ವಿದ್ಯಾರ್ಥಿಗಳೇ ಗಮನಿಸಿ.. ನಾಳೆಯಿಂದ 3 ದಿನ ಶಾಲಾ ಕಾಲೇಜುಗಳಿಗೆ ರಜೆ ! ಕಾರಣವೇನು ಗೊತ್ತೇ?
School Holiday: ಇದು ತಮಿಳುನಾಡಿಗೆ ಹತ್ತಿರವಾಗಿದ್ದರೂ, ಇದರ ಪ್ರಭಾವವು ರಾಯಲಸೀಮಾ ಮತ್ತು ಆಂಧ್ರಪ್ರದೇಶದ ಕರಾವಳಿ ಮೇಲೆ ಹೆಚ್ಚು ಕಾಣಲಿದೆ. ಆಂಧ್ರಪ್ರದೇಶದಾದ್ಯಂತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ರೀತಿಯ ಬಿರುಗಾಳಿ ಬೀಸುವ ಸಾಧ್ಯತೆಯಿರುವ ಕಾರಣ ಮತ್ತು ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಕೆಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಮಳೆ ಪೀಡಿತ ಪ್ರದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲು ಸರ್ಕಾರ ತಿಳಿಸಿದೆ ಎನ್ನಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಈ ಚಂಡಮಾರುತದ ಪರಿಣಾಮವು ನವೆಂಬರ್ 28, 29 ಮತ್ತು 30 ರಂದು ಆಂಧ್ರ ಪ್ರದೇಶದ ಮೇಲೆ ಇರುತ್ತದೆ. ಹೀಗಾಗಿ ಆ 3 ದಿನ ಕೆಲ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ ಒಳಿತು ಎಂಬ ವಾದ ಕೇಳಿ ಬರುತ್ತಿದೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಈ ಚಂಡಮಾರುತದ ಪರಿಣಾಮವು ನವೆಂಬರ್ 28, 29 ಮತ್ತು 30 ರಂದು ಆಂಧ್ರ ಪ್ರದೇಶದ ಮೇಲೆ ಇರುತ್ತದೆ.
28ನೇ ಗುರುವಾರ, 29ನೇ ಶುಕ್ರವಾರ, 30ನೇ ಶನಿವಾರ.. ಈ 3 ದಿನಗಳಿಗೆ ರಜೆ ನೀಡಿದರೆ.. ಡಿಸೆಂಬರ್ 1ನೇ ತಾರೀಖು ಭಾನುವಾರವಾದ್ದರಿಂದ ಆಗಲೇ ರಜೆ ಇರುತ್ತದೆ.
ಫೆಂಗಲ್ ಚಂಡಮಾರುತದ ಪರಿಣಾಮ ಬಂಗಾಳಕೊಲ್ಲಿಯಲ್ಲಿ ಈಗಾಗಲೇ ಬಲವಾದ ಗಾಳಿ ಬೀಸುತ್ತಿದೆ. ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.
ಗುರುವಾರ ವೇಗ ಮತ್ತಷ್ಟು ಹೆಚ್ಚಾಗಲಿದೆ. ಈ ಗಾಳಿ ಮಳೆ ಅನಾಹುತದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುವುದು ರಿಸ್ಕ್ ಆಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೀನುಗಾರಿಕಾ ದೋಣಿಗಳಿಗೂ ಬೇಟೆಗೆ ತೆರಳದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಭತ್ತದ ಕಟಾವಿಗೆ ಹೋಗುವ ರೈತರೂ ಮುಂಜಾಗ್ರತೆ ವಹಿಸಬೇಕು. ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ IMD ಸಲಹೆ ನೀಡಿದೆ.