ಮೊಡವೆಗಳಿಂದ ಮುಕ್ತಿ ಹೊಂದಲು ನಿಮ್ಮ ಡಯಟ್ನಲ್ಲಿರಲಿ ಈ 5 ಆಹಾರ

Wed, 31 Jul 2024-1:52 pm,

ಅತಿಯಾದ ಎಣ್ಣೆಯುಕ್ತ ಆಹಾರಗಳು ಮುಖದಲ್ಲಿ ಮೊಡವೆಗಳು ಮೂಡಲು ಕಾರಣವಾಗುತ್ತದೆ.  

ನೀವು ನಿತ್ಯ ಕೆಲವು ಆಹಾರಗಳನ್ನು ನಿಮ್ಮ ಡಯಟ್ನಲ್ಲಿ ಸೇರಿಸುವುದರಿಂದ ಮೊಡವೆಗಳಿಂದ ಶಾಶ್ವತ ಪರಿಹಾರವನ್ನು ಪಡೆಯಬಹುದು ಎನ್ನಲಾಗುತ್ತದೆ. ಅಂತಹ ಐದು ಆಹಾರಗಳೆಂದರೆ... 

ಒಮೆಗಾ -3, ಒಮೆಗಾ -6 ನಂತಹ ದೇಹಕ್ಕೆ ಅಗತ್ಯವಾದ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿರುವ ಮೀನುಗಳನ್ನು ಬಳಸುವುದರಿಂದ ಇದು ಮೊಡವೆಗಳು ಬರದಂತೆ ತಡೆಯಲು ಸಹಾಯಕವಾಗಿದೆ. 

ಸೆಲೆನಿಯಮ್, ವಿಟಮಿನ್ ಇ, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶಗಳಲ್ಲಿ ಹೇರಳವಾಗಿರುವ ಡ್ರೈ ಫ್ರೂಟ್ಸ್ಗಳ ಮಿತವಾದ ಬಳಕೆಯು ಕೂಡ ಮೊಡವೆಗಳಿಂದ ಪರಿಹಾರವನ್ನು ನೀಡಬಲ್ಲವು. 

ನಿತ್ಯ ವೈಟ್ ರೈಸ್ ಬದಲಿಗೆ ನಿಮ್ಮ ಆಹಾರದಲ್ಲಿ ಬ್ರೌನ್ ರೈಸ್ ಸೇರಿಸುವುದರಿಂದ ಇದರಲ್ಲಿರುವ ವಿಟಮಿನ್ ಬಿ ನಮ್ಮ ಚರ್ಮದ ಒತ್ತಡದ ಹೋರಾಟಗಾರನಾಗಿ ಕಾರ್ಯನಿರ್ವಹಿಸಿ, ಹಾರ್ಮೋನುಗಳ ಮಟ್ಟವನ್ನು ನಿಯಂತ್ರಿಸಲು ಮತ್ತು ಮೊಡವೆಗಳು ಮೂಡದಂತೆ ತಡೆಯಲು ಪ್ರಯೋಜನಕಾರಿ ಆಗಿದೆ. 

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಎಂಬ ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕದಿಂದಾಗಿ ದೇಹಕ್ಕೆ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ದ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಮೊಡವೆಗಳಿಂದಲೂ ಪರಿಹಾರ ಪಡೆಯಬಹುದು. 

ಆರೋಗ್ಯಕರ ಚರ್ಮವನ್ನು ಹೊಂದಲು ಬ್ರೊಕೊಲಿಯನ್ನು ಪರಿಪೂರ್ಣ ಆಹಾರ ಎಂದು ಪರಿಗಣಿಸಲಾಗಿದೆ. ನಿಮ್ಮ ಡಯಟ್ನಲ್ಲಿ ಬ್ರೊಕೊಲಿ ಬಳಸುವುದರಿಂದ ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು ಮೊಡವೆ ನಿವಾರಿಸಿ ಕಾಂತಿಯುತ ಚರ್ಮವನ್ನು ಹೊಂದಲು ಪ್ರಯೋಜನಕಾರಿ ಆಗಿದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link