ತಪ್ಪು ಮಾಡಿದ್ರೂ ಈ ರಾಶಿಯವರನ್ನ ಬಿಟ್ಟುಕೊಡಲ್ಲ ಶನಿದೇವ! ಅಷ್ಟೈಶ್ವರ್ಯ ಕರುಣಿಸಿ ಜೀವನ ಬೆಳಗುತ್ತಾನೆ ಸೂರ್ಯಪುತ್ರ!
ಶನಿದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಜೀವಿಗಳಿಗೆ ಅವರವರ ಕರ್ಮಕ್ಕನುಗುಣವಾಗಿ ತಕ್ಕ ಪ್ರತಿಫಲವನ್ನು ಕೊಡುತ್ತಾನೆ ಸೂರ್ಯಪುತ್ರ. ಶನಿದೇವಸಾಮಾನ್ಯವಾಗಿ ಶಾಂತವಾಗಿರುತ್ತಾರೆ. ಆದರೆ ಯಾರ ಮೇಲಾದರೂ ಕೋಪಗೊಂಡರೆ, ತನ್ನ ವಕ್ರ ದೃಷ್ಟಿ ಮೂಲಕ ನಾಶಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ಇನ್ನು ಶನಿ ಅತ್ಯಂತ ನಿಧಾನವಾಗಿ ಸಾಗುವ ಗ್ರಹಗಳಾಗಿವೆ. ಈಗ 30 ವರ್ಷಗಳ ನಂತರ ಜೂನ್ 17 ರಂದು ಶನಿದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಇದರಿಂದಾಗಿ ಕೆಲವು ರಾಶಿಗಳಿಗೆ ಸಂತೋಷ ಮತ್ತು ದುಃಖ ಎರಡೂ ಪ್ರಾಪ್ತಿಯಾಗುತ್ತದೆ. ಆದರೆ 3 ರಾಶಿಗಳಿಗೆ ಲಾಭ ಮತ್ತು ಸಂತೋಷವನ್ನು ಶನಿದೇವ ಕರುಣಿಸುತ್ತಾನೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ.
ಮಿಥುನ ರಾಶಿ: ಈ ರಾಶಿಯವರ ಜಾತಕದ ಒಂಬತ್ತನೇ ಭಾಗದಲ್ಲಿ ಶನಿ ದೇವ ಹಿಮ್ಮುಖವಾಗಿ ಸಾಗಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗದಲ್ಲಿ ನಿರತರಾಗಿರುವವರಿಗೆ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ಸಂಶೋಧನಾ ಕಾರ್ಯದಲ್ಲಿ ತೊಡಗಿರುವ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನವನ್ನು ಹೆಚ್ಚಾಗುವ ಸಾಧ್ಯತೆಯಿದೆ.
ಸಿಂಹ ರಾಶಿ: ಶನಿ ದೇವ ಈ ರಾಶಿಯ ಏಳನೇ ಭಾಗದಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಇದರಿಂದಾಗಿ ಈ ರಾಶಿಯಲ್ಲಿ ಶಶರಾಜ ಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮದಿಂದ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಹಣ ಗಳಿಸುತ್ತಾನೆ. ಅವಿವಾಹಿತರಿಗೆ ಮದುವೆಗೆ ಸಂಬಂಧಗಳು ಬರಬಹುದು. ಪಾಲುದಾರಿಕೆ ಕೆಲಸದಲ್ಲಿ ಉತ್ತಮ ಲಾಭ ದೊರೆಯಲಿದೆ.
ಮಕರ ರಾಶಿ: ಜ್ಯೋತಿಷಿಗಳ ಪ್ರಕಾರ, ಶನಿ ದೇವ ಮಕರ ರಾಶಿಯವರಿಗೆ ಸಂಪತ್ತಿನ ಸಿರಿಯನ್ನೇ ಕರುಣಿಸಲಿದ್ದಾನೆ. ಆಕಸ್ಮಿಕ ಮೂಲಗಳಿಂದ ಹಣ ಬರುವ ಸಾಧ್ಯತೆಗಳು ಸೃಷ್ಟಿಯಾಗುತ್ತವೆ. ವ್ಯಾಪಾರದಲ್ಲಿ ತೊಡಗಿರುವ ಜನರ ಲಾಭವು ಹೆಚ್ಚಾಗುತ್ತದೆ ಮತ್ತು ಅವರ ಆರ್ಥಿಕ ಸ್ಥಿತಿಯು ಉತ್ತಮವಾಗಿರುತ್ತದೆ.