದೃಷ್ಟಿಯಿಂದ, ನೀವು ಕಡಿಮೆ ದೂರ ಪ್ರಯಾಣಿಸಬೇಕಾಗಬಹುದು. ಈ ಪ್ರಯಾಣದಲ್ಲಿ ವಿಶೇಷ ಕಾಳಜಿ ವಹಿಸಿ. ಕುಟುಂಬ ಸದಸ್ಯರೊಂದಿಗೆ ಅರ್ಥಹೀನ ವಾಗ್ವಾದಕ್ಕೆ ಇಳಿಯಬೇಡಿ. ಶನಿವಾರದಂದು ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.  

ಕುಂಭ ರಾಶಿ : ಕುಂಭ ರಾಶಿಯವರು ಈ 33 ದಿನಗಳು ತುಂಬಾ ಜಾಗರೂಕರಾಗಿರಬೇಕು. ಶನಿದೇವನು ನಿಮ್ಮ ರಾಶಿಯಲ್ಲಿಯೇ ನೆಲೆಸಿದ್ದಾನೆ ಎಂಬುದನ್ನು ಮರೆಯಬೇಡಿ. ಇಂತಹ ಪರಿಸ್ಥಿತಿಯಲ್ಲಿ, ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಕೆಲಸ ಮಾಡುವವರು, ಕಚೇರಿಯಲ್ಲಿ ಅಧಿಕಾರಿಗಳಿಂದ ಒತ್ತಡವನ್ನು ಎದುರಿಸಬೇಕಾಗಬಹುದು. ಜೀವನ ಸಂಗಾತಿಯೊಂದಿಗೆ ಜಗಳವಾಗುವ ಸಾಧ್ಯತೆ ಇದೆ. ಉದ್ಯೋಗ ಬದಲಾಯಿಸುವ ಮುನ್ನ ಹಲವು ಬಾರಿ ಯೋಚಿಸಿ. ವೃತ್ತಿ ಸಂಬಂಧಿತ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬುದ್ಧಿವಂತಿಕೆಯಿಂದ ಕೆಲಸ ಮಾಡಿ. ಉದ್ಯಮಿಗಳು ಯಾವುದೇ ರೀತಿಯ ಹೂಡಿಕೆ ಮಾಡಬಾರದು. ಶನಿವಾರದಂದು ಉದ್ದಿನ ಬೇಳೆ ದಾನ ಮಾಡಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link