ಸಿರೀಯಲ್‌ನಲ್ಲಿ ಮಾತ್ರವಲ್ಲ.. ನಿಜಜೀವನದಲ್ಲೂ ಈ ಆರೋಗ್ಯ ಸಮಸ್ಯೆ ಕಾಡ್ತಿದೆಯಂತೆ ಸೀತಾರಾಮ ಪ್ರಿಯಾಗೆ! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ
ಜೀ ಕನ್ನಡದಲ್ಲಿ ಮೂಡಿಬರುತ್ತಿರುವ ಸೀತಾ ರಾಮ ಸಿರೀಯಲ್ ಅದ್ಭುತ ಕಥಾಹಂದರದ ಮೂಲಕ ಅನೇಕ ಪ್ರೇಕ್ಷಕರ ಹೃದಯ ಗೆದ್ದಿದೆ.. ಪ್ರತಿಯೊಂದು ಪಾತ್ರವೂ ನೋಡುಗರಿಗೆ ಇಷ್ಟವಾಗಿದೆ ಎಂದರೇ ತಪ್ಪಾಗುವುದಿಲ್ಲ..
ಇನ್ನು ಈ ಸೀತಾ ರಾಮ ಸಿರೀಯಲ್‌ನಲ್ಲಿ ಪ್ರಿಯಾ ಪಾತ್ರವೆಂದರೇ ಎಲ್ಲರಿಗೂ ಅಚ್ಚುಮೆಚ್ಚು.. ಯಾವಾಗಲೂ ಪಟಪಟ ಅಂತ ಮಾತಡುವ ಪ್ರಿಯಾ ರಾಮನ ಗೆಳೆಯ ಅಶೋಕ್‌ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ..
ನಾಯಕಿ ಸೀತಾಳ ಗೆಳತಿಯಾಗಿರುವ ಪ್ರಿಯಾಗೆ ಒಳ್ಳೆ ಮನಸಿದೆ.. ಎಲ್ಲರನ್ನು ಸ್ನೇಹದಿಂದ ನೋಡುವ ಪ್ರಿಯಾಗೆ ಸದ್ಯ ಗಂಭೀರ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲಾಗ್ತಿದೆ. ಆದರೆ ಈ ವಿಚಾರ ಆಕೆಗೆ ಗೊತ್ತಿಲ್ಲ.. ಹೌದು ಮಗು ಬೇಕೆಂದು ಆಸೆ ಪಡುತ್ತಿದ್ದ ಪ್ರಿಯಾಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದರೇ ಏನಾಗುತ್ತದೋ ಎಂದು ಅಶೋಕ್ ಆ ವಿಚಾರವನ್ನು ಮುಚ್ಚಿಟ್ಟಿದಾರೆ..
ಪ್ರಿಯಾ ಪಾತ್ರಧಾರಿ ವೈಯಕ್ತಿಕ ಜೀವನಕ್ಕೆ ಬರುವುದಾರೇ ಇವರ ನಿಜವಾದ ಹೆಸರು ಮೇಘನಾ ಶಂಕರಪ್ಪ.. ಸಿರೀಯಲ್ ಜೊತೆಗೆ DKDಯಲ್ಲೂ ನಟಿ ಮಿಂಚುತ್ತಿದ್ದಾರೆ.. ಆದರೆ ಇದೀಗ ನಟಿ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಏಕಾಏಕಿ ತಾವು ಕೆಲ ದಿನಗಳ ಕಾಲ ಸಿರೀಯಲ್ ಹಾಗೂ DKDಯಿಂದ ಬ್ರೇಕ್ ತೆಗೆದುಕೊಳ್ಳುವುದಾಗಿ ನಟಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಅಲ್ಲದೇ ಇದಕ್ಕೆ ಕಾರಣವನ್ನೂ ನಟಿ ಹೇಳಿದ್ದಾರೆ..
ಅನಾರೋಗ್ಯದ ಕಾರಣ ನಾನು ಕೆಲ ದಿನಗಳವರೆಗೆ ಸೀತಾರಾಮ ಹಾಗೂ dkd ರಿಯಾಲಿಟಿ ಶೋನಿಂದ ದೂರ ಉಳಿಯಲಿದ್ದೇನೆ.. ಎಂದು ಹೇಳಿದ್ದಾರೆ.. ಅಲ್ಲದೇ ನಟಿ ಕಣ್ಣಿನ ಮೇಲೆ ಗಾಯವಾಗಿರುವ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.. ಆದರೆ ಏನು ಆರೋಗ್ಯ ಸಮಸ್ಯೆ ಎನ್ನುವುದನ್ನು ನಟಿ ಸ್ಪಷ್ಟವಾಗಿ ಹೇಳಿಲ್ಲ.. ಇದನ್ನು ನೋಡಿದ ನೆಟಿಜನ್ಸ್ ಪ್ರಿಯಾಗೆ ಏನಾಯ್ತು ಎಂದು ಶಾಕ್ ಆಗಿದ್ದಾರೆ..