ಓಪನ್‌ ಪೋರ್ಸ್‌ಗೆ ಹೇಳಿ ಬೈ ಬೈ..! ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್‌

Tue, 31 Oct 2023-8:39 am,

ಹೆಣ್ಣು ಮಕ್ಕಳಾಗಿರಲಿ ಅಥವಾ ಗಂಡಸರೇ ಆಗಿರಲಿ ಸೌಂದರ್ಯ ಅನ್ನೋದು ಎಷ್ಟೊಂದು ಮುಖ್ಯ ಅಲ್ವಾ ಸ್ನೇಹಿತರೆ.. ನಮ್ಮ ತ್ವಚೆಯನ್ನ ಸುಂದರವಾಗಿಟ್ಟುಕೊಳ್ಳಲು ಹತ್ತು-ಹಲವಾರು ಕ್ರೀಮ್‌ಗಳು, ಸ್ಕಿನ್‌ ಕೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 

ಆದಾಗ್ಯೂ, ನಾವು ಎಷ್ಟೇ ದುಬಾರಿ  ಕ್ರೀಮ್‌ಗಳನ್ನು ಬಳಸಿದರೂ ನಮ್ಮ ತ್ವಚೆ ಎಷ್ಟೇ ಕಾಂತಿಯುತವಾಗಿದ್ದರೂ ಕೂಡ ಈ ಓಪನ್‌ ಫೋರ್ಸ್‌ ಅಂದ್ರೆ ಮುಖದಲ್ಲಿನ ರಂಧ್ರಗಳು ಮುಖದ ಸೌಂದರ್ಯವನ್ನೇ ಹಾಳು ಮಾಡಿಬಿಡುತ್ತವೆ. 

ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು  ನಿಮ್ಮ ಮನೆಯಲ್ಲಿಯೇ ಇರುವಂತಹ ಸಾಮಾಗ್ರಿಗಳನ್ನ ಬಳಸಿಕೊಂಡು ತುಂಬಾ ಸುಲಭವಾಗಿ ಮುಖದಲ್ಲಿನ ರಂಧ್ರಗಳನ್ನ ಮಾಯ ಮಾಡಬಹುದು. ಓಪನ್‌ ಪೋರ್ಸ್‌ನಿಂದ ಮುಕ್ತಿಗಾಗಿ  ಇಲ್ಲಿವೆ ಸಿಂಪಲ್‌ ಟಿಪ್ಸ್...‌

ಮುಖದ ಮೇಲಿನ ರಂಧ್ರವನ್ನ ಕಡಿಮೆ ಮಾಡಲು ಐಸ್‌ ಕ್ಯೂಬ್‌ ತುಂಬಾ ಸಹಾಯ ಮಾಡುತ್ತದೆ. ಪ್ರತಿದಿನ 2 ಬಾರಿ ಮುಖವನ್ನ ನೀರಿನಿಂದ ಸ್ವಚ್ಛಗೊಳಿಸಿ, ಸಾಫ್ಟ್‌ ಆಗಿರುಂತಹ ಬಟ್ಟೆಯಲ್ಲಿ ಐಸ್‌ಕ್ಯೂಬ್‌ಗಳನ್ನ ಇಟ್ಟು ಅದನ್ನ ನಿಮ್ಮ ಮುಖದ ಮೇಲೆ, ಹಾಗೆಯೇ ಹೆಚ್ಚು ರಂಧ್ರಗಳಿರುವ ಜಾಗದಲ್ಲಿ 5 ನಿಮಿಷಗಳ ಕಾಲ ಮಸಾಜ್‌ ಮಾಡಿದರೆ ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳು ಕಡಿಮೆಯಾಗುತ್ತವೆ.

ಒಂದು ಬೌಲ್‌ನಲ್ಲಿ ಸ್ವಲ್ಪ ಮೊಸರನ್ನು ತೆಗೆದುಕೊಂಡು ಅದರೊಂದಿಗೆ ಬಾದಾಮಿ ಪುಡಿಯನ್ನ ಸೇರಿಸಿ ಒಂದು ಪ್ಯಾಕ್‌ನ್ನ ತಯಾರಿಸಿಕೊಳ್ಳಿ ನಂತರ.  ಅದನ್ನು ಮುಖಕ್ಕೆ ಹಚ್ಚಿ ಒಂದೆರಡು ನಿಮಿಷ ಮಸಾಜ್‌ ಮಾಡಿ ನಂತರ ಅದು ಒಣಗುವ ವರೆಗು ಹಾಗೆಯೆ ಬಿಡಿ. ಬಳಿಕ, ತಣ್ಣನೆ ನೀರಿನಿಂದ ಮುಖವನ್ನ ವಾಶ್ ಮಾಡಿಕೊಳ್ಳಿ. ಇದರಿಂದ ನಿಮ್ಮ ತ್ವಚೆ ಮೃದಯವಾಗುವುದರ ಜೊತಗೆ ಓಪನ್‌ ಫೋರ್ಸ್‌ಗಳನ್ನ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒಂದು ಬೌಲ್‌ಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿಕೊಳ್ಳಿ . ಇದನ್ನು ಕೈಯಿಂದ ಒಮ್ಮೆ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ಮುಖ ತೊಳೆಯಿರಿ. ಹಾಗೆಯೆ ಎಗ್‌ ವೈಟ್‌ ಜೊತೆ ನಿಂಬೆ ರಸವನ್ನು ಕೂಡಾ ಮಿಕ್ಸ್‌ ಮಾಡಿಕೊಳ್ಳಬಹುದು. ಈ ರೀತಿಯಾಗಿ ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ತಪ್ಪದೆ ಅನುಸರಿಸದರೆ ಮುಖದ ಮೇಲಿನ ರಂಧ್ರ ಮುಚ್ಚುವುದಲ್ಲದೆ, ಚರ್ಮ ಟೈಟ್‌ ಸಹ ಆಗುತ್ತದೆ.

ಅರಿಶಿನ ಹಾಗೂ ರೋಜ್‌ ವಾಟರ್‌ ಅನ್ನು ಚೆನ್ನಾಗಿ ಮಿಕ್ಸ್‌ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳ ನಂತರ ಮುಖ ತೊಳೆಯಿರಿ. ವಾರಕ್ಕೆರಡು ಬಾರಿ ಈ ರೀತಿ ಮಾಡುವುದರಿಂದ ರೋಜ್‌ ವಾಟರ್‌ ಮುಖವನ್ನ ಕ್ಲೀನ್‌ ಹಾಗು ಸಾಫ್ಟ್‌ ಆಗಿ ಮಾಡುತ್ತದೆ. ಇದರ ಜೊತಗೆ ಅರಿಶಿನ ಮುಖವನ್ನ ಕಾಂತಿಯುತವಾಗಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. 

ನೆನಪಿಡಿ ನಾವು ಮುಂಜಾನೆ ಎದ್ದಾಗ ಹೇಗೆ ಚರ್ಮದ ಬಗ್ಗೆ ಕೇರ್ ತೆಗೆದುಕೊಳ್ಳುತ್ತೇವೆಯೋ ಅದೇ ರೀತಿ  ಮಲಗುವ ಮುನ್ನ ಚೆನ್ನಾಗಿ ಮುಖವನ್ನ ತೊಳೆದು ನೈಸರ್ಗಿಕವಾದಂತಹ ಮಾಯಿಶ್ಚರೈಸರ್‌ ಅಪ್ಲೈ ಮಾಡುವುದು ಉತ್ತಮ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು. 

ಸೂಚನೆ :  ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link