ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?

Tue, 07 May 2024-4:33 pm,

ಹಿರಿಯ ನಟ ವಿಷ್ಣುವರ್ಧನ್ ಅಂದ ಕೂಡಲೇ ಈಗಲೂ ಕಣ್ಣಿಗೆ ಕಟ್ಟುವುದು ಅವರ ಕೈಯ್ಯಲ್ಲಿ ಇದ್ದ ಕಡಗ. ಪ್ರತೀ ಒಂದು ಸಿನಿಮಾದಲ್ಲಿಯೂ ವಿಷ್ಣುವರ್ಧನ ಆ ಕಡಗ ಹಾಕಿಕೊಂಡೇ ಇರುತ್ತಿದ್ದರು. 

ವಿಷ್ಣುವರ್ಧನ್  ಈ ಕಡಗವನ್ನು ಶೋಕಿಗಾಗಿ ಹಾಕಿಕೊಳ್ಳುತ್ತಿರಲಿಲ್ಲ. ಅವರು ಒಂದು ಮಹತ್ವದ ಕಾರಣದಿಂದಲೇ ಈ ಕಡಗವನ್ನು ಹಾಕಿಕೊಳ್ಳುತ್ತಿದ್ದರು. 

೧೯೮೦ರ ಬಳಿಕ ಪ್ರತಿ ಸಿನಿಮಾದಲ್ಲಿಯೂ ವಿಷ್ಣುವರ್ಧನ್ ಈ ಕಡ  ಹಾಕಿಕೊಂಡಿದ್ದಾರೆ. ಆದರೆ ಗುರು ಶಿಷ್ಯರು ಒಂದು ಸಿನಿಮಾದಲ್ಲಿ ಮಾತ್ರ ಅವರ ಕೈಯ್ಯಲ್ಲಿ ಈ ಕಡ ಕಾಣ ಸಿಗುವುದಿಲ್ಲ.   

ಈ ಕಡಗ ನನ್ನ ಜೀವನದ ಅವಿಭಾಜ್ಯ ಅಂಗ ಎನ್ನುವುದನ್ನು ವಿಷ್ಣುವರ್ಧನ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅಲ್ಲದೆ ಈ ಕಡಗ ಇಲ್ಲದೆ ಅವರು ಮನೆಯಿಂದ ಹೊರಗೆ ಹೋಗುತ್ತಲೇ ಇರಲಿಲ್ಲವಂತೆ.   

ಅಂದ ಹಾಗೆ ಅವರಿಗೆ ಈ ಕಡಗವನ್ನು ಗುರುದ್ವಾರದ ಗುರುಗಳು ನೀಡಿದ್ದರಂತೆ. ಬೀದರ್ ನಲ್ಲಿ ೧೯೮೦ರಲ್ಲಿ ಗುರುಗಳು ಈ ಕಡಗ ನೀಡಿದ್ದರು. ಅಂದಿನಿಂದ ವಿಷ್ಣುವರ್ಧನ್ ಕೊನೆ ಕ್ಷಣದವರೆಗೂ ಅವರು ಆ ಕಡಗವನ್ನು ತೆಗೆಯಲೇ ಇಲ್ಲ. 

ಇನ್ನು ವಿಷ್ಣುವರ್ಧನ್ ಲೆಫ್ಟಿ. ಅಂದರೆ ಬಲ ಗೈಗಿಂತ ಎಡಗೈ ಬಳಕೆ ಜಾಸ್ತಿ. ಅವರ ಎರಡೂ ಕೈಗಳ ತೂಕ ಭಿನ್ನವಾಗಿತ್ತು. ಅದನ್ನು ಸರಿದೂಗಿಸಲು ವಿಷ್ಣುವರ್ಧನ್ ಈ ಕಡಗ ಹಾಕಿಕೊಳ್ಳಲೇ ಬೇಕಿತ್ತಂತೆ. 

ವಿಷ್ಣುವರ್ಧನ್ ನಿಧನದ ಬಳಿಕ ಆ ಕಡವನ್ನು ಅವರ ಕುಟುಂಬದವರು ತೆಗೆದಿಟ್ಟಿ ದ್ದಾರೆಯಂತೆ. ಅಂದರೆ ಅದು ಈಗಲೂ ಅವರ ಕುಟುಂಬದ ಬಳಿಯೇ ಇದೆ ಎಂದು ಹೇಳಲಾಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link