ಶನಿ ಶುಕ್ರರಿಂದ 2025ರಲ್ಲಿ ಈ ರಾಶಿಯವರಿಗೆ ಜಾಕ್‌ಪಾಟ್, ಯಾವ ಕೆಲಸ ಹಿಡಿದರೂ ಜಯ ನಿಮ್ಮದೇ, ಅದೃಷ್ಟ ಲಕ್ಷ್ಮೀಯಿಂದ ಬದುಕೇ ಬಂಗಾರ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರ ಡಿಸೆಂಬರ್ ತಿಂಗಳಿನಲ್ಲಿ ಸಂಪತ್ತು ಕಾರಕ ಶುಕ್ರ, ನ್ಯಾಯದ ದೇವರು ಶನಿ ಇಬ್ಬರೂ ಒಟ್ಟಿಗೆ ಕೂಡಲಿದ್ದಾರೆ.
ಶನಿ ಶುಕ್ರರ ಯುತಿಯ ಪ್ರಭಾವದಿಂದಾಗಿ 2025ರಲ್ಲಿ ವರ್ಷಪೂರ್ತಿ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯ ಕೃಪಾಕಟಾಕ್ಷ ಇರಲಿದೆ.
ಎರಡು ಶುಭ ಗ್ರಹಗಳ ಸಂಯೋಗದಿಂದ ಈ ರಾಶಿಯವರಿಗೆ ಭಾರೀ ಲಾಭವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ ಸಮಸ್ಯೆಗಳು ಬಗೆಹರಿದು ಅಷ್ಟದಿಕ್ಕುಗಳಿಂದಲೂ ಸಂಪತ್ತು ಹೆಚ್ಚಾಗಲಿದೆ.
ಶುಕ್ರ-ಶನಿ ಯುತಿಯು ನಿಮಗೆ ಜಾಕ್‌ಪಾಟ್ ಎಂತಲೇ ಹೇಳಬಹುದು. ಈ ವೇಳೆ ಬಹಳ ವರ್ಷಗಳ ನಿಮ್ಮ ಕಷ್ಟಗಳನ್ನು ನಿವಾರಿಸಿ ಸಾಕಷ್ಟು ಹಣವನ್ನು ಗಳಿಸುವಿರಿ. ವಾಹನ, ಮನೆ, ಭೂಮಿ ಖರೀದಿ ಯೋಗವೂ ಇದೆ.
ಶನಿ ಶುಕ್ರರು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದ್ದಾರೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಬಗೆಹರಿಯಲಿವೆ. ದಾಂಪತ್ಯ ಜೀವನವೂ ಸುಖಮಯವಾಗಿರಲಿದೆ. ಹಣಕಾಸಿನ ದೃಷ್ಟಿಯಿಂದಲೂ ಉತ್ತಮವಾದ ಸಮಯ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.