ಸ್ವರಾಶಿಯಲ್ಲಿ ಕರ್ಮ ಫಲದಾತ ಶನಿಯ ನೇರನಡೆ, ಧನದ ಅಧಿದೇವತೆಯ ಕೃಪೆಯಿಂದ ಪಾರ ಧನ-ಸಂಪತ್ತು ಪ್ರಾಪ್ತಿ!
Saturna Straignt Move 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಮ ಫಲದಾತ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ಕುಂಭ ರಾಶಿಯಲ್ಲಿ ತನ್ನ ನೇರನಡೆಯನ್ನು ಆರಂಭಿಸಲಿದ್ದಾನೆ. ಶನಿಯ ಈ ನೇರನಡೆ ಒಟ್ಟು 3 ರಾಶಿಗಳ ಜಾತಕದವರಿಗೆ ಭಾಗ್ಯವನ್ನೇ ಬೆಳಗಳಿದ್ದು, ಧನದ ಅಧಿದೇವತೆಯ ಕೃಪೆಯಿಂದ ಈ ರಾಶಿಗಳ ಜನರಿಗೆ ಅಪಾರ ಸಿರಿಸಂಪತ್ತು ಪ್ರಾಪ್ತಿಯಾಗಲಿದೆ.
ಮೇಷ ರಾಶಿ. ಶನಿ ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ತನ್ನ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ಆದಾಯದ ಹೊಸ ಮೂಲಗಳು ಕೂಡ ನಿಮ್ಮ ಪಾಲಿಗೆ ಸೃಷ್ಟಿಯಾಗಲಿವೆ. ಹೀಗಾಗಿ ಶನಿ ಮಾರ್ಗಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ನಿಮ್ಮ ಹಲವು ಯೋಜನೆಗಳು ಈ ಅವಧಿಯಲ್ಲಿ ಪೂರ್ಣಗೊಲ್ಲಳಿವೆ. ವ್ಯಾಪಾರ ವರ್ಗದ ಜನರಿಗೆ ಮಹತ್ವದ ಡೀಲ್ ಕುದುರುವ ಸಾಧ್ಯತೆ ಇದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಅಪಾರ ಲಾಭ ಪ್ರಾಪ್ತಿಯಾಗಲಿದೆ. ಈ ಅವಧಿಯಲ್ಲಿ ನಿಮಗೆ ಬರಬೇಕಾದ ಹಣ ನಿಮ್ಮತ್ತ ಮರಳಲಿದೆ. ವೃತ್ತಿ ಜೀವನದಲ್ಲಿ ನಿಮಗೆ ಸಿಗಬೇಕಾದ ಅವಕಾಶ ಸಿಗಲಿದೆ. ಷೇರುಮಾರುಕಟ್ಟೆ, ಲಾಟರಿ ಮಾಧ್ಯಮದ ಮೂಲಕ ಆಕಸ್ಮಿಕ ಧನ ಪ್ರಾಪ್ತಿಯಾಗುವ ಸಾಧ್ಯತೆ ಇದೆ.
ವೃಷಭ ರಾಶಿ: ಶನಿ ದೇವನ ನೇರನಡೆ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರವಾಗಿರಲಿದೆ. ಏಕೆಂದರೆ ಶನಿ ದೇವ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ನೇರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ನಿಮ್ಮ ಆದಾಯ ಹೆಚ್ಚಾಗಳಿದ್ದು, ಜೀವನೋಪಾಯದ ಸೌಕರ್ಯ ಹೆಚ್ಚಾಗಲಿವೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಈ ಸಮಯ ಸಾಕಷ್ಟು ಅದ್ಭುತವಾಗಿರಲಿದೆ. ತಂಜೆಯ ಜೊತೆಗಿನ ನಿಮ್ಮ ಸಂಬಂಧ ಗಟ್ಟಿಯಾಗೊಳ್ಳಲಿದೆ.
ಮಿಥುನ ರಾಶಿ: ಶನಿದೇವ ಮಾರ್ಗಿಯಾಗುವುದು ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕವಾಗಿರಲಿದೆ. ಏಕೆಂದರೆ ಶನಿ ನಿಮ್ಮ ರಾಶಿಯ ಭಾಗ್ಯ ಸ್ಥಾನದಲ್ಲಿ ನೇರನಡೆ ಆರಂಭಿಸುತ್ತಿದ್ದಾನೆ. ಕೆಲಸದ ನಿಮಿತ್ತ ನಿಮಗೆ ಯಾತ್ರಾ ಸಂಭವಿಸುವ ಸಾಧ್ಯತೆ ಇದೆ. ಎ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ನಿಂತುಹೋದ ಕೆಲಸ-ಕಾರ್ಯಗಳು ಶನಿ ಕೃಪೆಯಿಂದ ಮತ್ತೆ ಆರಂಭಗೊಲ್ಲಳಿವೆ. ಹೊಸಯೋಜನೆಯನ್ನು ಮಾಡುವಲ್ಲಿ ಯಶಸ್ವಿಯಾಗುವಿರಿ. ಹೂಡಿಕೆಯಿಂದ ಲಾಭ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಪರೀಕ್ಷೆಯಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)