75 ದಿನ ರಾಹು ಮನೆಯಲ್ಲಿ ಶನಿ.. ಈ ರಾಶಿಯವರಿಗೆ ಕುಬೇರ ಯೋಗ, ಧನ ಸಂಪತ್ತು ಹುಡುಕಿ ಬರುವುದು!

Mon, 31 Jul 2023-6:34 pm,

ಶನಿಯ ಸಂಚಾರ ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಶನಿಯ ಸ್ಥಾನ ಬದಲಾವಣೆಯು ಕೆಲವರಿಗೆ ಶುಭ ಫಲ ನೀಡುತ್ತದೆ. ಇದೀಗ ರಾಹುವಿನ ನಕ್ಷತ್ರದಲ್ಲಿ ಶನಿಯು ಸಂಚರಿಸಲಿದ್ದು, ಈ ಮೂರು ರಾಶಿಗಳಿಗೆ ಶುಭ ಫಲ ನೀಡಲಿದ್ದಾನೆ.   

ವೃಷಭ ರಾಶಿ : ಶನಿ ನಕ್ಷತ್ರ ಬದಲಾವಣೆಯು ವೃಷಭ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ವೃಷಭ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಪಡೆಯಬಹುದು. ಯಾವುದೇ ವ್ಯವಹಾರದಲ್ಲಿ ಆರ್ಥಿಕ ಪ್ರಗತಿಯನ್ನು ಸಾಧಿಸಲಾಗುವುದು. ಈ ಸಮಯದಲ್ಲಿ ನೀವು ಮೊದಲಿಗಿಂತ ಹೆಚ್ಚು ಲಾಭ ಗಳಿಸಬಹುದು. ಉದ್ಯೋಗಿಗಳು ಈ ಅವಧಿಯಲ್ಲಿ ಬಡ್ತಿ ಪಡೆಯಬಹುದು.  

ಸಿಂಹ ರಾಶಿ: ಈ ಸಮಯದಲ್ಲಿ ನೀವು ಪಾರ್ಟನರ್‌ ಶಿಪ್‌ ಉದ್ಯಮವನ್ನು ಪ್ರಾರಂಭಿಸಬಹುದು. ಅಲ್ಲದೆ, ಜೀವನ ಸಂಗಾತಿಯ ಬೆಂಬಲವನ್ನು ಪಡೆಯಬಹುದು. ಜೀವನ ಸಂಗಾತಿಯ ಪ್ರಗತಿಯೂ ಹೆಚ್ಚಾಗುತ್ತದೆ. ನೀವು ಇದ್ದಕ್ಕಿದ್ದಂತೆ ಎಲ್ಲಿಂದಲಾದರೂ ದೊಡ್ಡ ಮೊತ್ತದ ಹಣವನ್ನು ಪಡೆಯಬಹುದು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ.  

ಮಕರ ರಾಶಿ: ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸಬಹುದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸುವ ಅವಕಾಶವನ್ನು ನೀವು ಪಡೆಯುತ್ತೀರಿ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮವಾಗಿರುತ್ತದೆ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link