ಗೃಹಸಾಲ, ವಾಹನ ಸಾಲ ಹಾಗೂ ಚಿನ್ನ ಸಾಲದ ಮೇಲಿನ Processing Fee ಕಡಿತಗೊಳಿಸಿದ SBI
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗೃಹ ಸಾಲ, ಕಾರು ಸಾಲ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲಕ್ಕೆ ಮೇಲಿನ ಸಂಸ್ಕರಣಾ ಶುಲ್ಕವನ್ನು ತೆಗೆದು ಹಾಕಿರುವ ಕುರಿತು ಘೋಷಣೆ ಮಾಡಿದೆ. ಇದರರ್ಥ ಬ್ಯಾಂಕ್ ತನ್ನ ಚಿಲ್ಲರೆ ಸಾಲಗಳಲ್ಲಿ ಶೇಕಡಾ 100 ರಷ್ಟು ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿದೆ. ಆದರೆ ಇದಕ್ಕೆ ಒಂದು ಷರತ್ತು ವಿಧಿಸಲಾಗಿದೆ. ಅದೇನೆಂದರೆ, ಗ್ರಾಹಕರು ಎಸ್‌ಬಿಐನ ಯೋನೊ ಅಪ್ಲಿಕೇಶನ್ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬೇಕು.
ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂದು ಹಲವು ಕೊಡುಗೆಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಗೃಹ ಸಾಲ ಕೊಡುಗೆಗಳು ಸಹ ಪ್ರಮುಖವಾಗಿವೆ ಎಂದು ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕಿನ ಪ್ರಸ್ತಾಪದಡಿಯಲ್ಲಿ, ಗೃಹ ಸಾಲ ತೆಗೆದುಕೊಳ್ಳುವ ಗ್ರಾಹಕರಿಗೆ ಯಾವುದೇ ಸಂಸ್ಕರಣಾ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಪೂರ್ಣಗೊಂಡ ಯೋಜನೆಗಳ ಸಂಸ್ಕರಣಾ ಶುಲ್ಕವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ ಎನ್ನಲಾಗಿದೆ.
ಕ್ರೆಡಿಟ್ ಸ್ಕೋರ್ ಉತ್ತಮವಾಗಿರುವ ಗ್ರಾಹಕರಿಗೆ ಗೃಹಸಾಲದ ಮೇಲಿನ ಬಡ್ಡಿದರದಲ್ಲಿ ಶೇ.0.10 ರಷ್ಟು ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆದರೆ, ಇದು ನೀವು ಸಾಲ ಪಡೆಯುವ ಮೊತ್ತದ ಮೇಲೆ ಅವಲಂಭಿಸಿದೆ. ಇನ್ನೊಂದೆಡೆ ಯೋನೋ ಆಪ್ ಮೂಲಕ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವವರಿಗೆ ಶೇ.0.5 ರಷ್ಟು ಹೆಚ್ಚುವರಿ ಬಡ್ಡಿ ರಿಯಾಯಿತಿ ನೀಡಲಿದೆ.
ಕಾರ್ ಲೋನ್ ಮೇಲೆ ನೀಡಲಾಗುತ್ತಿರುವ ಕೊಡುಗೆಯಲ್ಲಿ ಅತ್ಯಂತ ಕಡಿಮೆ ಬಡ್ಡಿ ದರ ಅಂದರೆ ಶೇ.7.5ರ ದರದಲ್ಲಿ ಸಾಲ ಸಿಗುತ್ತಿದೆ. ಆನ್ ರೋಡ್ ಫೈನಾನ್ಸಿಂಗ್ ಶೇ.100 ರಷ್ಟು ಸಿಗುತ್ತಿದೆ. ಆದರೆ, ಕೆಲ ಆಯ್ದ ಮಾಡೆಲ್ ಗಳ ಮೇಲೆ ಮಾತ್ರ ಇದನ್ನು ನೀಡಲಾಗುತ್ತಿದೆ. ಆಪ್ ಮೂಲಕ ಕಾರ್ ಲೋನ್ ಗೆ ಅಪ್ಲೈ ಮಾಡುವವರಿಗೆ ಸಾಲದ ಪ್ರಿನ್ಸಿಪಲ ಅನುಮತಿ ಶೀಘ್ರದಲ್ಲಿಯೇ ಸಿಗಲಿದೆ.
