ವಿದ್ಯಾರ್ಥಿಗಳೇ ಗುಡ್ ನ್ಯೂಸ್... ಕರ್ನಾಟಕದ ಎಲ್ಲಾ ಶಾಲಾ-ಕಾಲೇಜುಗಳಿಗೆ ಮುಂದಿನ 8 ದಿನಗಳ ಕಾಲ ರಜೆ! ಸರ್ಕಾರದ ಈ ಮಹತ್ವದ ನಿರ್ಧಾರಕ್ಕೆ ಕಾರಣವೇನು?
ಎಷ್ಟೇ ದಿನ ರಜೆ ನೀಡಿದರೂ ಶಾಲಾ ಮಕ್ಕಳಿಗೆ ಸಾಲುವುದುಂಟೇ... ಪ್ರತೀ ವಾರವೂ ಯಾವ ದಿನ ರಜೆ ಇದೆ ಎಂಬುದಕ್ಕೆ ಕಾಯುತ್ತಿರುತ್ತಾರೆ. ಇನ್ನು ಈ ತಿಂಗಳು ಅಂದರೆ ನವೆಂಬರ್ ತಿಂಗಳಲ್ಲಿ ಹಬ್ಬ-ಹರಿದಿನ ಎಂದು ಸಾಕಷ್ಟು ರಜೆಗಳು ಕಳೆದು ಹೋಗಿವೆ. ಇನ್ನು ಡಿಸೆಂಬರ್ ಕಾಲಿಡಲು ಕೆಲವೇ ದಿನಗಳು ಬಾಕಿ ಇವೆ.
ಡಿಸೆಂಬರ್ ತಿಂಗಳಲ್ಲಿ 31 ದಿನವಿದ್ದು ಇದರಲ್ಲಿ ಶಾಲಾ-ಕಾಲೇಜುಗಳಿಗೆ 8 ದಿನಗಳ ಕಾಲ ರಜೆ ಸಿಗಲಿದೆ. ಕೆಲವು ಶಾಲೆಗಳಲ್ಲಿ ಕ್ರಿಸ್‌ಮಸ್‌ಗೆಂದು ಒಂದು ವಾರಗಳ ಕಾಲ ರಜೆ ನೀಡಲಾಗುತ್ತದೆ. ಆದರೆ ಅದು ಆಯಾಯ ಸಂಸ್ಥೆಯ ನಿರ್ಧಾರಕ್ಕೆ ಬಿಟ್ಟಿದ್ದಾಗಿರುತ್ತದೆ.
ಇನ್ನೊಂದೆಡೆ ಡಿಸೆಂಬರ್ ತಿಂಗಳಲ್ಲಿ 5 ಭಾನುವಾರಗಳಿವೆ. 1, 8, 15, 22 ಮತ್ತು 29ರಂದು ಭಾನುವಾರ ಆಗಿರುವುದರಿಂದ ಶಾಲಾ ಕಾಲೇಜುಗಳಿಗೆ ಎಂದಿನಂತೆ ರಜೆ ಇರುತ್ತದೆ. ಉಳಿದಂತೆ ಡಿಸೆಂಬರ್ 14ರಂದು ಹುತ್ತರಿ ಹಬ್ಬ ಇರುವುದರಿಂದ ಸ್ಥಳೀಯ ರಜೆ ಘೋಷಿಸುವ ಅವಕಾಶವಿದೆ. ಹುತ್ತರಿ ಹಬ್ಬ ಕೊಡಗಿನವರಿಗೆ ಪ್ರಮುಖವಾಗಿರುವುದರಿಂದ ಅಲ್ಲಿನ ಶಾಲೆಗಳಿಗೆ ರಜೆ ಇರಲಿದೆ.
ಡಿಸೆಂಬರ್ 1, 8, 14, 15, 22, 24, 25, ಮತ್ತು 29ರಂದು ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಅಂದರೆ ಒಂದೇ ತಿಂಗಳಲ್ಲಿ 8 ರಜೆ. ಇನ್ನೂ ಕೆಲವು ಶಾಲೆಗಳಲ್ಲಿ ಒಂದು ವಾರಗಳ ಕ್ರಿಸ್‌ಮಸ್ ರಜೆ ಸೇರಿಸಿ ಮತ್ತಷ್ಟು ರಜೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ.
ಈ ವರ್ಷ ಕರ್ನಾಟಕದ ಶಾಲಾ ಮಕ್ಕಳಿಗೆ ಸುದೀರ್ಘ ಅವಧಿಯ ರಜೆ ಸಿಕ್ಕಿವೆ ಎಂದೇ ಹೇಳಬಹುದು. ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆ ರಜೆಯಾದರೆ ಆ ಬಳಿಕ, ಮಳೆಗೆಂದು ಕೆಲವೆಡೆ ರಜೆ ನೀಡಲಾಗಿತ್ತು. ಅದಾದ ನಂತರ ನವರಾತ್ರಿ ಮತ್ತು ದೀಪಾವಳಿ ರಜೆ ಘೋಷಿಸಲಾಯಿತು. ಇದೀಗ ಮತ್ತೆ ವಿದ್ಯಾರ್ಥಿಗಳು ರಜೆಯ ಮಜಾ ಸವಿಯಲಿದ್ದಾರೆ.
ಇನ್ನೊಂದೆಡೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮಳೆ ಸಂದರ್ಭದಲ್ಲಿ ಹಲವು ದಿನಗಳ ಕಾಲ ರಜೆ ನೀಡಲಾಗಿತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಶನಿವಾರ ಅರ್ಧ ದಿನ ರಜೆಯನ್ನು ಸಹ ಬಳಕೆ ಮಾಡಿಕೊಂಡು ಹೆಚ್ಚುವರಿ ತರಗತಿಗಳನ್ನು ನಡೆಸಲು ಸಿದ್ಧತೆ ಮಾಡಲಾಗುತ್ತಿದೆ.