ನವೆಂಬರ್ 4ರವರೆಗೆ ಶನಿ ಕೃಪೆಯಿಂದ ಈ ಜನರಿಗೆ ಸಿಗಲಿದೆ ವೃತ್ತಿ-ವ್ಯಾಪಾರದಲ್ಲಿ ಅಪಾರ ಯಶಸ್ಸು!
Saturn Retrograde: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ತನ್ನ ಸ್ವರಾಶಿಯಲ್ಲಿ ವಿರಾಜಮಾನನಾಗಿರುವ ಶನಿ ಮಹಾರಾಜ ವಕ್ರ ಸ್ಥಿತಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಿದ್ದಾನೆ (Spiritual News In Kannada). ಇದರಿಂದ ಒಟ್ಟು ಮೂರು ರಾಶಿಗಳ ಜನರಿಗೆ ವೃತ್ತಿಜೀವನ ಮತ್ತು ವ್ಯಾಪಾರದಲ್ಲಿ ಅಪಾರ ಯಶಸ್ಸು ಸಿಗಲಿದೆ.
ತುಲಾ ರಾಶಿ: ಶನಿ ಮಹಾರಾಜ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ತನ್ನ ವಕ್ರ ನಡೆ ಆರಂಭಿಸಿದ್ದಾನೆ. ಆತ ನಿಮ್ಮ ಚತುರ್ಥ ಭಾವಕ್ಕೆ ಅಧಿಪತಿ ಕೂಡ ಹೌದು, ಹೀಗಾಗಿ ಆತನ ಈ ವಕ್ರನಡೆ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ಮಕ್ಕಳ ಕಡೆಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಇದಲ್ಲದೆ, ಈ ಸಮಯದಲ್ಲಿ ನೀವು ವಾಹನ=ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಕುಟುಂಬದ ಭೌತಿಕ ಸುಖಕ್ಕಾಗಿ ನೀವು ಅತ್ಯಾವಶ್ಯಕ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಪ್ರೇಮ ಸಂಬಂಧಗಳಲ್ಲಿ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಒಂದು ವೇಳೆ ನೀವು ವಿದ್ಯಾರ್ಥಿಯಾಗಿದ್ದರೇ, ನಿಮಗೆ ಬೇಕಾದ ಕೋರ್ಸ್ ಗೆ ನಿಮಗೆ ಪ್ರವೇಶ ದೊರೆಯುವ ಸಾಧ್ಯತೆ ಇದೆ.
ಮೇಷ ರಾಶಿ: ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ಶನಿಯ ತನ್ನ ವಕ್ರ ನಡೆಯನ್ನು ಅನುಸರಿಸಿದ್ದಾನೆ. ಇದಲ್ಲದೆ ನಿಮ್ಮ ಜಾತಕದಲ್ಲಿ ಆತ ದಶಮಾಂಶನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳವಾಗುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ ಹಾಗೂ ಉದ್ಯೋಗಕ್ಕೆ ಸಂಬಂಧಿಸಿದಂತೆ ಒಳ್ಳೆಯ ಸಮಾಚಾರ ಸಿಗುವ ಸಾಧ್ಯತೆ ಇದೆ. ವ್ಯಾಪಾರಿಗಳಾಗಿದ್ದಾರೆ ದೊಡ್ಡ ಆರ್ಡರ್ ಅನ್ನು ನೀವು ಫೈನಲ್ ಮಾಡುವ ಸಾಧ್ಯತೆ ಇದ್ದು, ಅದರಿಂದ ನಿಮಗೆ ಅಪಾರ ಧನಲಾಭ ಸಿಗುವ ಸಾಧ್ಯತೆ ಇದೆ.
ಮಕರ ರಾಶಿ: ಶನಿದೇವನ ವಕ್ರ ನಡೆ ಮಕರ ಜಾತಕದವರಿಗೆ ಅತ್ಯದ್ಭುತ ಸಾಬೀತಾಗಲಿದೆ. ಏಕೆಂದರೆ ಶನಿ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ವಕ್ರನಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಪ್ರಾಪ್ತಿಯಾಗುವ ಎಲ್ಲಾ ಸಾಧ್ಯತೆಗಳು ಇವೆ. ನೌಕರ ವರ್ಗದ ಜನರಿಗೆ ಇಂಕ್ರಿಮೆಂಟ್ ಹಾಗೂ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಲು ಬಯಸುವವರ ಇಚ್ಛೆ ಈಡೇರಲಿದೆ. ನಿಮ್ಮ ಮಾತಿನಲ್ಲಿ ಕಂಡುಬರುವ ಪ್ರಭಾವಾದಿಂದಾಗಿ ಜನರು ನಿಮ್ಮ ಸಂಪರ್ಕಕ್ಕೆ ಬರಲಿದ್ದಾರೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)