Electoral Bonds: ಎಸ್‌ಬಿಐನ ಎಲೆಕ್ಟೋರಲ್ ಬಾಂಡ್ ಡೇಟಾದಿಂದ ಯಾವ ಮಾಹಿತಿ ಲಭ್ಯವಾಗುತ್ತೆ?

Wed, 13 Mar 2024-2:56 pm,

ಎಸ್‌ಬಿ‌ಐ ಎಲೆಕ್ಟೋರಲ್ ಬಾಂಡ್ ಯೋಜನೆ ಸಂಬಂಧಿತ ಡೇಟಾವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ, 2024ರ ಮಾರ್ಚ್ 15 ರೊಳಗೆ ಇಸಿ ತನ್ನ ವೆಬ್‌ಸೈಟ್‌ನಲ್ಲಿ ಈ ಡೇಟಾವನ್ನು ಅಪ್‌ಲೋಡ್ ಮಾಡಬೇಕಾಗಿದೆ. ಈ ಚುನಾವಣಾ ಬಾಂಡ್ ಡೇಟಾದಲ್ಲಿ ಯಾವ ಮಾಹಿತಿಗಳು ಲಭ್ಯವಾಗಲಿವೆ. ಎಲೆಕ್ಟೋರಲ್ ಬಾಂಡ್ ಡೇಟಾಗೆ ಸಂಬಂಧಿಸಿದ 5 ಪ್ರಮುಖ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. 

ಚುನಾವಣಾ ಬಾಂಡ್ ಯೋಜನೆಯ ಎಲ್ಲಾ ಡೇಟಾವನ್ನು ಚುನಾವಣಾ ಆಯೋಗಕ್ಕೆ ಹಸ್ತಾಂತರಿಸಲು ಸುಪ್ರೀಂ ಕೋರ್ಟ್ ಸ್ಟೇಟ್ ಬ್ಯಾಂಕ್‌ಗೆ  ಮಾರ್ಚ್ 12 ರ ಸಂಜೆಯವರೆಗೆ ಗಡುವು ನೀಡಿತ್ತು.  ಇದರಲ್ಲಿ ಪ್ರತಿ ಎಲೆಕ್ಟೋರಲ್ ಬಾಂಡ್ ಖರೀದಿಸಿದ ದಿನಾಂಕ, ಖರೀದಿದಾರರ ಹೆಸರು, ಬಾಂಡ್‌ನ ಮೊತ್ತ ಇತ್ಯಾದಿಗಳ ಬಗ್ಗೆ ಎಸ್‌ಬಿಐ ಚುನಾವಣಾ ಆಯೋಗಕ್ಕೆ ವಿವರ ನೀಡಬೇಕಿತ್ತು. ಪ್ರತಿಯೊಂದು ರಾಜಕೀಯ ಪಕ್ಷವು ಚುನಾವಣಾ ಬಾಂಡ್‌ಗಳಿಂದ ಎಷ್ಟು ದೇಣಿಗೆ ಪಡೆದಿದೆ ಎಂಬ ವಿವರವನ್ನೂ ಕೂಡ ಇದರಲ್ಲಿ ಉಲ್ಲೇಖಿಸಬೇಕಿತ್ತು. 

ವಾಸ್ತವವಾಗಿ, ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು  ಸ್ವೀಕರಿಸಿದ ದೇಣಿಗೆಗಳ ಕುರಿತು ಭಾರತದ ಚುನಾವಣಾ ಆಯೋಗ ತನ್ನದೇ ಆದ ಡೇಟಾವನ್ನು ಹೊಂದಿದೆ. ಅವರು ಮಾರ್ಚ್ 15ರ ಸಂಜೆಯೊಳಗೆ ಈ ಡೇಟಾವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕಾಗಿದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಎಲೆಕ್ಟೋರಲ್ ಬಾಂಡ್ ಡೇಟಾವನ್ನು ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಚುನಾವಣಾ ಬಾಂಡ್‌ಗಳ ಎಲ್ಲಾ ಡೇಟಾವನ್ನು ಒಂದೇ ಸ್ಥಳದಲ್ಲಿ ಲಭ್ಯವಾಗುವಂತೆ ಇದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 

ಎಲೆಕ್ಟೋರಲ್ ಬಾಂಡ್ ಡೇಟಾದಲ್ಲಿ ಯಾವ ವ್ಯಕ್ತಿ ಮತ್ತು ಕಂಪನಿಗಳು ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ ಎಂಬ ಸಂಪೂರ್ಣ ಪಟ್ಟಿಯನ್ನು ಬಹಿರಂಗಪಡಿಸಲಾಗುವುದು. ಅಷ್ಟೇ ಅಲ್ಲದೆ, ಅವೌ ಯಾವ ದಿನಾಂಕದಂದು ಎಷ್ಟು ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದಾರೆ. ಈ ಚುನಾವಣಾ ಬಾಂಡ್‌ಗಳನ್ನು ಯಾರು ಪಡೆದುಕೊಂಡಿದ್ದಾರೆ ಎಂಬಿತ್ಯಾದಿ ವಿವರಗಳು ಕೂಡ ಇದರಲ್ಲಿ ಲಭ್ಯವಾಗಲಿವೆ. 

