ವಿದ್ಯಾರ್ಥಿಗಳೇ ಸಿಹಿಸುದ್ದಿ... ಕರ್ನಾಟಕ ಸೇರಿದಂತೆ ದೇಶದ ಎಲ್ಲಾ ಶಾಲಾ-ಕಾಲೇಜುಗಳಿಗೆ ಜನವರಿ 1ರ ಬಳಿಕ ಮೂರು ದಿನ ವಿಶೇಷ ರಜೆ ಘೋಷಣೆ! ಕಾರಣ...

Mon, 23 Dec 2024-9:34 pm,

ಹೊಸ ವರ್ಷ ಸಮೀಪಿಸುತ್ತಿದೆ. ಹಬ್ಬಗಳು ಮತ್ತು ಆಚರಣೆಗಳ ಉದ್ದನೆಯ ಸರತಿ ಸಾಲು ಇನ್ಮುಂದೆ ಶುರುವಾಗಲಿದೆ. ಇನ್ನು ಈ ಸಂದರ್ಭದಲ್ಲಿ ಖುಷಿಯಲ್ಲಿ ಹಬ್ಬಗಳನ್ನು ಎಂಜಾಯ್‌ ಮಾಡೋದು ಒಂದು ಕಡೆಯಾದ್ರೆ, ಶಾಲೆಗಳಿಗೆ ರಜೆ ಪಡೆಯುವ ಮಜಾ ಮತ್ತೊಂದು ಕಡೆ.

ಇನ್ನು ಈ ಬಾರಿಯ ರಜೆಯ ಮಜಾ ಜನವರಿ 1 ರಂದು ಶುರುವಾಗಲಿದೆ. ದೇಶದ ಅನೇಕ ಶಾಲೆಗಳಲ್ಲಿ ಚಳಿಗಾಲದ ರಜೆಯನ್ನು ಈಗಾಗಲೇ ಘೋಷಿಸಲಾಗಿದೆ. ಉತ್ತರ ಭಾರತದಲ್ಲಿ ಚಳಿಗಾಲದ ರಜೆಯಾದರೆ, ದಕ್ಷಿಣದಲ್ಲಿ ಮಕರ ಸಂಕ್ರಾತಿ, ಪೊಂಗಲ್‌, ಗಣರಾಜ್ಯೋತ್ಸವ ಸೇರಿದಂತೆ ಒಂದಷ್ಟು ಐಚ್ಛಿಕ ರಜೆಗಳನ್ನು ಈಗಾಗಲೇ ಸರ್ಕಾರ ಕ್ಯಾಲೆಂಡರ್‌ ಬಿಡುಗಡೆ ಮಾಡುವಾಗ ಘೋಷಣೆ ಮಾಡಿದೆ.

 

ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಲ್ಲಿ ಜನವರಿ ತಿಂಗಳಲ್ಲಿ ಯಾವಾಗೆಲ್ಲಾ ರಜೆ ಘೋಷಣೆ ಮಾಡಲಾಗಿದೆ, ಅದರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳೋಣ.

 

ಚಳಿಗಾಲದ ರಜೆ (ಜನವರಿ 1 ರಿಂದ ಜನವರಿ 15): ಜನವರಿ ಪ್ರಾರಂಭದಿಂದ ಚಳಿ ಮಿತಿ ಮೀರುತ್ತದೆ. ಈ ಹಿನ್ನೆಲೆಯಲ್ಲಿ ಉತ್ತರ ಭಾರತದಲ್ಲಿ ಚಳಿಗಾಲದ ರಜೆ ಎಂದು 15 ದಿನಗಳ ಕಾಲ ರಜೆ ಘೋಷಣೆ ಮಾಡಲಾಗಿದೆ.

