ಎಟಿಎಂನಿಂದ ಹಣ ವಿಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ.! ಸಂಕಷ್ಟದಲ್ಲಿ ಗ್ರಾಹಕರು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ಹಣ ವಿಡ್ರಾ ಮಾಡುವ ನಿಯಮವನ್ನು ಬದಲಾಯಿಸಿದೆ. ನೀವು ಕೂಡಾ ಎಸ್ ಬಿಐ ಗ್ರಾಹಕರಾಗಿದ್ದರೆ ಈ ಹೊಸ ನಿಯಮವನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಒಟಿಪಿ ಆಧಾರದ ಮೇಲೆ ನಗದು ಡ್ರಾ ಮಾಡುವ ಸೌಲಭ್ಯವನ್ನು ನೀಡುತ್ತಿದೆ. ಹೀಗಾಗಿ ಗ್ರಾಹಕರು, ಹಣ ಡ್ರಾ ಮಾಡುವ ವೇಳೆ ತಮ್ಮ ಫೋನ್ ಅನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ.
ನೊಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುವುದರಿಂದ, ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಿಮ್ಮೊಂದಿಗೆ ಇಟ್ಟುಕೊಂಡಿರಬೇಕು. OTP ಹಾಕಿದ ನಂತರವೇ ಎಟಿಎಂ ನಿಂದ ಹಣವನ್ನು ಡ್ರಾ ಮಾಡುವುದು ಸಾಧ್ಯವಾಗುತ್ತದೆ.
10,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಡ್ರಾ ಮಾಡಬೇಕಾದರೆ OTP ಹಾಕಬೇಕಾಗುತ್ತದೆ. 10,000 ಕ್ಕಿಂತ ಕಡಿಮೆ ಹಣ ಡ್ರಾ ಮಾಡಬೇಕಾದರೆ OTP ಅಗತ್ಯವಿಲ್ಲ.
ಎಟಿಎಂನಿಂದ ಹಣ ತೆಗೆಯಲು ಹೋದಾಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ. ಇದಾದ ನಂತರ ನಿಮ್ಮ ಫೋನ್‌ಗೆ OTP ಬರುತ್ತದೆ. ಈ ಕೋಡ್ ಕೇವಲ ಒಂದು ವಹಿವಾಟಿಗೆ ಮಾತ್ರ ಮಾನ್ಯವಾಗಿರುತ್ತದೆ.