ಚಿನ್ನದ ಮೇಲೆ ನೀಡಲಾಗುತ್ತಿರುವ ಸಾಲದ ಕುರಿತು ಹೇಳುವುದಾದರೆ. ಗ್ರಾಹಕರಿಗೆ ಇದರಲ್ಲಿ ಫ್ಲೆಕ್ಸಿಬಲ್ ರೀಪೇಮೆಂಟ್ ಆಪ್ಶನ್ ಸಿಗಲಿದೆ. ಇದರ ಅಡಿ 36 ತಿಂಗಳುಗಳ ವರೆಗೆ ನೀವು ಸಾಲ ಮರುಪಾವತಿ ಮಾಡಬಹುದು ಹಾಗೂ ಇದಕ್ಕೂ ಕೂಡ ನೀವು ಶೇ.7.5ರಷ್ಟು ಬಡ್ಡಿ ಪಾವತಿಸಬಹುದು. ಇತರೆ ಚಿನ್ನದ ಸಾಲ ಯೋಜನೆಯ ಹೋಲಿಕೆಯಲ್ಲಿ ಇದು ತುಂಬಾ ಬಡ್ಡಿ ದರವಾಗಿದೆ.
ಛಪ್ಪರ್ ಫಾಡ್ ಆಫಾರ್ ಅಡಿ ಭಾರತೀಯ ಸ್ಟೇಟ್ ಬ್ಯಾಂಕ್ ಕೇವಲ ಶೇ.9.6 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. ಇತರೆ ಬ್ಯಾಂಕ್ ಗಳ ಹೋಲಿಕೆಯಲ್ಲಿ ಇದು ಅತ್ಯಂತ ಅಗ್ಗದ ಬಡ್ಡಿದರವಾಗಿದೆ. ವೈಯಕ್ತಿಯ ಸಾಲದ ಮೇಲೆ ಹೆಚ್ಚುವರಿ ಬ್ಯಾಂಕ್ ಗಳು ಶೇ. 12 ರಿಂದ ಶೇ.15ರವರೆಗೆ ಬಡ್ಡಿ ವಿಧಿಸುತ್ತವೆ ಎಂಬುದು ಇಲ್ಲಿ ಗಮನಾರ್ಹ.
ಯೋನೋ ಆಪ್ ಮೂಲಕ SBI ಪಪೆರ್ಲೆಸ್ಸ್, ಪ್ರೀಅಪ್ರೂವಡ್ ವೈಯಕ್ತಿಕ ಸಾಲ ಮತ್ತು ತ್ವರಿತ ಗೃಹ ಟಾಪ್ ಅಪ್ ಲೋನ್ ಅನ್ನು ನೀವು ಪಡೆಯಬಹುದು. ಯೋನೊ ಆ್ಯಪ್ ಮೂಲಕ ಸಾಲದ ಮಾಹಿತಿಗಾಗಿ, ನೀವು 567676 ಪಿಎಪಿಎಲ್ ಬರೆದು ಎಸ್ಎಂಎಸ್ ಮಾಡಬಹುದು. ನೀವು ಎಷ್ಟು ಸಾಲವನ್ನು ಪಡೆಯಬಹುದು ಎಂಬುದನ್ನು ಪರಿಶೀಲಿಸಲು, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಪಿಎಪಿಎಲ್ ನಂತರ ನಿಮ್ಮ ಖಾತೆಯ ಕೊನೆಯ 4 ಅಂಕೆಗಳು ಬರೆಯಬೇಕು ಮತ್ತು ಅದನ್ನು 567676 ಗೆ ಎಸ್‌ಎಂಎಸ್ ಮಾಡಿ.