Shani Vakri: ನಾಲ್ಕು ದಿನಗಳ ಬಳಿಕ ಈ ರಾಶಿಯವರಿಗೆ ಭರ್ಜರಿ ಧನ ಲಾಭ ನೀಡಲಿದ್ದಾನೆ ವಕ್ರೀ ಶನಿ
ಇನ್ನು ನಾಲ್ಕು ದಿನಗಳಲ್ಲಿ ಎಂದರೆ ಜೂನ್ 17, 2023ರಂದು ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ದೇವನು ತನ್ನದೇ ಆದ ಕುಂಭ ರಾಶಿಯಲ್ಲಿ ಹಿಮ್ಮುಖಚಲನೆ ಆರಂಭಿಸಲಿದ್ದಾನೆ. 30 ವರ್ಷಗಳ ನಂತರ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿರುವ ಶನಿಯು ಜೂನ್ 17 ರಿಂದ ನವೆಂಬರ್ 04 ರವರೆಗೆ ಹಿಮ್ಮುಖವಾಗಿ ಸಂಚರಿಸಲಿದ್ದಾನೆ. ಶನಿಯ ಈ ವಕ್ರ ನಡೆಯಿಂದ ಅತ್ಯಂತ ಮಂಗಳಕರವಾದ ತ್ರಿಕೋನ ರಾಜ ಯೋಗ ಮತ್ತು ಶಶರಾಜಯೋಗವು ರೂಪುಗೊಳ್ಳುತ್ತಿವೆ. ಇದರ ಪರಿಣಾಮ ಎಲ್ಲಾ ಗ್ರಹಗಳ ಮೇಲೆ ಕಂಡು ಬರುತ್ತದೆ. ಆದರೂ, ಐದು ರಾಶಿಯವರ ದೃಷ್ಟಿಯಿಂದ ಇದನ್ನು ಶುಭ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ....
ತನ್ನದೇ ರಾಶಿಯಲ್ಲಿ ಹಿಮ್ಮುಖವಾಗಲಿರುವ ಶನಿಯು ಮೇಷ ರಾಶಿಯವರಿಗೆ ವಿಶೇಷ ಆಶೀರ್ವಾದವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರು ವೃತ್ತಿಜೀವನದಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯಲಿದ್ದಾರೆ. ಆದಾಗ್ಯೂ, ಆರೋಗ್ಯದ ಬಗ್ಗೆ ಗಮನಹರಿಸುವುದನ್ನು ಮರೆಯಬೇಡಿ.
ಶನಿಯ ವಕ್ರ ನಡೆಯಿಂದಾಗಿ ರೂಪುಗೊಳ್ಳುತ್ತಿರುವ ಕೇಂದ್ರ ತ್ರಿಕೋನ ರಾಜಯೋಗವು ಈ ರಾಶಿಯವರ ಜೀವನದಲ್ಲಿ ಬಹಳ ಮಂಗಳಕರ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಈ ರಾಶಿಯವರಿಗೆ ಭರ್ಜರಿ ಹಣಕಾಸಿನ ಲಾಭವಾಗಲಿದ್ದು ಉದ್ಯೋಗ ಮತ್ತು ವ್ಯವಹಾರದಲ್ಲಿ ಭಾರೀ ಲಾಭವನ್ನು ಪಡೆಯಲಿದ್ದೀರಿ.
ಶನಿಯ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಅವರ ಸಮಸ್ಯೆಗಳಿಂದ ಮುಕ್ತಿಯನ್ನು ನೀಡಲಿದೆ. ಈ ವೇಳೆ ದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳಿಗೆ ವೇಗ ದೊರೆಯಲಿದ್ದು, ಆರ್ಥಿಕ ಲಾಭವಾಗಲಿದೆ. ನಿರುದ್ಯೋಗಿಗಳಿಗೆ ನೀವು ಬಯಸಿದ ಉದ್ಯೋಗ ಪಡೆಯುವ ಯೋಗವೂ ಇದೆ.
ಶನಿಯ ಹಿಮ್ಮುಖ ಚಲನೆಯು ಈ ರಾಶಿಯಲ್ಲಿ ಶಶರಾಜಯೋಗವನ್ನು ಉಂಟು ಮಾಡುತ್ತಿದ್ದು, ಇದರಿಂದಾಗಿ ಸಿಂಹ ರಾಶಿಯವರಿಗೆ ವೃತ್ತಿ, ವ್ಯವಹಾರ, ವೈಯಕ್ತಿಕ ಜೀವನದಲ್ಲಿ ಬಂಪರ್ ಲಾಭವಾಗಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸಲಿದ್ದು ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದವರು ನಿಮ್ಮ ಬೆನ್ನಿಗೆ ನಿಲ್ಲುತ್ತಾರೆ.
ಶನಿಯ ಹಿಮ್ಮುಖ ಚಲನೆಯು ಈ ರಾಶಿಯವರಿಗೆ ಅಪಾರ ಧನ-ಸಂಪತ್ತನ್ನು ಕೃನಿಸಲಿದೆ. ಈ ಸಂಯದಲ್ಲಿ ನಿಮಗೆ ಹೊಸ ವ್ಯಾಪಾರ-ವ್ಯವಹಾರಗಳು ಲಾಭದಾಯಕ ಎಂದು ಸಾಬೀತುಪಡಿಸಲಿವೆ. ಒಟ್ಟಾರೆಯಾಗಿ ಶನಿ ಹಿಮ್ಮುಖ ಚಲನೆಯ ಸಂದರ್ಭದಲ್ಲಿ ಶನಿ ದೇವನ ಆಶೀರ್ವಾದದಿಂದಾಗಿ ನಿಮ್ಮ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.