Saturn Retrograde 2024: ಸಾಡೇಸಾತಿ, ಧೈಯಾದಿಂದ ಬಳಲುತ್ತಿರುವ ಈ ರಾಶಿಯವರ ಮೇಲೆ ಶನಿಯ ವಕ್ರಕಣ್ಣು!
ಶನಿಯ ಸಾಡೇ ಸಾತಿಯು ಏಳೂವರೆ (7.6 ತಿಂಗಳು) ವರ್ಷಗಳವರೆಗೆ, ಶನಿ ಧೈಯಾ ಎರಡೂವರೆ ವರ್ಷದವರೆಗೆ (2.6 ತಿಂಗಳು) ಮತ್ತು ಮಹಾದಶಾ 19 ವರ್ಷಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಶನಿಯು ಯಾವುದೇ ವ್ಯಕ್ತಿಯನ್ನು ರಾಜನಿಂದ ಬಡವನಾಗಿ ಮತ್ತು ಬಡವನನ್ನು ರಾಜನಾಗಿ ಮಾಡುವ ಶಕ್ತಿಯನ್ನು ಹೊಂದಿರುತ್ತಾನೆ.
ಶನಿಯು ಕುಂಭದಲ್ಲಿರುವುದರಿಂದ ಪ್ರಸ್ತುತ ಶನಿಯ ಸಾಡೇಸಾತಿ ೩ ರಾಶಿಗಳಲ್ಲಿ ನಡೆಯುತ್ತಿದೆ. ಮಕರ ರಾಶಿಯವರಿಗೆ ೩ನೇ ಅಥವಾ ಕೊನೆಯ ಹಂತವು ಮಕರ ರಾಶಿಯವರಿಗೆ, ಶನಿಯ ೨ನೇ ಹಂತವು ಕುಂಭ ರಾಶಿಯವರಿಗೆ ಮತ್ತು ಮೊದಲನೇ ಹಂತವು ಮೀನ ರಾಶಿಯವರಿಗೆ ನಡೆಯುತ್ತಿದೆ. ಮಕರ, ಕುಂಭ ಮತ್ತು ಮೀನ ರಾಶಿಯ ಜನರು ಹಿಮ್ಮುಖ ಶನಿಯ ಸ್ಥಿತಿಯಲ್ಲಿ ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಕುಂಭದಲ್ಲಿ ಶನಿಯ ಸಂಕ್ರಮಣದಿಂದ ಶನಿ ಧೈಯಾವು ಕರ್ಕ ಮತ್ತು ವೃಶ್ಚಿಕ ರಾಶಿಗಳಲ್ಲಿ ನಡೆಯಲಿದೆ. ಶನಿ ಧೈಯಾಗೆ ಎರಡೂವರೆ ವರ್ಷ. ಶನಿಯ ಅಶುಭ ಪರಿಣಾಮಗಳಿಂದ ಈ ೨ ರಾಶಿಗಳ ಜನರು ಆರೋಗ್ಯಕ್ಕೆ ಸಂಬಂಧಿದ ಸಮಸ್ಯೆಗಳನ್ನು ಎದುರಿಸಬಹುದು. ಇದೇ ರೀತಿ ಆರ್ಥಿಕ ನಷ್ಟವಾಗುವ ಸಾಧ್ಯತೆಯೂ ಇರುತ್ತದೆ.
ದೃಕ್ ಪಂಚಾಂಗದ ಪ್ರಕಾರ ಜೂನ್ 29ರಂದು ಶನಿಯು ರಾತ್ರಿ 12ಗಂಟೆಯ ನಂತರ ಹಿಮ್ಮೆಟ್ಟಲು ಪ್ರಾರಂಭಿಸುತ್ತಾನೆ. ನವೆಂಬರ್ 15ರಂದು ಶನಿಯು ತನ್ನ ದಿಕ್ಕನ್ನು ಬದಲಿಸಿ ನೇರವಾಗಿ ನಡೆಯಿಡುತ್ತಾನೆ. ಒಟ್ಟಾರೆ ಕರ್ಮಕ್ಕನುಗುಣವಾಗಿ ಶನಿದೇವರು ಮನುಷ್ಯ ಸೇರಿದಂತೆ ಸಕಲ ಜೀವರಾಶಿಗಳಿಗೆ ಶಿಕ್ಷೆ ಅಥವಾ ಆಶೀರ್ವಾದವನ್ನು ನೀಡುತ್ತಾನೆ. ಹೀಗಾಗಿ ಶನಿ ಮುನಿಸಿಕೊಳ್ಳುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು.