ಶನಿ ಹಿಮ್ಮುಖ ಚಲನೆ: 2024ರಲ್ಲಿ ಹೆಚ್ಚಾಗಲಿದೆ ಈ ರಾಶಿಯವರ ತೊಂದರೆ

Thu, 28 Dec 2023-6:36 am,

ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ದೇವನು 2024ರಲ್ಲಿ ರಾಶಿಚಕ್ರವನ್ನು ಬದಲಾಯಿಸುವುದಿಲ್ಲ. 

ಆದಾಗ್ಯೂ, 2024ರಲ್ಲಿ ಶನಿ ದೇವ ಕುಂಭ ರಾಶಿಯಲ್ಲಿಯೇ ತನ್ನ ಚಲನೆಯನ್ನು ಬದಲಾಯಿಸುತ್ತಾನೆ. 

ಜೂನ್ 29, 2024 ರಿಂದ ನವೆಂಬರ್ 15, 2024 ರವರೆಗೆ ಶನಿ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. 

ಶನಿಯ ವಕ್ರ ನಡೆಯ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರ ಮೇಲೆ ಶನಿ ನಕಾರಾತ್ಮಕ ಪರಿಣಾಮವನ್ನು ಉಂಟು ಮಾಡಲಿದ್ದಾನೆ ಎಂದು ಹೇಳಲಾಗುತ್ತಿದೆ. ಅವುಗಳೆಂದರೆ.... 

ಕರ್ಕಾಟಕ ರಾಶಿ:  ಶನಿ ಹಿಮ್ಮುಖ ಚಲನೆಯ ಪ್ರಭಾವದಿಂದಾಗಿ ಈ ರಾಶಿಯವರು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ಇದರಿಂದಾಗಿ ಮಾನಸಿಕ, ದೈಹಿಕ ಒತ್ತಡವೂ ಹೆಚ್ಚಾಗುವ ಸಾಧ್ಯತೆ ಇದೆ. 

ಮಕರ ರಾಶಿ:  2024 ರಲ್ಲಿ ಶನಿದೇವನ ಹಿಮ್ಮುಖ ಚಲನೆಯ ಪ್ರಭಾವದಿಂದಾಗಿ ಮಕರ ರಾಶಿಯ ಜೀವನದಲ್ಲಿ ಸಮಸ್ಯೆಗಳು ಉಲ್ಬಣಿಸಲಿವೆ. ಶನಿ ಸಾಡೇ ಸಾತಿ ಪ್ರಭಾವವನ್ನು ಎದುರಿಸುತ್ತಿರುವ ಇವರು 2024ರಲ್ಲಿ ಕೆಲಸಕಾರ್ಯಗಳಲ್ಲಿ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. 

ಕುಂಭ ರಾಶಿ:  ಶನಿ ವಕ್ರ ನಡೆಯ ಪ್ರಭಾವದಿಂದಾಗಿ ಕುಂಭ ರಾಶಿಯವರಿಗೆ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಮಾತ್ರವಲ್ಲ, ಜೀವನದ ಪ್ರತಿ ಆಯಾಮಗಳು ಏರಿಳಿತಗಳಿಂದ ಕೂಡಿರಲಿದೆ. ಹಾಗಾಗಿ, ಪ್ರತಿ ವಿಷಯದಲ್ಲೂ ಜಾಗರೂಕರಾಗಿರುವುದು ಅತ್ಯಗತ್ಯ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link