SBI Multi-Option Deposit Scheme: SBIನ ಈ FD ಯೋಜನೆಯಡಿ FD ಮುರಿಯದೆ ನೀವು ಹಣ ಹಿಂಪಡೆಯಬಹುದು

Fri, 12 Mar 2021-5:43 pm,

1. ಏನಿದು Multi-Option Deposit Scheme? - ಭಾರತೀಯ ಸ್ಟೇಟ್ ಬ್ಯಾಂಕ್ ನ Multi-Option Deposit Scheme (MODS) ನಿಂದ ನೀವು FD ಮುರಿಯದೆ ನಿಮಗೆ ಅವಶ್ಯಕತೆ ಇರುವ ಹಣವನ್ನು ನೀವು ವಾಪಸ್ ಪಡೆಯಬಹುದು.  

2. ಈ ಸೌಕರ್ಯಗಳು ಸಿಗುತ್ತವೆ - SBI MODS ಯೋಜನೆ ಒಂದು ಟರ್ಮ್ ಡಿಪಾಸಿಟ್ ಮಾದರಿಯ ಯೋಜನೆಯಾಗಿದೆ. ಆದರೆ, ಇದು ಖಾತೆದಾರರ ಉಳಿತಾಯ ಖಾತೆ ಅಥವಾ ಕರೆಂಟ್ ಅಕೌಂಟ್ ನ ಜೊತೆಗೆ ಲಿಂಕ್ ಹೊಂದಿರುತ್ತದೆ. ಇದರ ಲಾಭ ಏನೆಂದರೆ, ನಿಮಗೆ ಅವಶ್ಯಕತೆ ಬಿದ್ದಾಗಲೆಲ್ಲಾ ನೀವು ಇದರಿಂದ ಹಣವನ್ನು ಪಡೆಯಬಹುದು. ಅಂದರೆ ಇದರಲ್ಲಿ ಪ್ರೀಮ್ಯಾಚ್ಯುರ್ಡ್ ವಿಥ್ ಡ್ರಾ ವಲ್ ಸೌಲಭ್ಯವಿರಲಿದೆ. ಆದರೆ, ಇದರಲ್ಲಿನ ಹೂಡಿಕೆಗೆ ನೀವು TDS ಪಾವತಿಸಬೇಕಾಗುತ್ತಿದೆ. ಒಂದು ವೇಳೆ ಈ ಖಾತೆಯಲ್ಲಿ ಹಣ ಹೂಡಿಕೆ ಮಾಡುವವರು ಹಣವನ್ನು ಹಿಂಪಡೆಯಲು ಬಯಸುತ್ತಿದ್ದರೆ, ಹಾಗೂ ಹೂಡಿಕೆದಾರರು ತಮ್ಮ ಲಿಂಕ್ ಮಾಡಲಾಗಿರುವ ಖಾತೆಯಿಂದ ಹಣವನ್ನು ಹಿಂಪಡೆಯಲು ಬಯಸುತ್ತಿದ್ದು, ಅವರ ಲಿಂಕ್ ಖಾತೆಯಲ್ಲಿ ಬೇಕಾಗುವಷ್ಟು ಹಣ ಇಲ್ಲದಿದ್ದರೆ, MODS ನಿಂದ ಅವರು ಹಣವನ್ನು ಹಿಂಪಡೆಯಬಹುದು. 1000 ರೂ. ಅಥವಾ ಅದರ ಮಲ್ಟಿಪಲ್ ರೂಪದಲ್ಲಿ ಹಣವನ್ನು ಹಿಂಪಡೆಯಬಹುದು.

