Shani Vakri: ಮುಂದಿನ 137 ದಿನಗಳವರೆಗೆ ಈ ರಾಶಿಯವರಿಗೆ ಶನಿ ಕೃಪೆ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಕರ್ಮಫಳದಾತ ಎಂದು ಬಣ್ಣಿಸಲ್ಪಡುವ ಶನಿ ದೇವ ಜೂನ್ 29ರಂದು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ.
ಮುಂದಿನ 137 ದಿನಗಳವರೆಗೆ ಇದೇ ಸ್ಥಿತಿಯಲ್ಲಿರುವ ಶನಿ ಮಹಾತ್ಮ ಮೂರು ರಾಶಿಯವರ ಜೀವನದಲ್ಲಿ ಅಪಾರ ಸುಖ ಸಂತೋಷ, ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿಯ ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಿಸಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ...
ಶನಿ ಆಶೀರ್ವಾದದಿಂದ ಈ ಸಮಯದಲ್ಲಿ ಮೇಷ ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದ್ದು, ಬಂಪರ್ ಆದಾಯವನ್ನು ಗಳಿಸುವಿರಿ.
ಶನಿ ಹಿಮ್ಮುಖ ಚಲನೆಯು ವೃಷಭ ರಾಶಿಯ ಜನರಿಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಈ ಸಮಯದಲ್ಲಿ ಹೊಸ ಉದ್ಯೋಗ ಸಿಗಬಹುದು. ವ್ಯಾಪಾರದಲ್ಲಿಯೂ ನಿಮ್ಮ ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯುವ ಸಾಧ್ಯತೆ ಇದೆ.
ಸ್ವ ರಾಶಿಯಲ್ಲಿ ಶನಿಯ ವಕ್ರ ನಡೆಯು ಕುಂಭ ರಾಶಿಯವರಿಗೆ ಲಾಭದಾಯಕವಾಗಿದೆ. ಈ ವೇಳೆ ಹಣಕಾಸಿನ ಸ್ಥಿತಿ ಬಲಗೊಳ್ಳಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಬಂಪರ್ ಲಾಭವನ್ನು ನಿರೀಕ್ಷಿಸಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.