ಈ ಪುಟ್ಟ ಹುಡುಗಿ ಯಾರು ಅಂತ ಗೊತ್ತಾಯ್ತಾ..? ಈಗ ಈಕೆ ಸ್ಟಾರ್‌ ನಟನ ಪತ್ನಿ, ಅಪ್ಪು ಸಿನಿಮಾದ ಹೀರೋಯಿನ್

Sun, 25 Aug 2024-8:16 pm,

ಈಕೆ ತಮಿಳು ನಟ ಆರ್ಯ ಪತ್ನಿ, ಹೆಸರು ಸಯೀಶಾ. ವನಮಗನ್ ಚಿತ್ರದ ಮೂಲಕ ಸಯೀಶಾ ಕಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ಅತಿ ಕಡಿಮೆ ಅವಧಿಯಲ್ಲಿ ಸೂರ್ಯ, ಕಾರ್ತಿ, ವಿಜಯ್ ಸೇತುಪತಿ, ಆರ್ಯ ಮುಂತಾದ ಪ್ರಮುಖ ನಟರೊಂದಿಗೆ ನಟಿಸಿ ಸ್ಟಾರ್‌ ಪಟ್ಟ ಪಡೆದರು.  

ಸಂತೋಷ್ ಪಿ ಜಯಕುಮಾರ್ ನಿರ್ದೇಶನದ ಗಜಿನಿಕಾಂತ್ ಚಿತ್ರದಲ್ಲಿ ನಟಿಸುವಾಗ ಆರ್ಯ ಮತ್ತು ಸಯೀಷಾ ನಡುವೆ ಪ್ರೀತಿ ಹುಟ್ಟಿತು. ಇದರ ಬೆನ್ನಲ್ಲೇ 2019ರಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾದರು.  

ಆಗಸ್ಟ್ 12 ರಂದು ಮುಂಬೈನಲ್ಲಿ ಜನಿಸಿದ ಸಯೀಶಾ ಅವರು ನಟರಾದ ಸೈರಾ ಬಾನು ಮತ್ತು ದಿಲೀಪ್ ಕುಮಾರ್ ಅವರ ಮೊಮ್ಮಗಳು.    

ಸಯೀಶಾ 2015 ರಲ್ಲಿ ತೆಲುಗು ಚಿತ್ರ ಅಖಿಲ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅಜಯ್ ದೇವಗನ್ ಶಿವಾಯ್ ಮೂಲಕ ಬಾಲಿವುಡ್‌ಗೆ ಎಂಟ್ಟಿ ಕೊಟ್ಟರು.  

ಎಎಲ್ ವಿಜಯ್-ಜಯಂ ರವಿ ಕಾಂಬಿನೇಷನ್ ನಲ್ಲಿ ತೆರೆಕಂಡ ವನಮಗನ್ ಚಿತ್ರದ ಮೂಲಕ ಕಾಲಿವುಟ್‌ಗೆ ನಾಯಕಿಯಾಗಿ ಪ್ರವೇಶ ಮಾಡಿದರು. ಯುವರತ್ನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಬಂದ ಚೆಲುವೆ ಅಪ್ಪು ಜೊತೆ ತೆರೆ ಹಂಚಿಕೊಂಡರು.  

ಮದುವೆ ನಂತರ ಸಿನಿಮಾಗಳಿಂದ ದೂರ ಉಳಿದ ಸಯೀಶಾ, ಕಳೆದ ವರ್ಷ ಸಿಂಬು ಅಭಿನಯದ ಬಟು ತಾಳ ಚಿತ್ರದ ರವಾಡಿ ಎಂಬ ಹಾಡಿಗೆ ಡ್ಯಾನ್ಸ್ ಮಾಡಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

ಮದುವೆಯ ನಂತರ ಆರ್ಯ ಜೊತೆ ‘ಟೆಡ್ಡಿ’ ಸಿನಿಮಾದಲ್ಲಿ ಮಾತ್ರ ನಟಿಸಿದ ಸಯೀಶಾ, ಆ ನಂತರ ಚಿತ್ರರಂಗದಲ್ಲಿ ನಾಯಕಿಯಾಗಿ ನಟಿಸುವುದನ್ನು ಬಿಟ್ಟಿದ್ದರು.  

ಇತ್ತೀಚೆಗೆ, ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ನಟಿ ಸಯೀಶಾ ಅವರ ಬಾಲ್ಯದ ಫೋಟೋ ಸಹ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link