2025ರವರೆಗೆ ತನ್ನ ಪ್ರಿಯ ರಾಶಿಯಲ್ಲಿ ಶನಿದೇವನ ವಾಸ್ತವ್ಯ, ಈ 4 ರಾಶಿಯ ಜನರಿಗೆ ಸೋಲೆಂಬುದೇ ಇಲ್ಲ

Thu, 28 Sep 2023-6:59 am,

ವೈದಿಕ ಜ್ಯೋತಿಷ್ಯದಲ್ಲಿ ನ್ಯಾಯದ ದೇವರು ಎಂದು ಬಣ್ಣಿಸಲ್ಪಡುವ ಶನಿ ಮಹಾತ್ಮನ ಸ್ಥಾನದಲ್ಲಿನ ಸಣ್ಣ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಈ ವರ್ಷದ ಆರಂಭದಲ್ಲಿ ತನ್ನ ಪ್ರಿಯ ರಾಶಿ ಕುಂಭ ರಾಶಿಯನ್ನು ಪ್ರವೇಶಿಸಿರುವ ಶನಿ ದೇವನು 2025ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

ಕುಂಭ ರಾಶಿಯಲ್ಲಿರುವ ಶನಿಯ ಶುಭ-ಅಶುಭ ಪರಿಣಾಮಗಳು ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, 2025ರವರೆಗೆ ತನ್ನ ಪ್ರಿಯ ರಾಶಿಚಕ್ರ ಚಿಹ್ನೆಯಲ್ಲಿ ಸಂಚರಿಸಲಿರುವ ಶನಿದೇವನು ನಾಲ್ಕು ರಾಶಿಯವರ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಯಶಸ್ಸನ್ನು ನೀಡಲಿದ್ದಾನೆ. ಇವರಿಗೆ ಸೋಲು ಎಂಬುದೇ ಇರುವುದಿಲ್ಲ ಎಂದು ಹೇಳಲಾಗುತ್ತಿದೆ.   

ಕುಂಭ ರಾಶಿಯಲ್ಲಿ ಉಪಸ್ಥಿತನಿರುವ ಶನಿಯು ಮಿಥುನ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಮಿಥುನ ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದೆ. 

ಕನ್ಯಾ ರಾಶಿಯವರಿಗೂ ಕೂಡ ಶನಿ ಸಂಚಾರವು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 2025ರವರೆಗೆ ಕುಂಭ ರಾಶಿಯಲ್ಲಿ ವಾಸ್ತವ್ಯ ಹೊಡಲಿರುವ ಶನಿ ದೇವನು ಈ ಸಮಯದಲ್ಲಿ ಕನ್ಯಾ ರಾಶಿಯವರಿಗೆ ಅವರು ಕೈ ಹಾಕುವ ಪ್ರತಿ ಕೆಲಸದಲ್ಲೂ ಕೈ ಹಿಡಿಯಲಿದ್ದಾನೆ ಎಂದು ಹೇಳಲಾಗುತ್ತಿದೆ. 

ಕುಂಭ ರಾಶಿಯಲ್ಲಿರುವ ಶನಿಯು ತುಲಾ ರಾಶಿಯವರಿಗೆ ದೀರ್ಘ ಸಮಯದ ಸಮಸ್ಯೆಗಳಿಂದ ಪರಿಹಾರವನ್ನು ನೀಡಲಿದೆ. ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದ್ದು ನಿಮ್ಮ ಕನಸು ನನಸಾಗುವ ಸಾಧ್ಯತೆಯೂ ಇದೆ. 

ಶನಿಯ ಸಂಚಾರವು ಧನು ರಾಶಿಯವರ ಬದುಕಿನಲ್ಲಿಯೂ ಒಳ್ಳೆಯ ದಿನಗಳನ್ನು, ಒಳ್ಳೆಯ ಫಲಗಳನ್ನು ತರಲಿದೆ. 2025ರವರೆಗೆ ಶನಿಯ ಆಶೀರ್ವಾದದಿಂದಾಗಿ ಈ ರಾಶಿಯವರು ವೃತ್ತಿ ರಂಗದಲ್ಲಿ ಯಶಸ್ಸನ್ನು, ವ್ಯಾಪಾರ-ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ಗಳಿಸುವರು ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link