Shani Vakri 2024: ಈ ರಾಶಿಯವರಿಗೆ ವಿಶೇಷ ಆಶೀರ್ವಾದ ನೀಡಲಿದ್ದಾನೆ ಶನಿ ಮಹಾದೇವ

Wed, 12 Jun 2024-6:47 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ತಿಂಗಳಾಂತ್ಯದಲ್ಲಿ ಜೂನ್ 30ರಂದು ಶನಿ ದೇವನ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಸುಮಾರು ನಾಲ್ಕೂವರೆ ತಿಂಗಳು ಎಂದರೆ ನವೆಂಬರ್ 15 ರವರೆಗೆ  ಶನಿ ದೇವ ಇದೇ ಸ್ಥಿತಿಯಲ್ಲಿ ಇರುತ್ತಾನೆ. 

ಶನಿಯ ಹಿಮ್ಮುಖ ಚಲನೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಜೂನ್ ತಿಂಗಳಾಂತ್ಯದಿಂದ ಶನಿ ಮೂರು ರಾಶಿಯವರ ಮೇಲೆ ವಿಶೇಷ ಆಶೀರ್ವಾದವನ್ನು ಸುರಿಸಲಿದ್ದಾನೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಶನಿ ಹಿಮ್ಮುಖ ಚಲನೆಯು ಕನ್ಯಾ ರಾಶಿಯವರಿಗೆ ಧನಾತ್ಮಕ ಫಲಗಳನ್ನು ನೀಡಲಿದೆ.  ಈ ಸಮಯದಲ್ಲಿ ಹಣಕಾಸಿಗೆ ಸಂಬಂಧಿಸಿದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ಕೌಟುಂಬಿಕ ಸುಖವನ್ನು ಅನುಭವಿಸುವಿರಿ. 

ವಕ್ರಿ ಶನಿಯು ತುಲಾ ರಾಶಿಯವರಿಗೆ ಸಾಮಾಜಿಕ ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಈ ವೇಳೆ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹೂಡಿಕೆಯಿಂದ ಉತ್ತಮ ಲಾಭವನ್ನು ಗಳಿಸುವಿರಿ. 

ಈ ತಿಂಗಳಾಂತ್ಯದಿಂದ ಶನಿ ವೃಶ್ಚಿಕ ರಾಶಿಯವರಿಗೆ ಆರ್ಥಿಕ ಬೆಂಬಲವನ್ನು ನೀಡಲಿದ್ದಾನೆ. ಹೂಡಿಕೆಯಿಂದ ಬಂಪರ್ ಲಾಭವನ್ನು ನಿರೀಕ್ಷಿಸಬಹುದು. ವೃತ್ತಿ ಜೀವನದಲ್ಲಿ ಬೆಳವಣಿಗೆಯನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link