Stock Market: ಷೇರು ಮಾರುಕಟ್ಟೆಯಲ್ಲಿ ಸುಲಭವಾಗಿ ಹಣ ಗಳಿಸುವುದು ಹೇಗೆ..?
ನೀವು ಷೇರು ಮಾರುಕಟ್ಟೆಯಲ್ಲಿ 100% ದುಡ್ಡು ಮಾಡಬಹುದು. ಇದಕ್ಕೆ ಚೆನ್ನಾಗಿ ಅಧ್ಯಯ ಮಾಡಬೇಕು. ಉತ್ತಮ ಷೇರುಗಳು ಯಾವವು ಎಂಬುದನ್ನು ನೀವು ಕಂಡುಹಿಡಿಯಬೇಕು. ಇದಕ್ಕೆ ನಿಮ್ಮ ಬುದ್ಧಿವಂತಿಕೆ ಬಳಸಬೇಕಾಗುತ್ತದೆ. ಅಳೆದು ತೂಗಿ ನೀವು ಹೂಡಿಕೆ ಮಾಡಬೇಕಾಗುತ್ತದೆ.
ನೀವು ಷೇರು ಮಾರುಕಟ್ಟೆಯಲ್ಲಿ ಹಣ ಗಳಿಸಬೇಕು ಅಂದ್ರೆ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡಬೇಕು. Fundamentally Strong ಆಗಿರುವ ಷೇರುಗಳಲ್ಲಿ ನೀವು ಹೂಡಿಕೆ ಮಾಡಿದರೆ ಉತ್ತಮ ಲಾಭ ಗಳಿಸಬಹುದು. ಹೀಗಾಗಿ ಯಾವುದು ಉತ್ತಮ ಷೇರು ಅನ್ನೋದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು.
ನೀವು ಹೆಚ್ಚು ಹೆಚ್ಚು ಹಣ ಗಳಿಸಬೇಕು ಅನ್ನೋ ಗುರಿ ಹೊಂದಿದ್ದರೆ ದೀರ್ಘಾವಧಿಯವರೆಗೆ ಉತ್ತಮ ಷೇರುಗಳಲ್ಲಿ ಹೂಡಿಕೆ ಮಾಡಬೇಕು. ಎಷ್ಟು ದೀರ್ಘಾವಧಿ ಹೂಡಿಕೆ ಮಾಡುತ್ತೀರೋ ಅಷ್ಟು ಲಾಭ ನಿಮಗೆ ಸಿಗುತ್ತದೆ. ತಾಳ್ಮೆಯಿಂದ ಮಾಡುವ ದೀರ್ಘಾವಧಿ ಹೂಡಿಕೆ ನಿಮಗೆ ಉತ್ತಮ ಆದಾಯ ತಂದುಕೊಡುತ್ತದೆ.
ನೀವು ಅತಿಹೆಚ್ಚು ಲಾಭಾಂಶ ನೀಡುವ ಷೇರುಗಳು ಅಂದರೆ High Dividend Yield Stocksಗಳಲ್ಲಿ ಹೂಡಿಕೆ ಮಾಡಿ. ಇಂತಹ ಷೇರುಗಳಲ್ಲಿ ಹೂಡಿಕೆ ಮಾಡುವುದರಿಂದ ನಿಮಗೆ ವರ್ಷದಲ್ಲಿ ನಾಲ್ಕೈದು ಬಾರಿ ಕಂಪನಿಯು ಡಿವಿಡೆಂಟ್ ನೀಡುತ್ತದೆ. ಇದರಿಂದ ನಿಮಗೆ ಉತ್ತಮ ಆದಾಯ ಗಳಿಸಲು ಸಾಧ್ಯವಾಗುತ್ತದೆ. ಅತ್ತ ಷೇರು ಮೇಲಕ್ಕೆ ಹೋದರೆ ನಿಮಗೆ ಉತ್ತಮ ಲಾಭವೂ ಸಿಗುತ್ತದೆ, ಇತ್ತ ಡಿವಿಡೆಂಟ್ ಹಣವೂ ನಿಮಗೆ ಸಿಗುತ್ತದೆ.
ಸಣ್ಣ ಮೊತ್ತದ ಷೇರುಗಳಲ್ಲಿ ಮತ್ತು fundamentally strong ಇಲ್ಲದ ಷೇರುಗಳಲ್ಲಿ ಹೂಡಿಕೆ ಮಾಡಬಾರದು. ಇಂತಹ ಷೇರುಗಳಲ್ಲಿ ನೀವು ಹೂಡಿಕೆ ಮಾಡಿದ್ರೆ ನೀವು ಕೈಸುಟ್ಟುಕೊಳ್ಳಬೇಕಾಗುತ್ತದೆ. ಹೆಚ್ಚು ಸಾಲವಿರುವ ಕಂಪನಿಗಳ ಬಗ್ಗೆಯೂ ನೀವು ಎಚ್ಚರಿಕೆ ವಹಿಸಬೇಕು. ಹೀಗಾಗಿ ನೀವು ಹೂಡಿಕೆ ಮಾಡುವ ಕಂಪನಿಯ Balance sheet ಪರಿಶೀಲಿಸುವುದು ಸೂಕ್ತ.