ಹಬ್ಬದ ಸೀಸನ್‌ನಲ್ಲಿ ಕಾರು ಖರೀದಿಸುವ ಯೋಜನೆ ಇದೆಯೇ? ಈ ಮೂಲಕ ಹಂತ ಹಂತವಾಗಿ ಸಾಲ ಪಡೆಯಬಹುದು

Thu, 30 Sep 2021-9:29 pm,

ಎಸ್‌ಬಿಐ ಪ್ರಕಾರ, ಬ್ಯಾಂಕ್ ಕಾರು ಸಾಲವನ್ನು ವಾರ್ಷಿಕ ಶೇ .7.75 ರ ಬಡ್ಡಿದರದಲ್ಲಿ ನೀಡುತ್ತಿದೆ. ಇದರಲ್ಲಿ, ಗ್ರಾಹಕರು YONO ಆಪ್ ಮೂಲಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ, 0.25% ರಿಯಾಯಿತಿ ಪಡೆಯುತ್ತಾರೆ. ಅಂದರೆ, ಅವರಿಗೆ ಕಾರ್ ಸಾಲದ ಆರಂಭಿಕ ಬಡ್ಡಿ ದರವು ವರ್ಷಕ್ಕೆ 7.50 ಶೇಕಡಾ ಆಗಿರುತ್ತದೆ. ಕಾರ್ ಸಾಲದ ಮರುಪಾವತಿಯ ಅವಧಿ 3-7 ವರ್ಷಗಳು. ಅಂದರೆ, ಕಾರ್ ಸಾಲವನ್ನು ಗರಿಷ್ಠ 7 ವರ್ಷಗಳಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಗ್ರಾಹಕರು ಮುಂಗಡ ಇಎಂಐ ಪಾವತಿಸುವ ಅಗತ್ಯವಿಲ್ಲ. 

21 ರಿಂದ 67 ವರ್ಷ ವಯಸ್ಸಿನ ಗ್ರಾಹಕರು ಎಸ್‌ಬಿಐ ಕಾರ್ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ವೃತ್ತಿಪರರು, ಸ್ವಯಂ ಉದ್ಯೋಗಿಗಳು, ಉದ್ಯಮಿಗಳು, ಸ್ವಯಂ ಪಾಲುದಾರಿಕೆ ಸಂಸ್ಥೆಗಳು ಅಥವಾ ಸಹ-ಅರ್ಜಿದಾರರ ವಾರ್ಷಿಕ ಆದಾಯ ಅಥವಾ ನಿವ್ವಳ ಲಾಭವು 3 ಲಕ್ಷ ರೂಗಳಾಗಿರಬೇಕು. ಈ ವರ್ಗದಲ್ಲಿ ಪಡೆಯಬಹುದಾದ ಗರಿಷ್ಠ ಸಾಲವು ವಾರ್ಷಿಕ ನಿವ್ವಳ ಲಾಭ ಅಥವಾ ಒಟ್ಟು ಟ್ಯಾಕ್ಸೇಬಲ್ ಇನ್ಕಮ್  4 ಪಟ್ಟು ಹೆಚ್ಚಾಗಿರುತ್ತದೆ. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ ಜನರು ವಾರ್ಷಿಕ 4 ಲಕ್ಷ ಆದಾಯವನ್ನು ಹೊಂದಿರಬೇಕು. ಅವರು ವಾರ್ಷಿಕ ಆದಾಯದ 3 ಪಟ್ಟು ಹೆಚ್ಚು ಕಾರು ಸಾಲವನ್ನು ಪಡೆಯಬಹುದು.   

ಎಸ್‌ಬಿಐ ಕಾರ್ ಲೋನ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನಿಮ್ಮ ಅರ್ಹತೆಯನ್ನು https://onlineapply.sbi.co.in/personal-banking/auto-loan?se=Product&cp=SBICOIN&ag=Genl ಅನ್ನು ಕ್ಲಿಕ್ ಮಾಡುವ ಮೂಲಕ ಪರಿಶೀಲಿಸಿಕೊಳ್ಳ ಬಹುದು.     

ಎಸ್‌ಬಿಐನ ಮೊಬೈಲ್ ಆಪ್ ಯೋನೊ ಎಸ್‌ಬಿಐ ಮೂಲಕವೂ ಕಾರ್ ಲೋನ್‌ಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ಮೊದಲು YONO ಖಾತೆಗೆ ಹೋಗಿ. ಅಲ್ಲಿರುವ ಮೆನುಗೆ ಹೋಗಿ ಮತ್ತು ಸಾಲಗಳ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಕಾರ್ ಸಾಲದ ಮೇಲೆ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಹತೆಯನ್ನು ಪರಿಶೀಲಿಸಿ. ಇದರ ನಂತರ, ಕೆಲವು ವಿವರಗಳನ್ನು ನೀಡುವ ಮೂಲಕ ಸಾಲಕ್ಕಾಗಿ ವಿನಂತಿಸಿ.  ಸಾಲದ ಮೊತ್ತದ ಮಾಹಿತಿಯನ್ನು ಪಡೆಯುತ್ತೀರಿ. ಅದರ ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಸಬ್ಮಿಟ್  ಕ್ಲಿಕ್ ಮಾಡಿ.  =======================================

ZEENEWS TRENDING STORIES

By continuing to use the site, you agree to the use of cookies. You can find out more by Tapping this link