ಆಗಸ್ಟ್‌ನಲ್ಲಿ ಬುಧ, ಶುಕ್ರ, ಶನಿ ಮುಖಾಮುಖಿ: ಸಮಾಸಪ್ತಕ, ಕೇಂದ್ರ ತ್ರಿಕೋನ ರಾಜಯೋಗದಿಂದ 3 ರಾಶಿಯವರಿಗೆ ಕುಬೇರ ಸಂಪತ್ತು

Mon, 05 Aug 2024-6:58 am,

ಆಗಸ್ಟ್‌ನಲ್ಲಿ ನ್ಯಾಯದ ದೇವರು ಶನಿ, ಮಾತು-ಬುದ್ಧಿಯ ಅಂಶ ಬುಧ, ಐಶ್ವರ್ಯಕಾರಕ ಶುಕ್ರರು ತಾವಿರುವ ಸ್ಥಾನದಲ್ಲಿ ಮುಖಾಮುಖಿಯಾಗಲಿದ್ದಾರೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧ-ಶುಕ್ರರ ಸಂಯೋಗ ಹಾಗೂ ಬುಧ, ಶುಕ್ರ, ಶನಿ ಎದುರುಬದುರಾಗುವುದರಿಂದ ಎರಡು ರಾಜಯೋಗಗಳು ನಿರ್ಮಾಣವಾಗುತ್ತಿವೆ. 

ಆಗಸ್ಟ್‌ನಲ್ಲಿ ಸಮಾಸಪ್ತಕ ರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗಗಳು ರೂಪುಗೊಳ್ಳುತ್ತಿವೆ. 

ಸಮಾಸಪ್ತಕ ರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, 3 ರಾಶಿಯ ಜನರಿಗೆ ಇದು ಮಣ್ಣು ಕೂಡ ಹೊನ್ನಾಗುವ ಸಮಯ ಎನ್ನಲಾಗುತ್ತಿದೆ. 

ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ಪ್ರಾಪ್ತಿ. ವೃತ್ತಿ ಬದುಕಿನಲ್ಲಿ ಸಾಕಷ್ಟು ಧನಾತ್ಮಕ ಫಲಗಳು ದೊರೆತು ಯಶಸ್ಸಿನ ಉತ್ತುಂಗವನ್ನೇರುವಿರಿ. ಸಂಪತ್ತು ಹೆಚ್ಚಾಗಲಿದೆ. 

ಉದ್ಯೋಗ ನಿಮಿತ್ತ ಪ್ರಯಾಣ ಕೈಗೊಳ್ಳಬೇಕಾಗಬಹುದು. ಇದು ಲಾಭದಾಯಕವಾಗಿರುತ್ತದೆ. ದಿಢೀರ್ ಧನಲಾಭವು ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಿದೆ. ಸಂಗಾತಿಯಿಂದ ಶುಭ ವಾರ್ತೆ ನಿರೀಕ್ಷಿಸಬಹುದು. 

ನಿಮ್ಮ ಬಹುದಿನದ ಕನಸುಗಳು ನನಸಾಗುವ ಸಮಯ. ವೃತ್ತಿಬದುಕಿನಲ್ಲಿ ಕೀರ್ತಿ, ಯಶಸ್ಸನ್ನು ಗಳಿಸುವಿರಿ. ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಯೋಜನೆಗಳು ಪೂರ್ಣಗೊಂಡು, ಬಂಪರ್ ಲಾಭವನ್ನು ಗಳಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link