SBIನ ಈ ಯೋಜನೆಯಡಿ ಒಂದೇ ಬಾರಿಗೆ ಹೂಡಿಕೆ ಮಾಡಿ ಪ್ರತಿ ತಿಂಗಳಿಗೆ ಉತ್ತಮ ಆದಾಯ ಪಡೆಯಿರಿ

Mon, 22 Feb 2021-12:13 pm,

1. ಉಳಿತಾಯ ಖಾತೆಗಿಂತಲೂ ಹೆಚ್ಚಿನ ಬಡ್ಡಿ ಸಿಗುತ್ತದೆ - ಈ ಯೋಜನೆಯಲ್ಲಿ ಹೂಡಿಕೆದಾರರಿಗೆ ಅವರ ಮೂಲಧನದ ಜೊತೆಗೆ ಅದರ ಬಡ್ಡಿ ಕೂಡ ನೀಡಲಾಗುತ್ತದೆ. ಈ ಬಡ್ಡಿ ಖಾತೆಯಲ್ಲಿ ಉಳಿದ ಹಣದ ಮೇಲೆ ತ್ರೈಮಾಸಿಕ ಚಕ್ರಬಡ್ಡಿ ದರ ಆಗಿರಲಿದೆ. ಪ್ರಸ್ತುತ ಅನಿಶ್ಚಿತತೆಯ ವಾತಾವರಣ ಇರುವುದರಿಂದ ಹೂಡಿಕೆದಾರರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿ ಉಳಿತಾಯ ಖಾತೆಗಿಂತಲೂ (SBI SB Account) ಹೆಚ್ಚು ಬಡ್ಡಿ ಸಿಗುತ್ತದೆ. 

2. ಈ ಖಾತೆಯನ್ನು ನೀವು ಜಂಟಿಯಾಗಿ ಕೂಡ ನಿರ್ವಹಿಸಬಹುದು - ಯೋಜನೆಯ ಅಡಿ ಟರ್ಮ್ ಡಿಪಾಸಿಟ್ ಮೇಲೆ ಯಾವ ದರದಲ್ಲಿ ಬಡ್ಡಿ ಸಿಗುತ್ತದೆಯೋ, ಅದೇ ಬಡ್ಡಿ ದರ ಇದಕ್ಕೂ ಅನ್ವಯಿಸುತ್ತದೆ. ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯನ್ನು ತಮ್ಮದಾಗಿಸಿಕೊಳ್ಳಬಹುದು ಮತ್ತು ಪ್ರತ್ಯೇಕವಾಗಿ ಅಥವಾ ಜಂಟಿಯಾಗಿ ಈ ಯೋಜನೆಯ ಅಡಿ ಖಾತೆ ತೆರೆಯಬಹುದು.