 

ಇದರ ಹೊರತಾಗಿ ಹಬ್ಬ ಹರಿದಿನ ಎಂದು ರಜೆಯನ್ನು ನೀಡಲಾಗಿದೆ. ಜನವರಿ 1ರಂದು ಕರ್ನಾಟಕ ಸೇರಿದಂತೆ ಬಹಳಷ್ಟು ರಾಜ್ಯದ ಶಾಲೆಗಳಿಗೆ ರಜೆಯನ್ನು ನೀಡುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಹೊಸ ವರ್ಷದ ಸಂಭ್ರಮ. ಜನವರಿ 1 ಎಂದರೆ ಗ್ರೆಗೋರಿಯನ್‌ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ ಪ್ರಾರಂಭವಾಗುವುದು. ಈ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಹೊಸ ವರ್ಷವನ್ನು ಅದ್ಧೂರಿಯಾಗಿ ಬರ ಮಾಡಿಕೊಳ್ಳಲಾಗುತ್ತದೆ. ಡಿಸೆಂಬರ್‌ 31ರ ರಾತ್ರಿ ಸಂಭ್ರಮ ಪ್ರಾರಂಭವಾಗಿ ಜನವರಿ 1ರ ರಾತ್ರಿವರೆಗೂ ಎಂಜಾಯ್‌ ಮಾಡಲಾಗುತ್ತದೆ.

 

ಇನ್ನು ಜನವರಿ 6ರಂದು ಸಿಖ್ಖರ ಧರ್ಮಗುರು ಗುರು ಗೋವಿಂದ್ ಸಿಂಗ್ ಅವರ ಜನ್ಮದಿನ. ಈ ದಿನ ವಿಶೇಷವಾಗಿ ಪಂಜಾಬ್ ಮತ್ತು ಉತ್ತರ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗುತ್ತದೆ. ಇನ್ನುಳಿದಂತೆ ಇತರ ರಾಜ್ಯಗಳಲ್ಲಿರುವ ಸಿಖ್‌ ಧರ್ಮಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಿಗೂ ವಿಶೇಷ ರಜೆ ಘೋಷಣೆ ಮಾಡಲಾಗುತ್ತದೆ. ಈ ಸಮುದಾಯದ ಜನರು, ತಮ್ಮ ಗುರುವಿಗೆ ನೀಡುವ ಗೌರವಾರ್ಥವಾಗಿ ವಿಶೇಷ ಪ್ರಾರ್ಥನೆ ಮತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ.

 

ಜನವರಿ 14ರಂದು ಮಕರ ಸಂಕ್ರಾತಿ ಆಚರಣೆ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ಜನವರಿ 15ರಂದು ಆಚರಿಸಲಾಗುತ್ತದೆ. ಅಂದರೆ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ಮಕರ ಜ್ಯೋತಿ ಬೆಳಗುವ ಸಮಯವನ್ನು ಆಧರಿಸಿ ಕೆಲವು ಕಡೆಗಳಲ್ಲಿ ಈ ಎರಡು ದಿನಗಳಲ್ಲಿ ಒಂದು ದಿನವನ್ನು ಸಂಕ್ರಾತಿ ಎಂದು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಬಹುತೇಕ ಶಾಲಾ ಕಾಲೇಜುಗಳಿಗೆ ಜನವರಿ 14 ಅಥವಾ 15ರಂದು ರಜೆ ಘೋಷಣೆ ಮಾಡಲಾಗುತ್ತದೆ.

 

ಇದರ ಹೊರತಾಗಿ ಮಕರ ಸಂಕ್ರಾಂತಿಯನ್ನು ಅನೇಕ ರಾಜ್ಯಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಂತಹ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಿದರೆ, ಅಸ್ಸಾಂ ರಾಜ್ಯದಲ್ಲಿ ಮಾಘ ಬಿಹು ಎಂದು ಆಚರಿಸಲಾಗುತ್ತದೆ.

 

ಇದಲ್ಲದೆ, ಪ್ರತಿ ವರ್ಷ, ಜನವರಿ 26 ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ದಿನವೆಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಈ ದಿನದಂದು ಧ್ವಜಾರೋಹಣ ನಡೆಸಿ ಸಮಾರಂಭಗಳನ್ನು ಆಯೋಜಿಸಿ ಸಂಭ್ರಮಿಸಲಾಗುತ್ತದೆ. ಆದರೆ ಈ ಬಾರಿ ಈ ದಿನ ಭಾನುವಾರದಂದೇ ಆಗಮಿಸಿದ್ದು ಎಂದಿನಂತೆ ರಜೆ ಇರಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link