ಬೇಸಿಗೆಯಲ್ಲಿ ದುರ್ಗಂಧ ಬೀರುವ ಶೂ ವಾಸನೆಯಿಂದ ಪರಿಹಾರಕ್ಕಾಗಿ ಇಲ್ಲಿದೆ ಸಿಂಪಲ್ ಟಿಪ್ಸ್
ಬೇಸಿಗೆಯಲ್ಲಿ ದುರ್ಗಂಧ ಬೀರುವ ಶೂ ವಾಸನೆ ನಿಮ್ಮನ್ನು ಮುಜುಗರಕ್ಕೀಡು ಮಾಡುತ್ತಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವು ಸರಳ ಟಿಪ್ಸ್ ಅನುಸರಿಸುವ ಮೂಲಕ ನೀವು ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು. ಅವುಗಳೆಂದರೆ...
ಶೂಗಳ ಮೇಲೆ ವಿನೆಗರ್ ಅನ್ನು ಸಿಂಪಡಿಸುವುದರಿಂದ ಬೇಸಿಗೆಯಲ್ಲಿ ಗಬ್ಬು ನಾರುವ ಶೂ ವಾಸನೆಯಿಂದ ಪರಿಹಾರ ಪಡೆಯಬಹುದು.
ಕುದಿಯುವ ನೀರಿನಲ್ಲಿ ಟೀ ಬ್ಯಾಗ್ ಹಾಕಿ ಅದು ಬೆಚ್ಚಗಾದ ಬಳಿಕ ಆ ನೀರಿನಿಂದ ಶೂಗಳನ್ನು ವಾಶ್ ಮಾಡಿ. ಇದರಿಂದ ಶೂಗಳಿಂದ ಬರುವ ವಾಸನೆಯನ್ನು ನಿವಾರಿಸಬಹುದು.
ಶೂ ಮತ್ತು ಪಾದಗಳ ವಾಸನೆಯನ್ನು ನಿವಾರಿಸಲು ಅಕ್ಕಿ ತೊಳೆದ ನೀರು ತುಂಬಾ ಪ್ರಯೋಜನಕಾರಿ ಆಗಿದೆ. . ಅಕ್ಕಿಯನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ನೆನೆಸಿ, ಬಳಿಕ ನೀರನ್ನು ಶೋಧಿಸಿ ಆ ನೀರನ್ನು ಬೂಟುಗಳು ಮತ್ತು ಪಾದಗಳ ಮೇಲೆ ಸಿಂಪಡಿಸಿ ಬಳಸುವುದರಿಂದ ಶೂ ವಾಸನೆಯನ್ನು ನಿವಾರಿಸಬಹುದು.
ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಅಡಿಗೆ ಸೋಡಾ ತುಂಬಾ ಪ್ರಯೋಜನಕಾರಿ ಆಗಿದೆ. ಇದಕ್ಕಾಗಿ ರಾತ್ರಿ ಮಲಗುವ ಮುನ್ನ ಶೂಗಳ ಮೇಲೆ ಅಡಿಗೆ ಸೋಡಾವನ್ನು ಸಿಂಪಡಿಸಿ ಬಳಸುವುದು ಪ್ರಯೋಜನಕಾರಿ ಆಗಿದೆ.
ಶೂಗಳ ಒಳಗೆ ಕರ್ಪೂರದ ತುಂಡನ್ನು ಹಾಕುವುದರಿಂದ ಇದು ಶೂಗಳಿಂದ ಬರುವ ದುರ್ವಾಸನೆಯನ್ನು ನಿವಾರಿಸುತ್ತದೆ.