3. ಈ ಸ್ಕೀಮ್ ವೈಶಿಷ್ಟ್ಯತೆ ಏನು? - i)SBIನ ಮಲ್ಟಿ ಆಪ್ಶನ್ ಡಿಪಾಸಿಟ್ ಸ್ಕೀಮ್ ನಲ್ಲಿ ನೀವು ಕನಿಷ್ಠ ಅಂದರೆ, ರೂ.10000 ಹೂಡಿಕೆ ಮಾಡಬೇಕು. ಬಳಿಕ ಇದರಲ್ಲಿ ನೀವು 1000 ರೂ.ಗಳ ಮಲ್ಟಿಪಲ್ ನಲ್ಲಿ ಇನ್ನೂ ಅಧಿಕ ಹೂಡಿಕೆ ಮಾಡಬಹುದು. ಇದರಲ್ಲಿ ನೀವು ಮಾಡುವ ಹೂಡಿಕೆಯೇ ಯಾವುದೇ ರೀತಿಯ ಮಿತಿ ಇಲ್ಲ   ii) SBI MOD ಯೋಜನೆಯಲ್ಲಿನ ಹಣವನ್ನು ನೀವು ATM ಮೂಲಕ ಹಿಂಪಡೆಯಬಹುದು. ಎಂಓಡಿಯಿಂದ ಹಣ ಹಿಂಪಡೆದ ಬಳಿಕ, ಉಳಿದ ಹಣಕ್ಕೆ ನಿಮಗೆ FD ಮೇಲೆ ಸಿಗುವ ಬಡ್ಡಿದರವೇ ಸಿಗಲಿದೆ   iii)SBIನ ಇತರ FD ಯೋಜನೆಗಳಿಗೆ ಸಿಗುವಷ್ಟು ಬಡ್ಡಿ ದರ MOD ಖಾತೆಗೂ ಸಿಗುತ್ತದೆ ಎಂಬುದು ಇಲ್ಲಿ ಗಮನಾರ್ಹ   iv) ಇದರಲ್ಲಿ ಲೋನ್, ನಾಮಿನಿ ಸೌಲಭ್ಯ ಕೂಡ ಇದೆ.  ಈ ಖಾತೆಯನ್ನು ನೀವೂ SBIನ ಒಂದು ಬ್ರಾಂಚ್ ನಿಂದ ಇನ್ನೊಂದು ಬ್ರಾಂಚ್ ಗೆ ವರ್ಗಾಯಿಸಬಹುದು   v)MOD ಮಾಡಬಯಸುವ ಗ್ರಾಹಕರು ತಮ್ಮ ಲಿಂಕ್ಡ್ ಉಳಿತಾಯ ಖಾತೆಯಲ್ಲಿ ಕನಿಷ್ಠ ತಿಂಗಳ ಬ್ಯಾಲೆನ್ಸ್ ಕಾಯುವುದು ಅನಿವಾರ್ಯ. ಇದರಲ್ಲಿ ನೀವು ಕನಿಷ್ಠ 3000 ರೂ.ಮಿನಿಮಮ್ ಬ್ಯಾಲೆನ್ಸ್ ಹೊಂದಬೇಕು. ಬ್ಯಾಲೆನ್ಸ್ ಕಡಿಮೆಯಾದರೆ, MOD ಮುರಿದು ನಿಮ್ಮ ಉಳಿತಾಯ ಖಾತೆಗೆ ಹಣ ಹಾಕಲಾಗುತ್ತದೆ ಎಂಬುದನ್ನು ನೆನಪಿಡಿ   vi)ಈ ಯೋಜನೆಯಡಿ ವೈಯಕ್ತಿಕ, ಜಂಟಿ, ಮೈನರ್, ಫರ್ಮ್, ಕಂಪನಿ, ಲೋಕಲ್ ಬಾಡಿ ಯಾರಾದರು ಕೂಡ ಹೂಡಿಕೆ ಮಾಡಬಹುದು. vii)SBIನ FD ಯೋಜನೆಯತೆ ಇಲ್ಲಿಯೂ ಕೂಡ ನೀವು ಶೇ.2.9 ರಿಂದ ಶೇ.5.9 ರಷ್ಟು ಬಡ್ಡಿ ಸಿಗಲಿದೆ. ಈ ನೂತನ ದರಗಳು ಜನವರಿ 8, 2021ರಿಂದ ಜಾರಿಯಲ್ಲಿವೆ viii)5 ಲಕ್ಷ ರೂ.ಗಳ ವರೆಗಇನ FD ಮೇಲೆ ಒಂದು ವೇಳೆ ನೀವೂ ಅವಧಿಗೂ ಮುನ್ನ FD ಮುರಿದರೆ, ನಿಮಗೆ ಶೇ.0.50 ರಷ್ಟು ಪೆನಾಲ್ಟಿ ಬೀಳುತ್ತದೆ. 5 ಲಕ್ಷ ರೂ.ಗಳಿಂದ 1 ಕೋಟಿ ರೂ. ಹೂಡಿಕೆಯ ಮೇಲೆ ಈ FD ಪೆನಾಲ್ಟಿ ಶೇ.1ರಷ್ಟು ಇರಲಿದೆ. 7 ದಿನಕ್ಕಿಂತ ಕಡಿಮೆ ಅವಧಿಯ ಹೂಡಿಕೆಯ ಮೇಲೆ ಯಾವುದೇ ಬಡ್ಡಿ ಸಿಗುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link