30 ವರ್ಷಗಳ ಬಳಿಕ ಶನಿ-ಶುಕ್ರ ಮೈತ್ರಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಯವರಿಗೆ ಜಾಕ್ ಪಾಟ್, ಯಶಸ್ಸು ನಿಮ್ಮದೇ..!
ಪ್ರಸ್ತುತ, ಶನಿ ತನ್ನ ಮೂಲ ತ್ರಿಕೋನ ರಾಶಿಚಕ್ರ ಕುಂಭ ರಾಶಿಯಲ್ಲಿ ಉಪಸ್ಥಿತನಿದ್ದಾನೆ. ಡಿಸೆಂಬರ್ 28ರಂದು ಐಷಾರಾಮಿ ಜೀವನಕಾರಕ ಶುಕ್ರ ಕೂಡ ಕುಂಭ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಇದರಿಂದ ಕೆಲವರಿಗೆ ಶುಕ್ರ ದೆಸೆ ಆರಂಭವಾದರೆ, ಇನ್ನೂ ಕೆಲ ರಾಶಿಯವರಿಗೆ ಶನಿ ಮಹಾದಶದ ಫಲ ದೊರೆಯಲಿದೆ.
ಕುಂಭ ರಾಶಿಯಲ್ಲಿ ಶನಿ-ಶುಕ್ರರ ಮೈತ್ರಿ ಬರೋಬ್ಬರಿ 30 ವರ್ಷಗಳ ಬಳಿಕ ಸಂಭವಿಸುತ್ತಿದ್ದು, ಇದರೊಂದಿಗೆ ಕೆಲವು ರಾಶಿಯವರಿಗೆ ಅದೃಷ್ಟ ಹೆಗಲೇರಲಿದೆ ಎಂದು ಹೇಳಲಾಗುತ್ತಿದೆ.
ಮೇಷ ರಾಶಿ: ಶನಿ-ಶುಕ್ರರ ಮೈತ್ರಿ ಈ ರಾಶಿಯವರಿಗೆ ಭಾರೀ ಅದೃಷ್ಟದ ಜೊತೆಗೆ ಸಂಪತ್ತಿನ ಸುರಿಮಳೆಯನ್ನೇ ಸುರಿಸಲಿದೆ. ವೃತ್ತಿ ಬದುಕಿನಲ್ಲಿ ಬಂಪರ್ ಆದಾಯವನ್ನು ಕಾಣುವಿರಿ. ವ್ಯಾಪಾರ ವಿಸ್ತರಣೆ ಬಗ್ಗೆ ಯೋಚಿಸುತ್ತಿರುವವರಿಗೆ ಸುವರ್ಣ ಸಮಯ.
ಮಿಥುನ ರಾಶಿ: ಶನಿ ಶುಕ್ರ ಯುತಿಯೊಂದಿಗೆ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಖ್ಯಾತಿ ವೃದ್ಧಿಯಾಗಲಿದೆ. ಬಿಸಿನೆಸ್ ಸಂಬಂಧಿಸಿದ ಪ್ರಯಾಣವು ಭರ್ಜರಿ ಲಾಭವನ್ನು ನೀಡಲಿದೆ. ವ್ಯವಹಾರದಲ್ಲಿ ನಿಮ್ಮ ಬಹುಕಾಲದ ಕನಸು ನನಸಾಗುವ ಕಾಲ ಇದಾಗಿದೆ.
ಕರ್ಕಾಟಕ ರಾಶಿ: ಶುಕ್ರ ಸಂಚಾರದ ಬಳಿಕ ಈ ರಾಶಿಯವರಿಗೆ ದಿಢೀರ್ ಧನಲಾಭ, ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿಪರರಿಗೆ ಪ್ರಮೋಷನ್, ವೇತನ ಹೆಚ್ಚಾಗುವ ಸಂಭವವಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಸಂಪೂರ್ಣ ಫಲ ದೊರೆಯುವುದರಿಂದ ಮನಸ್ಸಿನ ಸಂತೋಷ ಹೆಚ್ಚಾಗಲಿದೆ.
ಕುಂಭ ರಾಶಿ: ಶನಿ-ಶುಕ್ರರ ಮೈತ್ರಿ ಈ ರಾಶಿಯವರಿಗೆ ವಿಶೇಷ ಫಲಗಳನ್ನು ನೀಡಲಿದೆ. ವ್ಯಾಪಾರಸ್ಥರು ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಅನುಕೂಲಕರವಾದ ವಾತಾವರಣ ಇರಲಿದೆ. ಹೊಸ ಜನರ ಭೇಟಿ ಭವಿಷ್ಯದಲ್ಲಿ ಭಾರೀ ಲಾಭವನ್ನು ತಂದುಕೊಡಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.