SBIನಲ್ಲಿ ಖಾತೆ ಹೊಂದಿದವರಿಗೊಂದು ಸಂತಸದ ಸುದ್ದಿ, ಸಿಗಲಿವೆ ಈ 5 ಲಾಭಗಳು
1. ಡೆತ್ ಬೆನಿಫಿಟ್ ಸಿಗಲಿದೆ - ನೀವು ಎಸ್‌ಬಿಐನಲ್ಲಿ ವೇತನ ಖಾತೆಯನ್ನು ಹೊಂದಿದ್ದರೆ, ನಿಮಗೆ 20 ಲಕ್ಷದವರೆಗೆ ಆಕಸ್ಮಿಕ ಮರಣದ ರಕ್ಷಣೆಯ ಅರ್ಹತೆ ಇದೆ. ಅಂದರೆ, ಎಸ್‌ಬಿಐ ಕೂಡ ಡೆತ್ ಬೆನಿಫಿಟ್ ನೀಡುತ್ತದೆ.
2. ಏರ್ ಆಕ್ಸಿಡೆಂಟ್ ಡೆತ್ ಕವರ್ - SBI ಅಧಿಕೃತ ವೆಬ್ ಸೈಟ್ sbi.co.in ನಲ್ಲಿ ನೀಡಲಾಗಿರುವ ಅಧಿಕೃತ ಮಾಹಿತಿ ಪ್ರಕಾರ , ಏರ್ ಆಕ್ಸಿಡೆಂಟ್ ಸಂಭವಿಸಿದಲ್ಲಿ, SBI ವೇತನ ಖಾತೆದಾರರಿಗೆ 30 ಲಕ್ಷದವರೆಗೆ ಏರ್ ಆಕ್ಸಿಡೆಂಟಲ್ ಇನ್ಶೂರೆನ್ಸ್ (ಡೆತ್) ರಕ್ಷಣೆ ಒದಗಿಸುತ್ತದೆ.
3. ಲೋನ್ ಪ್ರೊಸೆಸಿಂಗ್ ಶುಲ್ಕದಲ್ಲಿ ಶೇ.50 ರಷ್ಟು ರಿಯಾಯ್ತಿ - SBI ವೇತನ ಖಾತೆದಾರರಿಗೆ ಪರ್ಸನಲ್ ಲೋನ್, ಕಾರ್ ಲೋನ್, ಹೋಮ್ ಲೋನ್ ಇತ್ಯಾದಿಗಳ ಸಂಸ್ಕರಣಾ ಶುಲ್ಖದಲ್ಲಿ ಶೇ.50ರಷ್ಟು ರಿಯಾಯ್ತಿ ಸಿಗುತ್ತದೆ.
4. ಓವರ್ ಡ್ರಾಫ್ಟ್ ಸೌಕರ್ಯ - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೇತನ ಖಾತೆ ಹೊಂದಿರುವ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಒದಗಿಸುತ್ತದೆ. ಎಸ್‌ಬಿಐ ವೇತನ ಖಾತೆದಾರರು ಓವರ್‌ಡ್ರಾಫ್ಟ್ ಸೌಲಭ್ಯದ ಅಡಿಯಲ್ಲಿ ಎರಡು ತಿಂಗಳ ವೇತನದವರೆಗೆ ಓವರ್‌ಡ್ರಾಫ್ಟ್ ಪಡೆಯಬಹುದು.
5. ಲಾಕರ್ ಶುಲ್ಕದಲ್ಲಿ ಸಿಗುತ್ತದೆ ರಿಯಾಯ್ತಿ - ಎಸ್‌ಬಿಐ ತನ್ನ ಗ್ರಾಹಕರಿಗೆ ಸಂಬಳ ಖಾತೆಯಲ್ಲಿ ಲಾಕರ್ ಶುಲ್ಕದ ಮೇಲೆ ಶೇಕಡಾ 25 ರಷ್ಟು ರಿಯಾಯಿತಿ ನೀಡುತ್ತದೆ. ಅಂದರೆ, ನೀವು ಎಸ್‌ಬಿಐನಲ್ಲಿ ಸಂಬಳ ಖಾತೆಯನ್ನು ಹೊಂದಿದ್ದರೆ, ನೀವು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.