ಚುನಾವಣಾ ಬಾಂಡ್‌ಗಳನ್ನು ಖರೀದಿಸುವವರ ಮತ್ತು ಎನ್‌ಕ್ಯಾಶ್ ಮಾಡುವವರ ವಿವರಗಳನ್ನು ಹೊಂದಿಸಲು ಸುಪ್ರೀಂ ಕೋರ್ಟ್ ಕೇಳಿಲ್ಲ. ಎ ಕಂಪನಿಯು 10,000 ರೂಪಾಯಿಗಳ ಎಲೆಕ್ಟೋರಲ್ ಬಾಂಡ್ ಅನ್ನು ಖರೀದಿಸಿದೆ ಮತ್ತು X ಪಕ್ಷವು 10,000 ರೂಪಾಯಿಗಳ ಬಾಂಡ್ ಅನ್ನು ಎನ್‌ಕ್ಯಾಶ್ ಮಾಡಿದೆ ಎಂದು ಡೇಟಾ ತೋರಿಸುತ್ತದೆ ಎಂದು ಭಾವಿಸೋಣ. A ಗೆ ಚುನಾವಣಾ ಬಾಂಡ್ ನೀಡಿದೆ ಎಂಬುದನ್ನು ಇದು ದೃಢಪಡಿಸುವುದಿಲ್ಲ. 

ಚುನಾವಣಾ ಆಯೋಗಕ್ಕೆ ಎಸ್‌ಬಿಐ ಸಲ್ಲಿಸಿದ ವಿವರಗಳಲ್ಲಿ ಪ್ರತಿ ಬಾಂಡ್‌ನ 'ಅನನ್ಯ ಸಂಖ್ಯೆ' ಒಳಗೊಂಡಿರಬಾರದು. ಖರೀದಿದಾರ ಮತ್ತು ಸ್ವೀಕರಿಸುವ ಇಬ್ಬರ ಬಾಂಡ್ ಸಂಖ್ಯೆಗಳು ತಿಳಿದಿದ್ದರೆ, ನಂತರ ಯಾರು ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದನ್ನು ಕಂಡುಹಿಡಿಯಬಹುದು.

ಆ ವಿಶಿಷ್ಟ ಸಂಖ್ಯೆ ಗೊತ್ತಿದ್ದರೂ ಕಾರ್ಪೊರೇಟ್ ದಾನಿಗಳ ವಿಷಯದಲ್ಲಿ ಖಚಿತವಾಗಿ ಏನನ್ನೂ ಹೇಳಲಾಗುವುದಿಲ್ಲ. ಎಲೆಕ್ಟೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಿದಾಗ, ಕಂಪನಿಗಳ ಕಾಯಿದೆಯಲ್ಲೂ ಬದಲಾವಣೆಗಳನ್ನು ಮಾಡಲಾಯಿತು. ಕಂಪನಿಯು ಎಷ್ಟೇ ನಷ್ಟವನ್ನು ಅನುಭವಿಸುತ್ತಿದ್ದರೂ ಅದು ಬಾಂಡ್‌ಗಳನ್ನು ಖರೀದಿಸಬಹುದು.

ತಜ್ಞರ ಪ್ರಕಾರ, ಇದು ರಾಜಕೀಯ ನಿಧಿಗಾಗಿ 'ಶೆಲ್ ಕಂಪನಿ'ಗಳನ್ನು ಸ್ಥಾಪಿಸಲು ದೊಡ್ಡ ಕಾರ್ಪೊರೇಟ್‌ಗಳಿಗೆ ದಾರಿ ಮಾಡಿಕೊಟ್ಟಿತು. ಉದಾಹರಣೆಗೆ, 'ನ್ಯೂಪಾಲ್' ಹೆಸರಿನ ಕಂಪನಿಯು ದೊಡ್ಡ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಎಂದು ಡೇಟಾ ಬಹಿರಂಗಪಡಿಸಿದರೆ.  ಆ ಕಂಪನಿಯು ಪ್ರಸಿದ್ಧವಾಗಿಲ್ಲದಿದ್ದರೆ, 'ನ್ಯೂಪಲ್' ಹಿಂದೆ ಯಾವ ದೊಡ್ಡ ಕಾರ್ಪೊರೇಟ್ ದಾನಿ ಇದ್ದಾರೆ ಎಂಬುದನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. 

ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಪ್ರಕಾರ, 2017-18 ಮತ್ತು 2022-23 ರ ನಡುವೆ ಒಟ್ಟು 11,987 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಲಾಗಿದೆ. ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಗರಿಷ್ಠ ದೇಣಿಗೆಯನ್ನು (55%) ಸ್ವೀಕರಿಸಿದೆ. ಚುನಾವಣಾ ಬಾಂಡ್‌ಗಳಿಂದ ಬಿಜೆಪಿ ಒಟ್ಟು 6,566 ಕೋಟಿ ರೂಪಾಯಿ ದೇಣಿಗೆ ಪಡೆದಿದೆ. ಕಾಂಗ್ರೆಸ್‌ 1,123 ಕೋಟಿ ರೂಪಾಯಿ ಮತ್ತು ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) 1,093 ಕೋಟಿ ರೂಪಾಯಿ ದೇಣಿಗೆಗಳು ಚುನಾವಣಾ ಬಾಂಡ್‌ಗಳಿಂದ ಬಂದಿವೆ. ಭಾರತ್ ರಾಷ್ಟ್ರ ಸಮಿತಿ ₹ 913 ಕೋಟಿ, ಬಿಜು ಜನತಾ ದಳ ₹ 774 ಕೋಟಿ, ಡಿಎಂಕೆ ₹ 617 ಕೋಟಿ, ವೈಎಸ್‌ಆರ್ ಕಾಂಗ್ರೆಸ್ ₹ 382 ಕೋಟಿ, ತೆಲುಗು ದೇಶಂ ಪಕ್ಷ ₹ 147 ಕೋಟಿ ಎಲೆಕ್ಟೋರಲ್ ಬಾಂಡ್‌ಗಳಿಂದ ಪಡೆದಿವೆ ಎಂದು ಮಾಹಿತಿ ಲಭ್ಯವಾಗಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link