2027 ರ ವರೆಗೆ ಈ ರಾಶಿಗಳ ಕೈ ಹಿಡಿದು ಕಾಯುವ ಶನಿ ದೇವ.. ಸಂಪತ್ತಿನ ಸುರಿಮಳೆ, ಅಪಾರ ಯಶಸ್ಸು ಗ್ಯಾರಂಟಿ.. ಗೋಲ್ಡನ್ ಟೈಮ್ ಅಂದ್ರೆ ಇದು !
ಶನಿ ಗೋಚಾರ 2025: ಹೊಸ ವರ್ಷ 2025 ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಹೊಸ ವರ್ಷದಲ್ಲಿ ಅನೇಕ ಪ್ರಮುಖ ಗ್ರಹಗಳ ರಾಶಿ ಬದಲಾವಣೆಗಳು ನಡೆಯಲಿವೆ. ಇದರಲ್ಲಿ ಶನಿದೇವನ ರಾಶಿ ಬದಲಾವಣೆಯು ಬಹಳ ಮುಖ್ಯವಾಗಿರುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿಯು ನಿಧಾನವಾಗಿ ಚಲಿಸುವ ಗ್ರಹವಾಗಿದೆ.
ಮೀನ ರಾಶಿಯಲ್ಲಿ ಶನಿ ಸಂಕ್ರಮಣ 2025: ಶನಿ ಗ್ರಹವು ಎರಡೂವರೆ ವರ್ಷಗಳಿಗೊಮ್ಮೆ ರಾಶಿಯನ್ನು ಬದಲಿಸುತ್ತದೆ. ಮತ್ತೆ ಅದೇ ರಾಶಿಗೆ ಮರಳಲು ಸುಮಾರು 30 ವರ್ಷಗಳು ಬೇಕಾಗುತ್ತದೆ. ಮಾರ್ಚ್ 29, 2025 ರಂದು ಶನಿ ಮೀನ ರಾಶಿ ಪ್ರವೇಶಿಸುತ್ತಾನೆ. ಶನಿಯ ರಾಶಿ ಬದಲಾವಣೆಯಿಂದಾಗಿ ಕೆಲವು ರಾಶಿಯವರಿಗೆ ಅದೃಷ್ಟ ಕೂಡಿಬರಬಹುದು. 2027 ರ ವರೆಗೆ ಶನಿ ಈ ರಾಶಿಗಳ ಕೈ ಹಿಡಿದು ಕಾಪಾಡಲಿದ್ದಾನೆ.
ತುಲಾ ರಾಶಿ: ಕೆಲಸದ ಸ್ಥಳದಲ್ಲಿ ಹೊಸ ಸಾಧನೆಗಳು ಮತ್ತು ಹೊಸ ಎತ್ತರಗಳನ್ನು ಸಾಧಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಲಾಭದ ಸಾಧ್ಯತೆ ಇದೆ. ಗೌರವ ಹೆಚ್ಚಳ ಮತ್ತು ಉತ್ತಮ ಲಾಭ ಗಳಿಸುವಿರಿ.
ಸಿಂಹ ರಾಶಿ: ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕೈ ಹಾಕಿದ ಪ್ರತಿ ಕೆಲಸದಲ್ಲಿಯೂ ಯಶಸ್ಸನ್ನು ಪಡೆಯುವಿರಿ. ಆದಾಯದ ಮೂಲಗಳು ಹೆಚ್ಚಾಗಿ ಆರ್ಥಿಕ ಬಿಕ್ಕಟ್ಟು ದೂರವಾಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುವುದು.
ಮಕರ ರಾಶಿ: ಅದೃಷ್ಟದ ದಿನಗಳು ಆರಂಭವಾಗಲಿವೆ. ಎಲ್ಲಾ ಆಸೆಗಳು ಈಡೇರುತ್ತವೆ. ಲಾಭಕ್ಕಾಗಿ ಉತ್ತಮ ಅವಕಾಶಗಳು ಅಭಿವೃದ್ಧಿಗೊಳ್ಳುತ್ತವೆ. ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)