SBI ಗ್ರಾಹಕರಿಗೆ ಸಿಹಿ ಸುದ್ದಿ : ನಿಮಗಾಗಿ ಭರ್ಜರಿ ಹೊಸ ಪ್ಲಾನ್ ಜಾರಿ ಮಾಡಿದ ಬ್ಯಾಂಕ್!

Wed, 06 Jul 2022-3:18 pm,

ಕಾನೂನು ವೆಚ್ಚಗಳನ್ನು ಸಹ ಭರಿಸಲಾಗುವುದು : ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಈ ಯೋಜನೆಯು ಯಾವುದೇ ಮೂರನೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಅಥವಾ ಅವರಿಂದ ತನ್ನನ್ನು ರಕ್ಷಿಸಿಕೊಳ್ಳುವ ವೆಚ್ಚವನ್ನು ಸಹ ಒಳಗೊಂಡಿರುತ್ತದೆ. ಇದರ ಹೊರತಾಗಿ, ಐಟಿ ತಜ್ಞರ ಸೇವೆಗಳನ್ನು ಪಡೆಯುವ ಮೂಲಕ ಡೇಟಾವನ್ನು ಮರುಸ್ಥಾಪಿಸಲು ತಗಲುವ ವೆಚ್ಚವನ್ನು ಸಹ ಈ ಯೋಜನೆಯಡಿ ಒಳಗೊಂಡಿದೆ. ಇಷ್ಟೇ ಅಲ್ಲ, ಅಂತಹ ಯಾವುದೇ ಘಟನೆಯ ನಂತರ ಬಲಿಪಶು ಮಾನಸಿಕ ಆಘಾತವನ್ನು ಅನುಭವಿಸಿದರೆ, ಮನಶ್ಶಾಸ್ತ್ರಜ್ಞನ ವೆಚ್ಚವನ್ನು ಸಹ ಯೋಜನೆಯ ಅಡಿಯಲ್ಲಿ ಭರಿಸಲಾಗುವುದು ಎಂಬುದು ಅತ್ಯಂತ ಮುಖ್ಯವಾದ ವಿಷಯವಾಗಿದೆ.

ಬ್ಯಾಂಕ್ ನೀಡಿದೆ ಈ ಮಾಹಿತಿ : ಈ ಮಾಹಿತಿಯನ್ನು ನೀಡಿದ ಎಸ್‌ಬಿಐ ಜನರಲ್ ಇನ್ಶೂರೆನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಆನಂದ್ ಪೇಜಾವರ್, “ಇಂಟರ್‌ನೆಟ್ ನಮ್ಮ ಜೀವನವನ್ನು ಸುಲಭಗೊಳಿಸಿದ್ದರೆ, ಅದು ಹಿಂದೆಂದಿಗಿಂತಲೂ ಹೆಚ್ಚು ಅಪಾಯಕಾರಿ ಜಗತ್ತನ್ನು ಸಹ ಸೃಷ್ಟಿಸಿದೆ. ಡಿಜಿಟಲ್ ರೂಪಾಂತರದ ಕೇಂದ್ರದಲ್ಲಿ ಒಬ್ಬರು ಬರುವುದರೊಂದಿಗೆ, ಹೊಸ ಯುಗದ ಉದಯೋನ್ಮುಖ ಅಪಾಯಗಳಿಗೆ ಸಹ ಒಬ್ಬರು ಒಡ್ಡಿಕೊಳ್ಳುತ್ತಾರೆ. SBI ಜನರಲ್ CyberVaultEdge ಮೂಲಕ, ನಾವು ಸಮಗ್ರ ಮತ್ತು ಕೈಗೆಟುಕುವ ಉತ್ಪನ್ನದ ಮೂಲಕ ಇಂಟರ್ನೆಟ್ ಆಧಾರಿತ ಅಪಾಯ/ಸೈಬರ್ ಅಪಾಯಗಳಿಂದ ಉಂಟಾಗುವ ಹಣಕಾಸಿನ ನಷ್ಟವನ್ನು ತಗ್ಗಿಸುವ ಮೂಲಕ ವ್ಯಕ್ತಿಗಳನ್ನು ರಕ್ಷಿಸುವ ಗುರಿಯನ್ನು ಹೊಂದಿದ್ದೇವೆ.

