SBI ಗ್ರಾಹಕರೇ ನಿಮಗಿದು ತಿಳಿದಿರಲಿ: ಜಸ್ಟ್ 1 ಕಾಲ್ ಮಾಡಿದ್ರೆ ಸಿಗುತ್ತೆ ಈ ಎಲ್ಲಾ ಸೇವೆ
ಎಸ್‌ಬಿಐ ಗ್ರಾಹಕರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಒಂದೇ ಕರೆಯಲ್ಲಿ ಪರಿಶೀಲಿಸಬಹುದು. ಜೊತೆಗೆ, ಅವರು ತಮ್ಮ ಕೊನೆಯ ಐದು ವಹಿವಾಟುಗಳ ಬಗ್ಗೆ ಮಾಹಿತಿಯನ್ನು ಸ್ವೀಕರಿಸುತ್ತಾರೆ.
ನಿಮ್ಮ ಡೆಬಿಟ್/ಕ್ರೆಡಿಟ್ ಕಾರ್ಡ್ ಕಳುವಾಗಿದ್ದರೆ ಅಥವಾ ಕಳೆದುಹೋದರೆ ಅಥವಾ ಯಾವುದೇ ಕಾರಣಕ್ಕಾಗಿ ಅದನ್ನು ನಿರ್ಬಂಧಿಸಬೇಕಿದ್ದರೆ ನೀವು ಈ ಸಂಖ್ಯೆಯನ್ನು ಡಯಲ್ ಮಾಡಬಹುದು ಮತ್ತು ಅದನ್ನು ಸುಲಭವಾಗಿ ನಿರ್ಬಂಧಿಸಬಹುದು.
ಎಸ್‌ಬಿಐ ಗ್ರಾಹಕರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಹೊಸ ಚೆಕ್ ಬುಕ್ ಅನ್ನು ಸಹ ಪಡೆಯಬಹುದು. ಮಾತ್ರವಲ್ಲ ಅದರ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಎಸ್‌ಬಿಐ ಬ್ಯಾಂಕ್ ಗ್ರಾಹಕರು TDS ಅಥವಾ ಠೇವಣಿ ಬಡ್ಡಿ ಪ್ರಮಾಣಪತ್ರವನ್ನು ಇ-ಮೇಲ್ ಮೂಲಕ ಪಡೆಯಬಹುದು. ಇದಕ್ಕಾಗಿ ನೀವು ಎಸ್‌ಬಿಐನ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಬೇಕಾಗುತ್ತದೆ.
ಗ್ರಾಹಕರು ಎಸ್‌ಬಿಐನ ಸಂಪರ್ಕ ಕೇಂದ್ರಕ್ಕೆ ಕರೆ ಮಾಡಿ ಹೊಸ ಎಟಿಎಂ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.