3. Annuity Deposit Scheme ನ ವೈಶಿಷ್ಟ್ಯಗಳು - ಯೋಜನೆಯಡಿಯಲ್ಲಿ, ಗ್ರಾಹಕರು ಒಂದೇ ಬಾರಿಗೆ ಒಂದು ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ ಮತ್ತು ಅದರ ನಂತರ ಅಸಲು ಮತ್ತು ಬಡ್ಡಿಯನ್ನು ಮಾಸಿಕ ಕಂತಾಗಿ ಸ್ವೀಕರಿಸಲಾಗುತ್ತದೆ. - ಠೇವಣಿ ಅವಧಿ: 36 ತಿಂಗಳು, 60 ತಿಂಗಳು, 54 ತಿಂಗಳು ಅಥವಾ 120 ತಿಂಗಳು. - ಎಸ್‌ಬಿಐನ ಎಲ್ಲಾ ಶಾಖೆಗಳಲ್ಲಿ ಲಭ್ಯವಿದೆ. - ಕನಿಷ್ಠ ಠೇವಣಿ ಮೊತ್ತ - 25 ಸಾವಿರ ರೂಪಾಯಿ. - ಕನಿಷ್ಠ ಅನೂಟಿ : 1 ಸಾವಿರ ರೂಪಾಯಿ. - ಟರ್ಮ್ ಠೇವಣಿಗಳ ಬಡ್ಡಿದರಗಳು ಈ ಯೋಜನೆಗೆ ಅನ್ವಯಿಸುತ್ತವೆ. - ಎಸ್‌ಬಿಐ ಸಿಬ್ಬಂದಿ ಮತ್ತು ಎಸ್‌ಬಿಐ ಪಿಂಚಣಿದಾರರಿಗೆ 1% ಹೆಚ್ಚಿನ ಬಡ್ಡಿ ಸಿಗುತ್ತದೆ. - ಹಿರಿಯ ನಾಗರಿಕರಿಗೆ ಶೇಕಡಾ 0.5 ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. - ಠೇವಣಿಯ ಮುಂದಿನ ತಿಂಗಳು ನಿಗದಿತ ದಿನಾಂಕದಿಂದ ಅನೂಟಿ ಪಾವತಿಸಲಾಗುವುದು ಮತ್ತು ದಿನಾಂಕ (29, 30 ಮತ್ತು 31) ಯಾವುದೇ ತಿಂಗಳಲ್ಲಿ ಬರದಿದ್ದರೆ, ಮುಂದಿನ ತಿಂಗಳು ಒಂದನೇ ತಾರೀಖಿಗೆ ಅನೂಟಿಯನ್ನು ಪಾವತಿಸಲಾಗುತ್ತದೆ. - ಟಿಡಿಎಸ್ ಅನ್ನು ಕಡಿತಗೊಳಿಸಿದ ನಂತರ ಮತ್ತು ಲಿಂಕ್ ಮಾಡಿದ ಉಳಿತಾಯ ಖಾತೆ ಅಥವಾ ಚಾಲ್ತಿ ಖಾತೆಗೆ ಜಮಾ ಮಾಡಿದ ನಂತರ ಅನೂಟಿ ಪಾವತಿ ಮಾಡಲಾಗುತ್ತದೆ.

4. ಯುನಿವರ್ಸಲ್ ಪಾಸ್ ಬುಕ್ ವ್ಯವಸ್ಥೆ ಇದೆ - ಇದರಲ್ಲಿ ನಿಮಗೆ ನಾಮನಿರ್ದೇಶನ ಅಥವಾ ನಾಮಿನೆಶನ್ ಸೌಲಭ್ಯ ಲಭ್ಯವಿದೆ. - ವಿಶೇಷ ಸಂದರ್ಭಗಳಲ್ಲಿ ಅನೂಟಿ ಬಾಕಿ ಮೊತ್ತದ 75% ವರೆಗಿನ ಓವರ್‌ಡ್ರಾಫ್ಟ್ / ಸಾಲವನ್ನು ಪಡೆಯಬಹುದು. - ಸಾಲ / ಓವರ್‌ಡ್ರಾಫ್ಟ್ ತೆಗೆದುಕೊಂಡ ನಂತರ, ಅನೂಟಿ ಪಾವತಿಯನ್ನು ಸಾಲದ ಖಾತೆಗೆ ಜಮಾ ಮಾಡಲಾಗುತ್ತದೆ. - ಯುನಿವರ್ಸಲ್ ಪಾಸ್ಬುಕ್ ನೀಡಲಾಗುವುದು. - ಈ ಖಾತೆಯನ್ನು ನೀವು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ವರ್ಗಾಯಿಸಬಹುದು. - ಠೇವಣಿದಾರರ ಸಾವಿನ ಸಂದರ್ಭದಲ್ಲಿ ಅಕಾಲಿಕ ಖಾತೆ ಬಂದ್ ಮಾಡಲು ಅವಕಾಶ ಇದೆ. - ಇದಲ್ಲದೆ, 15 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಅವಧಿಗೂ ಮುನ್ನ ಹಣ ಪಾವತಿಗೆ ಅವಕಾಶವಿದೆ. - ಟರ್ಮ್ ಡಿಪಾಸಿಟ್ (Term Deposit) ಪ್ರಕಾರ, ಯೋಜನೆಯು ಪ್ರಿ ಮ್ಯಾಚುರ್ಡ್ ಪೆನಾಲ್ಟಿ ಕೂಡ ಆಕರ್ಷಿಸುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link