ಯೋಜನೆಯಲ್ಲಿ ಏನನ್ನು ಒಳಗೊಂಡಿರುತ್ತದೆ? : ಈ ಯೋಜನೆಯಡಿ, ಸೈಬರ್ ಅಪರಾಧ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ವೈಯಕ್ತಿಕ ಮಾಹಿತಿಯ ಕಳ್ಳತನ ಮತ್ತು ಮೋಸದ ವಹಿವಾಟಿನಿಂದ ಗ್ರಾಹಕರನ್ನು ರಕ್ಷಿಸಲು ಬ್ಯಾಂಕ್ ಪ್ರಯತ್ನಿಸಿದೆ. ಬ್ಯಾಂಕ್ SBI ಜನರಲ್ ಸೈಬರ್ ವಾಲ್ಟ್ ಎಡ್ಜ್ ಅನ್ನು ಅದ್ಭುತವಾಗಿ ವಿನ್ಯಾಸಗೊಳಿಸಿದೆ. ಎಸ್‌ಬಿಐನ ಈ ಹೊಸ ಯೋಜನೆಯು ಸೈಬರ್ ಕ್ರೈಮ್‌ನಿಂದ ಮತ್ತು ಇಂಟರ್ನೆಟ್‌ನಲ್ಲಿ ಯಾವುದೇ ಚಟುವಟಿಕೆ ಅಥವಾ ಡಿಜಿಟಲ್ ವಹಿವಾಟಿನ ಸಮಯದಲ್ಲಿ ಜನರನ್ನು ರಕ್ಷಿಸುತ್ತದೆ. ಅನಧಿಕೃತ ಇ-ವಹಿವಾಟುಗಳು, ಗುರುತಿನ ಕಳ್ಳತನದ ನಷ್ಟ, ಸಾಮಾಜಿಕ ಮಾಧ್ಯಮ ಟ್ರೋಲಿಂಗ್, ಬೆದರಿಸುವಿಕೆ ಮತ್ತು ಹಿಂಬಾಲಿಸುವುದು ಸೇರಿದಂತೆ ಇತರ ಆನ್‌ಲೈನ್ ಅಪರಾಧಗಳನ್ನು ಇದು ಒಳಗೊಂಡಿದೆ ಎಂದು ಬ್ಯಾಂಕ್ ಮಾಹಿತಿ ನೀಡಿದೆ.

ಸೈಬರ್ ಅಪರಾಧಗಳನ್ನು ರಕ್ಷಿಸಲು ಈ ಪ್ಲಾನ್ : ಸಿಇಆರ್‌ಟಿ-ಇನ್ ಮಾಹಿತಿಯ ಪ್ರಕಾರ, 2021 ರಲ್ಲಿ ಸೈಬರ್ ಭದ್ರತಾ ಲೋಪಗಳಿಂದ ಇಲ್ಲಿಯವರಿಗೆ ಒಟ್ಟು 14.02 ಲಕ್ಷಕ್ಕೆ ಸೈಬರ್ ಅಪರಾಧಗಳು ದಾಖಲಾಗಿವೆ. ಇದು 2018 ರಲ್ಲಿ 2.08 ಲಕ್ಷ ಇತ್ತು. ಬ್ಯಾಂಕ್‌ಗಳು (ಖಾಸಗಿ ಮತ್ತು ಸಾರ್ವಜನಿಕ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಸೈಬರ್ ಅಪರಾಧ, ಎಟಿಎಂ/ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್ ವಂಚನೆಗಳಿಂದಾಗಿ 2020-21ರಲ್ಲಿ ಒಟ್ಟು 63.4 ಕೋಟಿ ರೂಪಾಯಿಯನ್ನು ಸೈಬರ್ ಖದೀಮರು ಬಾಚಿದ್ದಾರೆ. ಹೀಗಾಗಿ, ಎಸ್‌ಬಿಐನ ಈ ಯೋಜನೆಯುವು ಗ್ರಾಹಕರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ ಎಂದು ತಿಳಿಸಿದ್ದಾರೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link