ಕುಂಭದಲ್ಲಿ ಶನಿ ಉದಯ.. ಈ ರಾಶಿಗಳ ಬದುಕಿನ ದಿಕ್ಕೇ ಬದಲು, ಕಷ್ಟ ಕಳೆದು ಸಿರಿತನ ನೀಡಿ, ಪ್ರತಿ ಕೆಲಸದಲ್ಲಿ ಜೊತೆ ನಿಂತು ಜಯ ಕೊಡುವ ಛಾಯಾಪುತ್ರ!
Saturn Rise In Aquarius: ಶನಿಯು ಎಲ್ಲಾ ಗ್ರಹಗಳಲ್ಲಿ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಕರ್ಮಫಲದಾಯಕನಾದ ಶನಿ ಮಾರ್ಚ್ 17ರಂದು ಕುಂಭ ರಾಶಿಯಲ್ಲಿ ಉದಯಿಸಿದ್ದಾನೆ. ಇದು ಈ ನಾಲ್ಕು ರಾಶಿಗಳ ಅದೃಷ್ಟ ಬದಲಿಸಲಿದೆ.
ಕನ್ಯಾ ರಾಶಿ: ಶನಿ ಉದಯದಿಂದ ಒಳ್ಳೆಯ ದಿನಗಳು ಬರಲಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳು ಯಶಸ್ವಿಯಾಗುತ್ತಾರೆ. ಮೇಲಧಿಕಾರಿಯಿಂದ ಮೆಚ್ಚುಗೆಯನ್ನು ಪಡೆಯುತ್ತೀರಿ. ನ್ಯಾಯಾಲಯದ ತೊಡಕುಗಳಿಂದ ಮುಕ್ತಿ ಸಿಗಲಿದೆ. ಆದಾಯವೂ ವೃದ್ಧಿಯಾಗಲಿದೆ.
ವೃಷಭ ರಾಶಿ: ಕಚೇರಿಯಲ್ಲಿ ಬಾಸ್ ಮತ್ತು ಸಹೋದ್ಯೋಗಿಗಳಿಂದ ನೀವು ಮೆಚ್ಚುಗೆಯನ್ನು ಪಡೆಯುತ್ತೀರಿ. ಅಧ್ಯಯನ ಅಥವಾ ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಜೀವನದಲ್ಲಿ ಸಂತೋಷ ಬರಲಿದೆ.
ತುಲಾ ರಾಶಿ: ನಿಮಗೆ ಅದೃಷ್ಟ ಒಲಿದು ಬರಲಿದೆ. ವೃತ್ತಿಜೀವನದ ಬಗ್ಗೆ ಕಂಡ ಕನಸುಗಳು ನನಸಾಗುತ್ತವೆ. ವ್ಯಾಪಾರಿಗಳು ದೊಡ್ಡ ಲಾಭ ಪಡೆಯುವ ಸಾಧ್ಯತೆಯಿದೆ. ನಿಮ್ಮ ವ್ಯಾಪಾರ ವೃದ್ಧಿಯಾಗುತ್ತದೆ. ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿರುತ್ತೀರಿ. ಸಾಲದಿಂದ ಹೊರಬರುತ್ತೀರಿ.
ಮೇಷ ರಾಶಿ: ನೀವು ಬಯಸಿದ ಜೀವನವನ್ನು ಪಡೆಯುತ್ತೀರಿ. ವೃತ್ತಿಗೆ ಸಂಬಂಧಿಸಿದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯುತ್ತದೆ. ಸಂಪತ್ತು ಹೆಚ್ಚಾಗುತ್ತದೆ. ಆದಾಯ ದ್ವಿಗುಣವಾಗುತ್ತದೆ.
ಸೂಚನೆ: ಈ ಲೇಖನವನ್ನು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿ ಬರೆಯಲಾಗಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.