ಈ 3 ಕಾಯಿಯಿಂದ ಶಾಂಪೂ ತಯಾರಿಸಿ ಬಳಸಿದ್ರೆ ಬಿಳಿ ಕೂದಲಿನ ಸಮಸ್ಯೆಯೇ ಇರಲ್ಲ! ದಷ್ಟ-ಪುಷ್ಟವಾದ ಉದ್ದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!
ಒತ್ತಡಭರಿತ ಜೀವನ, ಹದಗೆಡುತ್ತಿರುವ ಪರಿಸರದಿಂದಾಗಿ ಕೂದಲು ಹಾನಿಯಾಗುತ್ತಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ದೊರೆಯುವ ರೆಡಿಮೆಡ್ ಶಾಂಪೂಗಳ ಬಳಕೆಯಿಂದ ಕೂದಲು ಬಹಳ ಬೇಗ ಬೆಳ್ಳಗಾಗುತ್ತದೆ.
ಬಿಳಿ ಕೂದಲು, ಕೂದಲು ಉದುರುವಿಕೆ, ಸ್ಪ್ಲಿಟ್ ಹೇರ್ ನಂತಹ ಮೊದಲಾದ ಕೂದಲು ಸಂಬಂಧಿಸಿದ ಸಮಸ್ಯೆಗಳನ್ನು ಆರಂಭದಲ್ಲೇ ಪರಿಹರಿಸದಿದ್ದರೆ ಭವಿಷ್ಯದಲ್ಲಿ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಬಿಳಿ ಕೂದಲನ್ನು ನಿವಾರಿಸಿ ಕಪ್ಪಾದ ದಷ್ಟ-ಪುಷ್ಟವಾದ ಉದ್ದ ಕೂದಲನ್ನು ಹೊಂದಲು ಮನೆಯಲ್ಲೇ ತಯಾರಿಸಿದ ಶಾಂಪೂ ಸಹಾಯಕವಾಗಿದೆ.
ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ನೆಲ್ಲಿಕಾಯಿ, ಸೀಗೆಕಾಯಿ, ಅಂಟವಾಳದ ಕಾಯಿಯಿಂದ ಪರಿಹಾರ ಪಡೆಯಬಹುದು.
ಹಾನಿಗೊಳಗಾದ ಕೂದಲನ್ನು ರಕ್ಷಿಸಲು ನೆಲ್ಲಿಕಾಯಿ ಸಹಕಾರಿ ಆದರೆ, ಸೀಗೆಕಾಯಿ ಕೂದಲು ಉದುರುವಿಕೆಯನ್ನು ತಡೆದು, ಕೂದಲಿಗೆ ಹೊಳಪು ನೀಡುತ್ತದೆ. ಅಂಟವಾಳದ ಕಾಯಿಯಲ್ಲಿ ಕಬ್ಬಿಣದ ಅಂಶವಿದ್ದು ಇದು ಕೂದಲಿಗೆ ನೈಸರ್ಗಿಕ ಬಣ್ಣ ನೀಡಿ ಕೂದಲು ಹಾನಿಗೊಳಗಾಗುವುದನ್ನು ತಡೆಯುತ್ತದೆ.
ರಾತ್ರಿ ಮಲಗುವ ಮುನ್ನ ನೆಲ್ಲಿಕಾಯಿ, ಸೀಗೆಕಾಯಿ, ಅಂಟವಾಳದ ಕಾಯಿಯನ್ನು ಸಮಪ್ರಮಾಣದಲ್ಲಿ ನೆನೆಸಿಡಿ. ಬೆಳಿಗ್ಗೆ ಇವುಗಳನ್ನು ಚೆನ್ನಾಗಿ ಕಾಯಿಸಿ, ಕುದಿಸಿ. ಇದು ತಣ್ಣಗಾದ ಬಳಿಕ ಚೆನ್ನಾಗಿ ರುಬ್ಬಿ ಫಿಲ್ಟರ್ ಮಾಡಿ.
ನೀವು ಬಳಸುವ ಹೇರ್ ಆಯಿಲ್ ಅನ್ನು ಕೂದಲಿಗೆ ಹಾಕಿ ಮಸಾಜ್ ಮಾಡಿ. ಮರುದಿನ ಈ ಹೋಮ್ ಮೇಡ್ ಶಾಂಪೂ ಬಳಸಿ ಇದರಿಂದ ಹೇರ್ ವಾಶ್ ಮಾಡಿದರೆ ಕೂದಲಿನ ಸರ್ವ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.