ಇದು ಮನೆಯೋ… ಅರಮನೆಯೋ! ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ಭವ್ಯ ಬಂಗಲೆ ಎಷ್ಟೊಂದು ಅದ್ಭುತವಾಗಿದೆ ನೋಡಿ
ಕ್ರಿಕೆಟ್ ಜಗತ್ತು ಕಂಡ ಕೆಲವೊಂದಿಷ್ಟು ಮಾದರಿ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು. ಇಂದು ವಿರಾಟ್ 36ನೇ ವರ್ಷಕ್ಕೆ ಕಾಲಿಟಿದ್ದಾರೆ. ವಿರಾಟ್ ತಮ್ಮ ವೃತ್ತಿಜೀವನದಲ್ಲಿ ಮಾಡಿರುವ ಸಾಧನೆ ಅಂತಿಂಥದಲ್ಲ. ಅದಕ್ಕೆ ಉದಾಹರಣೆ ಎಂಬಂತೆ, ವಿರಾಟ್ ಅವರನ್ನು ಫುಟ್ಬಾಲ್ ವೀರ ರೊನಾಲ್ಡೋ, ಟೆನ್ನಿಸ್ ಶ್ರೇಷ್ಠ ರೋಜರ್ ಫೆಡರರ್ ಅವರಿಗೆ ಕೊಹ್ಲಿಯನ್ನು ಹೋಲಿಸಲಾಗುತ್ತದೆ.
ಇನ್ನು ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಪವರ್ ಕಪಲ್ ಎಂದೇ ಕರೆಯಲಾಗುತ್ತದೆ. ಈ ಜೋಡಿಗೆ ಸಾಕಷ್ಟು ಫ್ಯಾನ್ ಫಾಲೋವಿಂಗ್ ಇದ್ದು, ಇವರ ಜೀವನಶೈಲಿಯೂ ಸಖತ್ ಅದ್ಧೂರಿಯಾಗಿದೆ.
ಭಾರತದ ಶ್ರೀಮಂತ ಸೆಲೆಬ್ರಿಟಿ ಜೋಡಿಗಳ ಪಟ್ಟಿಯಲ್ಲಿರುವ ವಿರುಷ್ಕಾ ಸಾವಿರ ಕೋಟಿ ಆಸ್ತಿಯ ಒಡೆಯರು. ಕೇವಲ ವಿರಾಟ್ ಕೊಹ್ಲಿ ಹೆಸರಲ್ಲೇ 1000 ಕೋಟಿ ಆಸ್ತಿ ಇದೆ ಎಂದು ಕೆಲ ಮೂಲಗಳು ಹೇಳುತ್ತವೆ.
ವರದಿಯ ಪ್ರಕಾರ, ವಿರಾಟ್ ಮತ್ತು ಅನುಷ್ಕಾ ಅವರ ಒಟ್ಟು ಸಂಪತ್ತು ಒಟ್ಟು 1200 ಕೋಟಿ ರೂ. ಇಬ್ಬರೂ ಮುಂಬೈ ಮತ್ತು ಅನೇಕ ದೊಡ್ಡ ನಗರಗಳಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದಾರೆ.
ಮುಂಬೈನ ವರ್ಲಿಯಲ್ಲಿ ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಅತ್ಯಂತ ಐಷಾರಾಮಿ ಫ್ಲಾಟ್ ಹೊಂದಿದ್ದಾರೆ. ಜೊತೆಗೆ ಹರಿಯಾಣದ ಗುರುಗ್ರಾಂನಲ್ಲಿರುವ ಕೂಡ ಬೇಕಾದಷ್ಟು ಆಸ್ತಿ ಮಾಡಿದ್ದಾರಂತೆ ಈ ಜೋಡಿ.
ದೆಹಲಿಗೆ ಹೊಂದಿಕೊಂಡಿರುವ ಗುರುಗ್ರಾಮದಲ್ಲಿ ವಿರಾಟ್ ಮತ್ತು ಅನುಷ್ಕಾಗೆ ಸೇರಿದ ಐಷಾರಾಮಿ ಮನೆಯಿದೆ. ಇದನ್ನು ನೋಡಿದರೆ ಮನೆಯೋ! ಅರಮನೆಯೋ! ಅನ್ನುವಂತಿದೆ.
ಗುರುಗ್ರಾಂನ ಡಿಎಫ್‌ಎಲ್‌ಸಿಟಿ 1 ನೇ ಹಂತದಲ್ಲಿ ಈ ಮನೆಯಿದ್ದು, ಇದರ ಬೆಲೆ ಸುಮಾರು 80 ಕೋಟಿ ರೂ. ಎನ್ನಲಾಗಿದೆ. ಅಂದಹಾಗೆ ಇದನ್ನು ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಕಾನ್ಫ್ಲುಯೆನ್ಸ್ ವಿನ್ಯಾಸಗೊಳಿಸಿದ್ದಾರೆ.