ನಿಮ್ಮ ಬಳಿ ಸ್ಯಾಲರಿ ಅಕೌಂಟ್ ಇದ್ದರೆ ತಕ್ಷಣ ಸಿಗಲಿದೆ 20 ಲಕ್ಷ ರೂ.ಗಳ ನೆರವು
ಕಸ್ಟಮೈಸ್ಡ್ ಪರ್ಸನಲ್ ಲೋನ್ ಆಗಿ ಗ್ರಾಹಕರು ಯಾವುದೇ ಬ್ಯಾಂಕಿನಲ್ಲಿ ಸ್ಯಾಲಿರಿ ಅಕೌಂಟ್ ಹೊಂದಿರಬೇಕು. ಅವರ ಕನಿಷ್ಠ ನಿವ್ವಳ ಮಾಸಿಕ ವೇತನ (NMI) ರೂ 15,000 ಕ್ಕಿಂತ ಕಡಿಮೆ ಇರಬಾರದು. ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯು ಕೇಂದ್ರ, ರಾಜ್ಯ ಅಥವಾ ಅರೆ ಸರ್ಕಾರ, ಕೇಂದ್ರ ಅಥವಾ ರಾಜ್ಯ ಪಿಎಸ್ಯು, ಕಾರ್ಪೊರೇಟ್ ಅಥವಾ ರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಗಳ ಉದ್ಯೋಗಿಯಾಗಿರಬೇಕು ಎಂದು ಬ್ಯಾಂಕ್ ಹೇಳುತ್ತದೆ. ಸಾಲದ ಅರ್ಜಿದಾರರ ವಯಸ್ಸು 21 ರಿಂದ 58 ವರ್ಷಗಳ ನಡುವೆ ಇರಬೇಕು ಮತ್ತು ಅವರು ಕನಿಷ್ಠ 1 ವರ್ಷ ಕೆಲಸ ಮಾಡಿರಬೇಕು. ಇದರಲ್ಲಿ, EMI / NMI ಅನುಪಾತವು ಶೇಕಡಾ 50 ಕ್ಕಿಂತ ಕಡಿಮೆ ಇರುತ್ತದೆ.
ಈ ವೈಯಕ್ತಿಕ ಸಾಲ ಯೋಜನೆಯಲ್ಲಿ ಕನಿಷ್ಠ 24,000 ಮತ್ತು ಗರಿಷ್ಠ 20 ಲಕ್ಷ ಸಾಲವನ್ನು ಪಡೆಯಬಹುದು. ಇದರಲ್ಲಿ, ಗರಿಷ್ಠ ಸಾಲವು ಗ್ರಾಹಕರ ನಿವ್ವಳ ಮಾಸಿಕ ಆದಾಯಕ್ಕಿಂತ 24 ಪಟ್ಟು ಅಥವಾ 20 ಲಕ್ಷ ಮೀರಬಾರದು.
SBI ಪ್ರಕಾರ, ಈ ವೈಯಕ್ತಿಕ ಸಾಲ ಉತ್ಪನ್ನಗಳಿಗೆ ವೇತನ ಪಡೆಯುವ ಗ್ರಾಹಕರಿಗೆ ಯಾವುದೇ ರೀತಿಯ ಭದ್ರತೆ ಅಥವಾ ಗ್ಯಾರಂಟಿಯ ಅಗತ್ಯವಿರುವುದಿಲ್ಲ.
ಎಸ್‌ಬಿಐ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರಗಳು ವರ್ಷಕ್ಕೆ 9.85-11.35 ಪ್ರತಿಶತದಿಂದ ಆರಂಭವಾಗುತ್ತವೆ. ಇದರಲ್ಲಿ ಗ್ರಾಹಕರಿಗೆ ಯಾವುದೇ ಹಿಡನ್ ಚಾರ್ಜ್ ಇರುವುದಿಲ್ಲ ಎಂದು ಬ್ಯಾಂಕ್ ಹೇಳುತ್ತದೆ. ಪ್ರೊಸೆಸಿಂಗ್ ಚಾರ್ಜ್ ಕೂಡ ಕಡಿಮೆ ಇರುತ್ತದೆ. ಇದು ಸಾಲದ ಮೊತ್ತದ 1.5 ಪ್ರತಿಶತ (ಕನಿಷ್ಠ ರೂ 1,000 ಮತ್ತು ಗರಿಷ್ಠ ರೂ 15,000 ಜೊತೆಗೆ GST) ಆಗಿರುತ್ತದೆ. ಇದರಲ್ಲಿ ಎರಡನೇ ಸಾಲವನ್ನು ತೆಗೆದುಕೊಳ್ಳುವ ಅವಕಾಶವೂ ಇದೆ.
ಈ ವಿಶೇಷ ಎಸ್‌ಬಿಐ ಪರ್ಸನಲ್ ಲೋನ್‌ನ ಮರುಪಾವತಿಯ ಅವಧಿ ಕನಿಷ್ಠ 6 ತಿಂಗಳುಗಳು ಮತ್ತು ಗರಿಷ್ಠ 72 ತಿಂಗಳುಗಳು.
ಎಸ್‌ಬಿಐ ಸಂಬಳ ವೈಯಕ್ತಿಕ ಸಾಲಕ್ಕೆ, ಆದಾಯ ತೆರಿಗೆ ರಿಟರ್ನ್‌ನ ಪ್ರತಿ, ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ , ಇತ್ತೀಚಿನ ಸ್ಯಾಲರಿ ಸ್ಲಿಪ್, 2 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು ಮತ್ತು ಗುರುತಿನ ಪುರಾವೆ ಮತ್ತು ಬ್ಯಾಂಕ್‌ನ ಕೆವೈಸಿ ಮಾರ್ಗಸೂಚಿಗಳ ಪ್ರಕಾರ ವಿಳಾಸ ಪುರಾವೆ ಅಗತ್ಯವಿದೆ.