SBI KAVACH Personal Loan : ಈ ಲೋನ್ ಗೆ ಯಾರು, ಹೇಗೆ ಅಪ್ಲೈ ಮಾಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

Wed, 16 Jun 2021-5:13 pm,

ಈ ಯೋಜನೆಯಡಿ, ಸ್ಯಾಲರಿಡ್ ಮತ್ತು ನಾನ್ ಸ್ಯಾಲರೀಡ್ ಗ್ರಾಹಕರು ಸಾಲ ಪಡೆಯಬಹುದು. ಪಿಂಚಣಿದಾರರು ಸಹ ಇದರ ಲಾಭವನ್ನು  ಪಡೆಯಬಹುದು. 1 ಏಪ್ರಿಲ್ 2021 ಅಥವಾ ನಂತರ ಕೋವಿಡ್ ಸೋಂಕಿಗೆ ಒಳಗಾದವರು ತಮಗೆ ಅಥವಾ ಕುಟುಂಬದ ಚಿಕಿತ್ಸೆಗಾಗಿ ಈ ಲೋನ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

 ಈ ವೈಯಕ್ತಿಕ ಸಾಲವನ್ನು ಪಡೆಯಬೇಕಾದರೆ, ಗ್ರಾಹಕ ಅಥವಾ ಅವರ ಕುಟುಂಬ ಸದಸ್ಯರ ಕೋವಿಡ್ ಪಾಸಿಟಿವ್ ವರದಿ ಹೊಂದಿರಬೇಕು. ಈ ಯೋಜನೆಯ ಲಾಭ ಪಡೆಯಲು ಕೊಲೆಟರಲ್ ಅಗತ್ಯವಿಲ್ಲ . ಇದೊಂದು ಟರ್ಮ್ ಲೋನ್ ಆಗಿದೆ. 

ಅರ್ಹತೆಗೆ ಅನುಗುಣವಾಗಿ, ಗ್ರಾಹಕರು,  25 ಸಾವಿರ ರೂ.ಗಳಿಂದ 5 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ಈಗಾಗಲೇ ನಿಮ್ಮ ಹೆಸರಿನಲ್ಲಿ ಬೇರೆ ಸಾಲವಿದ್ದರೂ ಈ ಸಾಲ ಪಡೆಯಬಹುದು. 

ಈ ವಿಭಾಗದಲ್ಲಿ ಗ್ರಾಹಕರು ಶೇಕಡಾ 8.5 ರಷ್ಟು ಅಗ್ಗದ ದರದಲ್ಲಿ ಸಾಲವನ್ನು ಪಡೆಯಬಹುದು. ಈ ಸಾಲದ ಮರುಪಾವತಿ ಅವಧಿ 60 ತಿಂಗಳುಗಳು. ಇನ್ನು 3 ತಿಂಗಳ ಮಾರೆಟೋರಿಯಂ ಅನ್ನು ಕೂಡಾ ಒಳಗೊಂಡಿದೆ.

ಎಸ್‌ಬಿಐ ಶಾಖೆಗೆ ಭೇಟಿ ನೀಡುವ ಮೂಲಕ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ಯೋನೊ ಮೂಲಕ ಪ್ರೀ ಅಪ್ರೂವ್ಡ್ ಮಾಡಿಕೊಳ್ಳಬಹುದು.

ಈ ಯೋಜನೆಯಲ್ಲಿ, ಎಸ್‌ಬಿಐ ತನ್ನ ಗ್ರಾಹಕರಿಗೆ ಪ್ರೋಸೆಸಿಂಗ್ ಶುಲ್ಕ ಕೂಡಾ ಇರುವುದಿಲ್ಲ. ಇದಲ್ಲದೆ, ಬ್ಯಾಂಕ್ ಗ್ರಾಹಕರಿಗೆ ಪ್ರೀ ಕ್ಲೋಸಿಂಗ್ ಮತ್ತು ಪ್ರೀ ಪೆಮೆಂಟ್ ಪೆನಲ್ಟಿ ಯನ್ನು ಕೂಡಾ ಮನ್ನಾ ಮಾಡಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link